ಪುತ್ತೂರು ಶಾಸಕ‌ ಅಶೋಕ್ ರೈ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಮತ್ತೆ ವಾಗ್ದಾಳಿ

ಪುತ್ತೂರು ಶಾಸಕ‌ ಅಶೋಕ್ ರೈ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಮತ್ತೆ ವಾಗ್ದಾಳಿ

ಅತ್ಯಾಚಾರ ಪ್ರಕರಣವನ್ನ ರಾಜಿ ಪಂಚಾಯತಿಯಲ್ಲಿ ಮುಗಿಸುವುದಾದ್ರೆ ಮತ್ತೆ ಕೋರ್ಟ್, ಪೊಲೀಸ್ ಠಾಣೆ ಯಾಕೆ?

ಪೊಲೀಸ್ ಠಾಣೆಗೆ ಸಂತ್ರಸ್ತೆ ಕೇಸ್ ಕೊಡಲು ಬಂದಾಗ ಸಂತ್ರಸ್ತೆಯ ಹೇಳಿಕೆಯನ್ನ ಗಮನಿಸಿ ಪೊಲೀಸರು ತನಿಖೆ ಮಾಡಬೇಕಿತ್ತು

ಹಾಗಿರುವಾಗ ಅದಕ್ಕೆ ಶಾಸಕರು ಆಗಲಿ ಬೇರೆ ನಾಯಕರಾಗಲಿ ಹಸ್ತಕ್ಷೇಪ ಮಾಡೋದು ಸರಿಯಲ್ಲ

ಕಾನೂನಿನ ಮುಖಾಂತರ ಆಗೋದನ್ನ ರಾಜಿ ಪಂಚಾಯತಿ ಮಾಡೋದು ಎಷ್ಟು ಸರಿ?

ಸುಳ್ಯದ ಹಿಟ್ & ರನ್ ಕೇಸ್ ನಲ್ಲಿ ಆರೋಪಿ ಸಿಕ್ಕಿಲ್ಲ ಎಂದಾಗ ತಂದೆಯನ್ನ ಎಳೆದು ತನ್ನಿ ಎಂದು ಅಶೋಕ್ ರೈ ಪೊಲೀಸರಿಗೆ ಒತ್ತಡ ಹಾಕ್ತಾರೆ

ಹಾಗಾದ್ರೆ ಈ ಅತ್ಯಾಚಾರ ಪ್ರಕರಣದಲ್ಲಿ ಅಶೋಕ್ ರೈ ಯಾಕೆ ಪೊಲೀಸರಿಗೆ ಒತ್ತಡ ಹಾಕ್ತಿಲ್ಲ

ಅತ್ಯಾಚಾರಿ ಆರೋಪಿ ತಪ್ಪಿಸಲು ಶಾಸಕ ಅಶೋಕ್ ರೈ ಕಾರಣ ಅಲ್ವಾ?

ಪೊಲೀಸ್ ಠಾಣೆಗೆ ಸಂತ್ರಸ್ತೆ ಕೇಸ್ ದಾಖಲಿಸಲು ಬಂದಾಗ ಪೊಲೀಸರೇ ಎಲ್ಲವನ್ನ ನೊಡ್ಕೊಳ್ಳಲಿ ಎಂದು ಬಿಡಬೇಕಿತ್ತು

ಬದಲಾಗಿ ಆರೋಪಿಯ ಮಾತನ್ನು ಅಶೋಕ್ ರೈ ಭರವಸೆ ಕೊಟ್ಟಿದ್ದೇಕೆ?

ಯಾವತ್ತಾದ್ರೂ ಆರೋಪಿಗಳು ಸತ್ಯ ಹೇಳ್ತಾರಾ?

ಆರೋಪಿಗಳು ಆತ್ಮ ರಕ್ಷಣೆಗೆ ತಪ್ಪಿಸಿಕೊಳ್ಳಲು ಸುಳ್ಳನ್ನೇ ಹೇಳೋದು ಅದು ಗೊತ್ತಿಲ್ವ

ಅಶೋಕ್ ರೈ ಆರೋಪಿ ತಂದೆಯ ಮಾತನ್ನ ಕೇಳಿ ಸಂತ್ರಸ್ತೆಗೆ ಭರವಸೆ ಕೊಟ್ಟಿದ್ದೇಕೆ?

ಭರವಸೆ ಕೊಟ್ಟಮೇಲೆ ಮದುವೆ ಮಾಡಿಸಿಕೊಡಬೇಕಿತ್ತು

ಇನ್ನೂ ಕಾಲ ಮಿಂಚಿಲ್ಲ ಮಗುವಿನ ಕುಟುಂಬ ಹಾಗೂ ಆರೋಪಿಯ ಕುಟುಂಬ ಎಲ್ಲರೂ ಇದ್ದಾರೆ

ಕೂಡಲೇ ಮಗುವನ್ನು ಆರೋಪಿ ತಂದೆಯ ಮನೆಗೆ ಒಪ್ಪಿಸುವ ಕೆಲಸ ಮಾಡಲಿ

ಇದರ ಜವಾಬ್ದಾರಿ ಶಾಸಕ ಅಶೋಕ್ ಕುಮಾರ್ ರೈ

ಆರೋಪಿ ಕೃಷ್ಣ ಜೆ ರಾವ್ ತಪ್ಪಿಸಲು ಶಾಸಕರು ಕಾರಣ ಅಲ್ವಾ?

ಅವತ್ತೇ ಆರೋಪಿಯನ್ನು ಬಂಧಿಸಲು ಸೂಚಿಸಿದ್ದಿದ್ರೆ ಇವತ್ತು ಇಂತಹ ಪರಿಸ್ಥಿತಿ ಇರಲಿಲ್ಲ

ಆರೋಪಿ ಎಲ್ಲಿಯೂ ತಪ್ಪಿಸಿಕೊಂಡು ಓಡಿ ಹೋಗಿಲ್ಲ

ಪುತ್ತೂರಿನ ಕಾಂಗ್ರೆಸ್ ನಾಯಕರ ಮನೆಯನ್ನ ಸರ್ಚ್ ಮಾಡಿದ್ರೆ ಆರೋಪಿ ಸಿಗ್ತಾನೆ

ಈ ಬಗ್ಗೆ ಪುತ್ತೂರಿನ ಬ್ಲಾಕ್ ಕಾಂಗ್ರೆಸ್ ಯಾಕೆ ಮಾತಾಡ್ತಿಲ್ಲ

ಮಹಿಳಾ ಕಾಂಗ್ರೆಸ್ ಎಲ್ಲಿದೆ, ಎನ್ ಎಸ್ ಯುಐ ಎಲ್ಲಿದೆ?

ಮಂಗಳೂರಿನಿಂದ ಪ್ರತಿಭಾ ಕುಳಾಯಿ ಬಂದು ಪುತ್ತೂರಿನಲ್ಲಿ ಮಾತಾಡ್ತಾರೆ

ಹಾಗಾದ್ರೆ ಪುತ್ತೂರಿನ ಕಾಂಗ್ರೆಸ್ ಎಲ್ಲಿದೆ

ಬಿಜೆಪಿಯ ನಗರಸಭೆ ಸದಸ್ಯನ ವಿಚಾರದಲ್ಲಿ ಬಿಜೆಪಿಯವರೇ ಮಾತಾಡ್ತಾ ಇಲ್ಲ

ಹಾಗಾದ್ರೆ ಬಿಜೆಪಿ ಸದಸ್ಯನ ವಿಚಾರದಲ್ಲಿ ಕಾಂಗ್ರೆಸ್ ಶಾಸಕನ ಕೆಲಸ ಏನು?

ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೋಗುವುದು ಎಂದು ಅಶೋಕ್ ರೈ ತಿಳಿದುಕೊಂಡಿದ್ದಾರೆ

ಇದು ಅವರೊಂದು ಈಗ ಮೊದಲ ಹೆಜ್ಜೆ ಇಟ್ಟಿರುವುದು

ಅಶೋಕ್ ರೈ ಕಾಂಗ್ರೆಸ್ ಪರವಾಗಿಲ್ಲ ಎಂದು ಹಿಂದೆಯೊಮ್ಮೆ‌ ಹೇಳಿದ್ದೆ

ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಈಗಲೂ ದೊರಕಿಸಿ ಕೊಡಬಹುದು

ಕೇಸ್ ಆದ್ರೂ ಮದುವೆ ಮಾಡಿಸಬಹುದು

ಕೇಸ್ ಕೋರ್ಟ್ ನಲ್ಲಿದ್ದರೂ ಮದುವೆ ಆಗಬಾರದು ಎಂದೇನಿಲ್ಲ

ಮದುವೆ ಆದ ಬಳಿಕ ಕೇಸ್ ತೆಗೆಯಬಹುದು

ಇದು ಶಾಸಕರು ಪೊಲೀಸ್ ಇಲಾಖೆಗೆ, ಸಂತ್ರಸ್ತೆ ಕುಟುಂಬಕ್ಕೆ ಒತ್ತಡ ಹಾಕಿಲ್ಲಂದ್ರೆ ಇವತ್ತು ಆ ಸಂತ್ರಸ್ತೆಗೆ ಮದುವೆ ಆಗಿ ಗಂಡನ ಜೊತೆ ಒಟ್ಟಾಗಿ ಇರುತ್ತಿದ್ದರು

ಈಗ ಮಗುವಿಗೆ ತಂದೆ ಇಲ್ಲದೆ ಇರಲು ಕಾರಣ ಶಾಸಕ ಅಶೋಕ್ ರೈ

ಶಾಸಕರ ಮೇಲೆ ವೈಯಕ್ತಿಕವಾಗಿ ನನಿಗೆ ಕೋಪ‌ ಇಲ್ಲ

ಕೆಲವು ವಿಚಾರವನ್ನ ಕೈ ಹಾಕುವಾಗ ಶಾಸಕರು ಆಲೋಚಣೆ ಮಾಡಿಕೊಳ್ಳಬೇಕು

ಇಲ್ಲದಿದ್ದರೆ ಯಾರಾದ್ರೂ ಸಲಹೆಗಾರರನ್ನು ಇಟ್ಟುಕೊಳ್ಳಬೇಕು

ಅದು ಬಿಟ್ಟು ಬೇಡದ ವಿಚಾರಕ್ಕೆ ಶಾಸಕರು ಕೈ ಹಾಕಿದ್ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ಆಗುತ್ತೆ

ಅಶೋಕ್ ರೈ ಪಕ್ಷ ಕಟ್ಟಿಲ್ಲ, ಅವರು ಬಂದು ಎರಡು ವರ್ಷ ಆಗಿರೋದಷ್ಟೇ

News Editor

Learn More →

Leave a Reply

Your email address will not be published. Required fields are marked *