ದಕ್ಷಿಣ ಕನ್ನಡ ರಾಮ ಕ್ಷತ್ರಿಯ ಸಂಘಗಳ ಒಕ್ಕೂಟ

ದಿನಾಂಕ 04.03.2025 ರ ಸಾಯಂಕಾಲ 4.00 ರ ವೇಳೆಗೆ ದಕ್ಷಿಣ ಕನ್ನಡ ರಾಮ ಕ್ಷತ್ರಿಯ ಸಂಘಗಳ ಒಕ್ಕೂಟದ ವತಿಯಿಂದ ಸಭೆಯನ್ನು ಕರೆಯಲಾಯಿತು. ಇಂದಿನ ಸಭೆಯ ಅಧ್ಯಕ್ಷತೆಯನ್ನು ಶ್ರೀ ಸುರೇಶ್ ರಾವ್ ಕಾರ್ನಾಡ್ ಇವರು ವಹಿಸಿದರು. ಸಭೆಯಲ್ಲಿ ವಿವಿಧ ವಿಚಾರದ ಕುರಿತು ಚರ್ಚಿಸಲಾಯಿತು. ಏಳು ಸಂಘಗಳ ತಿಂಗಳುವಾರು ಸಮಿತಿ ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸುವುದು ಎಂದು ಚರ್ಚಿಸಲಾಯಿತು. ದಕ್ಷಿಣ ಕನ್ನಡ ಒಕ್ಕೂಟದ ಕಾರ್ಯಕಾರಿ ಸಮಿತಿಯಲ್ಲಿ ಒಕ್ಕೂಟವನ್ನು ಬಲಪಡಿಸುವ ದೃಷ್ಟಿಕೋನದಲ್ಲಿ ಒಕ್ಕೂಟದ ಹಿಂದಿನ ಪದಾದಿಕಾರಿಗಳಾಗಿರುವಂತಹ ಶ್ರೀ ಧರ್ಮ ಪ್ರಕಾಶ್, ಶ್ರೀ ರವೀಂದ್ರ.ಕೆ. ಡಾ. ರವೀಂದ್ರ, ಜೆಪ್ಪು,ಶ್ರೀ ಸೀತಾರಾಮ ಕೊಪ್ಪಲ್ , ಶ್ರೀಮತಿ ರೇಖಾ ಸುದೇಶ್ ರಾವ್ ಇವರನ್ನು ಸೇರ್ಪಡೆ ಮಾಡಲಾಯಿತು. ಮೂಡಬಿದ್ರೆ ಸಂಘದ ವಾರ್ಷಿಕ ಕಾರ್ಯಕ್ರಮದ ನಿಮಿತ್ತ ದಿನಾಂಕ ಮಾರ್ಚ್ 16 ರಂದು ನಡೆಯುವ ಪೂರ್ವ ಭಾವಿ ಸಭೆಗೆ ಒಕ್ಕೂಟದವತಿಯಿಂದ ಪದಾಧಿಕಾರಿಗಳು ಅಲ್ಲಿನ ಸಭೆಗೆ ಹಾಜರಾಗುವುದೆಂದು ತೀರ್ಮಾನಿಸಲಾಯಿತು. ಈಗಾಗಲೇ ಒಕ್ಕೂಟದ ವತಿಯಿಂದ ಮಾರ್ಚ್ 30 .03.2025 ರಂದು ಅಯೋಧ್ಯಾ,ಕಾಶಿ, ಪ್ರಯಾಗ್ ರಾಜ್, ಇತ್ಯಾದಿ ಸ್ಥಳಗಳ ಪ್ರವಾಸವನ್ನು ಹಮ್ಮಿಕೊಂಡಿದ್ದು ಸುಮಾರು 41 ಸದಸ್ಯರಿದ್ದು, ದಾರ್ಶನಿಕ ಪ್ರವಾಸದಲ್ಲಿ ಭಾಗವಹಿಸುವವರಿದ್ದು , ಸಮಾಜ ಬಾಂಧವರು ಇನ್ನಷ್ಟು ಜನರು ಈ ಪ್ರವಾಸದ ಬಗ್ಗೆ ಆಸಕ್ತಿ ತೋರಿದ ಪ್ರಯುಕ್ತ ಮುಂದಕ್ಕೆ ಇನ್ನಷ್ಟು ಹಲವಾರು ಧಾರ್ಮಿಕ ಕ್ಷೇತ್ರಗಳ ಪ್ರವಾಸ ಕೈ ಗೊಳ್ಳುವುದೆಂದು ಒಕ್ಕೂಟದ ವತಿಯಿಂದ ತೀರ್ಮಾನಿಸಲಾಯಿತು. ಇಂದಿನ ಸಭೆಯಲ್ಲಿ ಕಾರ್ಯದರ್ಶಿ ಶ್ರೀ ಜಿತೇಂದ್ರ, ಕೋಶಾಧಿಕಾರಿ ಶ್ರೀ ರವೀಂದ್ರ ರಾವ್ , ಗೌರವಾಧ್ಯಕ್ಷರು ಶ್ರೀ ಪ್ರಮೋದ್ ಆರ್ ನಾಯಕ್, ಶ್ರೀ ರವೀಂದ್ರ .ಕೆ, ಡಾ. ರವೀಂದ್ರ ಜೆಪ್ಪು, ಶ್ರೀ ಧರ್ಮ ಪ್ರಕಾಶ್, ಶ್ರೀ ಸಂದೀಪ್ ಮೂಡಬಿದ್ರೆ, ಶ್ರೀಮತಿ ಸುಜಾತ ಉಳ್ಳಾಲ, ಕು ಅಭಿಷೇಕ್ ಬಂಟ್ವಾಳ, ಹಾಗೂ ಶ್ರೀಮತಿ ರೇಖಾ ಸುದೇಶ್ ರಾವ್ ಉಪಸ್ಥಿತರಿದ್ದರು.

ಅಧ್ಯಕ್ಷರು/ಕಾರ್ಯದರ್ಶಿ

News Editor

Learn More →

Leave a Reply

Your email address will not be published. Required fields are marked *