
ಎ.ಎಸ್.ಕ್ಯೂ ಇಂಟರ್ ನ್ಯಾಷನಲ್ ಫುಡ್ ಆಂಡ್ ಬೇವೆರೇಜಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಎಚ್ ಇಂತಿಯಾಝ್ ಅವರ ನೇತೃತ್ವದಲ್ಲಿ ಹಳೆಕೋಟೆ ಮಸೀದಿಯ ಆವರಣದಲ್ಲಿ ಇಫ್ತಾರ್ ಕೂಟ ನಡೆಯಿತು.

ಕರ್ನಾಟಕ ರಾಜ್ಯ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲರ್ ಅಧ್ಯಕ್ಷ ಡಾ. ಯು.ಟಿ ಇಫ್ತಿಕಾರ್ ಫರೀದ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು


ಉಳ್ಳಾಲ ಸಯ್ಯದ್ ಮದನಿ ದರ್ಗಾ ಮಾಜಿ ಅಧ್ಯಕ್ಷ ಹಾಜಿ ರಶೀದ್ ಹಾಜಿ, ಮಾಜಿ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ತ್ವಾಹ, ನಗರ ಸಭೆ ಮಾಜಿ ಸದಸ್ಯ ಯು.ಎಚ್ ಫಾರೂಕ್, ಹಳೆಕೋಟೆ ಮಸ್ಜಿದುಲ್ ಕರೀಮ್ ಇದರ ಅಧ್ಯಕ್ಷ ಮೊಹಮ್ಮದ್ ಕೆ, ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯ ಮುಖ್ಯೋಪದ್ಯಾಯರಾದ ಕೆ.ಎಂ.ಕೆ ಮಂಜನಾಡಿ, ಹಳೆಕೋಟೆಡ್ರೀಮ್ಸ್ ಇಂಡಿಯಾ ಫೌಂಡೇಶನ್ ಇದರಸಫ್ವಾನ್ ಹಳೆಕೋಟೆಶೈನಿಂಗ್ ಸ್ಪೋರ್ಟ್ಸ್ ಕಾರ್ಯದರ್ಶಿ ಸಮೀರ್ ಉಳ್ಳಾಲ್,ಅಲ್ ಕರೀಂ ಮಸೀದಿಯ ಖತೀಬರಾದಸಿರಾಜುದ್ದೀನ್ ಸಖಾಫಿ , ಜಮಾಲ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು..ಇಫ್ತಾರ್ ಕೂಟದಲ್ಲಿ ಒಂದು ಸಾವಿರ ಮಂದಿ ಪಾಲ್ಗೊಂಡಿದ್ದರು.


