ಪುತ್ತೂರು ತಾಲೂಕಿನ ಹಲವು ಕಡೆ ಪ್ರಾಕೃತಿಕ ವಿಕೋಪಗಳ ಹಾಗೂ ಹಲವು ಸಮಸ್ಯೆಗಳ ಬಗ್ಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರನ್ನು ಬೇಟಿ ಮಾಡಿ ಚರ್ಚಿಸಲಾಯಿತು.

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ, ಹಿರೇಬಂಡಾಡಿ, ನರಿಮೊಗರು ಸಹಿತ ಹಲವು ಕಡೆ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತ , ಮನೆಗಳ ಕುಸಿತ ಹಾಗೂ ಹಲವಾರು ಮನೆಗಳು ಬೀಳುವ ಹಂತದಲ್ಲಿ ರುತ್ತದೆ. ಹಾಗಾಗಿ ನೆರೆ ಹಾವಳಿಯಿಂದ ಸಾಕಷ್ಟು ಬಡ ಕುಟುಂಬಗಳು ಬೀದಿ ಪಾಲಾಗಿದ್ದು ಇದುವರೆಗೆ ಸರಿಯಾದ ಸವಲತ್ತು ದೊರಕಿರುವುದಿಲ್ಲ ಎನ್ನುವುದನ್ನು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಮರಳು , ಕೆಂಪು ಕಲ್ಲು, ಜಲ್ಲಿ ಈ ಸಾಮಾಗ್ರಿಗಳ ಕಾನೂನಿನಲ್ಲಿ ವ್ಯತ್ಯಾಸ ಪಡಿಸಿರುವುದರಿಂದ ಜನಸಾಮಾನ್ಯರು ಮತ್ತು ಕಟ್ಟಡ ಕಾರ್ಮಿಕರು ತೊಂದರೆಗೆ ಒಳಗಾಗಿದ್ದಾರೆ ಅದ್ದರಿಂದ ಕಾನೂನನ್ನು ಸಡಿಲಗೊಳಿಸಿ ಸಮರ್ಪಕ ರೀತಿಯಲ್ಲಿ ಪೂರೈಕೆಯಾಗುವಂತೆ ಅನುಮತಿ ನೀಡಬೇಕೆಂದು ಸಾರ್ವಜನಿಕರ ಪರವಾಗಿ ಚರ್ಚಿಸಿದರು.

ತಾಲೂಕಿನಾದ್ಯಂತ ರೈತರಿಗೆ ವಿಪರೀತ ಆನೆಗಳ ಹಾವಳಿಯಿಂದ ಬೆಳೆ ನಾಶ ವಾಗಿರುತ್ತದೆ ಮತ್ತು ಜೀವ ಹಾನಿಯಿಂದ ಜನರು ಭಯಬೀತರಾಗಿರುತ್ತಾರೆ. ಅದಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಲಾಯಿತು.

ಜನಸಾಮಾನ್ಯರಿಗೆ ತಮ್ಮ ಜಾಗದ 9/11 ರೆರ್ಕಾಡ್ ಗ್ರಾಮಪಂಚಾಯತಿನಿಂದ ದೊರಕುತ್ತಿದ್ದು ಅದನ್ನು ಪೂಡಾಕ್ಕೆ ವರ್ಗಾವಣೆ ಮಾಡಿರುವುದರಿಂದ ನಾಗರಿಕರು ವಿಪರೀತ ತೊಂದರೆಗೆ ಒಳಗಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಗೆ ಜನಸಮಾನ್ಯರ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದೆ.

ಈ ಎಲ್ಲಾ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ಮನವಿಯನ್ನು ಮಾಡುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಪುತ್ತಿಲ ಪರಿವಾರ ಸಂಚಾಲಕರಾದ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಮಹೇಂದ್ರ ವರ್ಮಾ , ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ರೈ , ಪುತ್ತೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಆರ್ಯಾಪು ಮಹಾಶಕ್ತಿ ಕೇಂದ್ರ ಸಂಚಾಲಕರಾದ ಪ್ರಜ್ವಲ್ ಘಾಟೆ, ಸೇವಾ ಟ್ರಸ್ಟ್ ನ ಖಜಾಂಜಿ ಗಣೇಶ್ ಮಕರಂದ ಜಿಲ್ಲಾಧಿಕಾರಿ ಭೇಟಿ ಸಂದರ್ಭ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *