ಮಂಗಳೂರು ; ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ R.B.I ಶಾಕ್,5 ಲಕ್ಷ ದಂಡ

ಮಂಗಳೂರು ; ಎಲ್ಲಾ ಸರಿ ಅನ್ನೋ ರಾಜೇಂದ್ರ ಕುಮಾರ್ ಬ್ಯಾಂಕ್ ಗೆ RBI ದಂಡ ವಿಧಿಸಿದೆ. ಅದೂ ಕೂಡ ಕಾನೂನು ಉಲ್ಲಂಘಿಸಿ ನಿರ್ದೇಶಕರುಗಳಿಗೆ ಸಾಲ ನೀಡಿದ ವಿಚಾರವಾಗ ಈ ದಂಡ ವಿಧಿಸಲಾಗಿದೆ. ಹಾಗಿದ್ರೆ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಸಣ್ಣದೊಂದು ಅವ್ಯವಹಾರ ನಡೆದಿದೆ ಅನ್ನೋದನ್ನು RBI ಗಮನಕ್ಕೆ ಬಂದಿದೆ ಅಂತಾಯ್ತು. ಇನ್ನು ,RBI ಗಮನಕ್ಕೆ ಬಾರದ ಅದೆಷ್ಟು ಅವ್ಯವಹಾರಗಳು ಇದೆಯೋ ಗೊತ್ತಿಲ್ಲ.

ಸದ್ಯಕ್ಕೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಚ್ 26, 2025ರಂದು ಹೊರಡಿಸಿದ ಆದೇಶದ ಮೂಲಕ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (The South Canara District Central Co-operative Bank Ltd.), ಕರ್ನಾಟಕದ ಮೇಲೆ ₹5.00 ಲಕ್ಷದ ದಂಡವನ್ನು ವಿಧಿಸಿದೆ. ಈ ದಂಡವನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 (Banking Regulation Act, 1949) ನ ಪ್ರಸ್ತಾಪಿತ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿಧಿಸಲಾಗಿದೆ.

News Editor

Learn More →

Leave a Reply

Your email address will not be published. Required fields are marked *