
ಬಂಟ್ವಾಳ: ಕಳೆದ 13 ದಿನಗಳ ನಾಪತ್ತೆಯಾಗಿ ಸಾಕಷ್ಟು ಗೊಂದಲ ಸೃಷ್ಟಿಸಿದ್ದ ದಿಗಂತ್ ಕೊನೆಗೂ ಪತ್ತೆಯಾಗಿದ್ದು, ಪೊಲೀಸರು ಕರೆ ತರುತ್ತಿದ್ದಾರೆ ಎನ್ನಲಾಗಿದೆ.
ಫೆ. 25ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ದಿಗಂತ್ ಬಳಿಕ ಹಿಂದಿರುಗಿ ಬಂದಿರಲಿಲ್ಲ. ರೈಲ್ವೇ ಹಳಿಯಲ್ಲಿ ಆತನ ಚಪ್ಪಲಿಗಳು, ಮೊಬೈಲ್ ಪತ್ತೆಯಾಗಿ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿತ್ತು. ಫರಂಗಿಪೇಟೆಯಲ್ಲಿ ಪ್ರತಿಭಟನೆ ನಡೆದು ಪೊಲೀಸರು ತನಿಖೆ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಮಂಗಳೂರು: ನಗರದ ಫರಂಗಿಪೇಟೆಯ ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ಪತ್ತೆಯಾಗಿದ್ದಾನೆ. ಅನೇಕ ದಿನಗಳ ಹಿಂದೆ ನಾಪತ್ತೆಯಾಗಿದ್ದ ದಿಗಂತ್ ಇದೀಗ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.
ಪಶ್ಚಿಮ ವಲಯ ಐ.ಜಿ ಅಮೀತ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ ಯತೀಶ್ ನೇತೃತ್ವದಲ್ಲಿ ಮತ್ತಷ್ಟು ತನಿಖೆ ತೀವ್ರಗೊಳಿಸಲಾಗಿತ್ತು. ಜಿಲ್ಲೆಯ ವಿವಿಧ ಠಾಣೆಗಳ ಸಬ್ ಇನ್ಸ್ ಪೆಕ್ಟರ್ ಗಳನ್ನು ಮತ್ತು ಜಿಲ್ಲೆಯ ವಿವಿಧ ಠಾಣೆಗಳ ಕ್ರೈಮ್ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿರುವ ಸಿಬ್ಬಂದಿಗಳನ್ನು ತನಿಖೆ ಕಾರ್ಯ ನಡೆಸುತ್ತಿದ್ದರು.
ಇದೀಗ ದಿಗಂತ್ ಪತ್ತೆಯಾಗಿದ್ದಾನೆ ಎಂದು ತಿಳಿಯಲಾಗಿದೆ.ಇಂದು ಬೆಳಿಗ್ಗೆಯಿಂದ ದಿಗಂತ್ ಪತ್ತೆಗಾಗಿ ಕೂಬಿಂಗ್ ಕಾರ್ಯ ಕೊಡ ನಡೆದಿತ್ತು.


