
ಜಮ್ಮುವಿನ ರಾಜರಿ ಪಟ್ಟಣದ ಮೇಲೆ ಅಪ್ಪಳಿಸಿದ ಪಾಕಿಸ್ತಾನಿ ಶೆಲ್ ದಾಳಿಯಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸಲಾಗಿದೆ.
ರಾಜರಿ ಪಟ್ಟಣವನ್ನು ಗುರಿಯಾಗಿಸಿಕೊಂಡು ಪಾಕ್ ಶೆಲ್ ದಾಳಿ ನಡೆಸಿದೆ. ಪರಿಣಾಮ ನಮ್ಮ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜ್ ಕುಮಾರ್ ಥಾಪ್ಪಾ ಸಾವನ್ನಪ್ಪಿದ್ದಾರೆ.
ಭಾರತ, ಪಾಕಿಸ್ತಾನ ನಡುವೆ ಸಶಸ್ತ್ರ ಸಂಘರ್ಷ ಉಂಟಾಗಿದೆ. ಪಾಕಿಸ್ತಾನದಿಂದ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಡ್ರೋನ್ ದಾಳಿ ಮುಂದುವರಿದಿದೆ. ಇತ್ತ ಪಾಕ್ಗೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ.
ಜಮ್ಮು, ಶ್ರೀನಗರ, ಅವಂತಿಪೋರಾ, ಸಾಂಬಾ ಮತ್ತು ಪಠಾಣ್‌ಕೋಟ್‌ಗಳಲ್ಲಿ ಪಾಕ್ ಇಂದು ಸಂಜೆ ಡ್ರೋನ್ ದಾಳಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಪಠಾಣ್‌ಕೋಟ್‌ನಲ್ಲಿ ಬ್ಲಾಕೌಟ್ ಸಮಯದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಚಂಡೀಗಢ, ರೂಪನಗರ, ಪಠಾಣ್‌ಕೋಟ್ ಮತ್ತು ಬ್ಲಾಕೌಟ್ ಜಾರಿಗೊಳಿಸಲಾದ ಇತರ ಜಿಲ್ಲೆಗಳಲ್ಲಿ ಸೈರನ್‌ಗಳು ಕೇಳಿಬರುತ್ತಿವೆ ಎಂದು ಎಂದು ತಿಳಿದುಬಂದಿದೆ.
ಎಲ್‌ಒಸಿಯಲ್ಲಿ ಪೂಂಚ್ ಮತ್ತು ತಂಗ್‌ಧರ್ ಸೆಕ್ಟರ್‌ಗಳಲ್ಲಿ ಭಾರೀ ಗುಂಡಿನ ದಾಳಿ: ಪೂಂಚ್ ಸೆಕ್ಟರ್‌ನ ದಿಗ್ವಾರ್ ಪ್ರದೇಶದಲ್ಲಿ ಮತ್ತು ಕುಪ್ವಾರಾ ಜಿಲ್ಲೆಯ ತಂಗ್‌ಧರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಶೆಲ್ ಮತ್ತು ಗುಂಡಿನ ದಾಳಿ ಪ್ರಾರಂಭವಾಗಿದೆ. ಶೆಲ್ ದಾಳಿ ಪ್ರಾರಂಭವಾದ ತಕ್ಷಣ, ಇಲ್ಲಿನ ಜನರು ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಭಾರತೀಯ ಸೇನೆಯು ಸಹ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಹೆಚ್ಚಿನ ಜನರನ್ನು ಈಗಾಗಲೇ ಈ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ, ಆದರೆ ಹಿಂದೆ ಉಳಿದವರು ಬಂಕರ್‌ಗಳಲ್ಲಿ ರಕ್ಷಣೆ ಪಡೆದಿದ್ದಾರೆ


