
ನಿರ್ವಹಣೆ ಇಲ್ಲದ ಅಡಿಕೆ ತೋಟದಲ್ಲಿ ಅಪರಿಚಿತ ಶವ ಪತ್ತೆ
ಪುತ್ತೂರು ನಗರಸಭಾ ವ್ಯಾಪ್ತಿಯ ಪಾಂಗಳಾಯ ಎಂಬಲ್ಲಿ ಪತ್ತೆಯಾದ ಶವ
ಅಡಿಕೆ ಕದಿಯಲು ಬಂದು ಅಡಿಕೆ ಮರದಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು
ಅಡಿಕೆ ಮರವೇ ಅರ್ಧದಲ್ಲಿ ಮುರಿದು ಬಿದ್ದು ಸಾವನ್ನಪ್ಪಿರುವ ಶಂಕೆ
ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ
ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿ
ಸಾವನ್ನಪ್ಪಿರುವ ವ್ಯಕ್ತಿ ಸ್ಥಳೀಯನೇ ಆಗಿರುವ ಸಾಧ್ಯತೆ
ಪಾಂಗಳಾಯ ಅರಸು ಮುಂಡ್ಯತ್ತಾಯ ದೈವಸ್ಥಾನದ ಪರಿಸರದಲ್ಲಿರುವ ಅಡಿಕೆ ತೋಟ
ಈ ದೈವದ ವ್ಯಾಪ್ತಿಯಲ್ಲಿ ಕಳ್ಳತನ ಮತ್ತು ಅನಾಚಾರಗಳಿಗೆ ಅವಕಾಶವಿಲ್ಲ ಎನ್ನುವ ನಂಬಿಕೆ
ಇದೇ ಕಾರಣಕ್ಕೆ ಕದಿಯಲು ಬಂದಿರುವ ವ್ಯಕ್ತಿ ಅಡಿಕೆ ಮರ ತುಂಡಾಗಿ ಸಾವನ್ನಪ್ಪಿದ್ದಾನೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು


