
ಬೈಂದೂರು : ಉಡುಪಿ ಜಿಲ್ಲೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವು ಕಡೆ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಅದರಲ್ಲೂ ತ್ರಾಸಿ, ಮುಳ್ಳಿಕಟ್ಟೆ, ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿ ಯಾರ ಭಯವಿಲ್ಲದೆ ರಾಜ ರೋಷವಾಗಿ ಗಣಿಗಾರಿಕೆ ನಡೆಯುತ್ತಿದೆ,
ಗಣಿ ಇಲಾಖೆ, ಕಣ್ಣಿದ್ದು ಕುರುಡರಾಗಿ ವರ್ತಿಸುತ್ತಿದೆ, ಸರಕಾರದ ಬೊಕ್ಕಸಕ್ಕೆ ದೊಡ್ಡಮಟ್ಟ ನಷ್ಟವಾಗುತ್ತಿದ್ದರು ಇಲಾಖೆ ಮಾತ್ರ ಕುರುಡರಂತೆ ವರ್ತಿಸುವುದು ನೋಡಿದರೆ ಅನುಮಾನಕ್ಕೆ ಕಾರಣವಾಗಿದೆ, ಹಲವು ಕಡೆ ಸರಕಾರಿ ಜಾಗದಲ್ಲಿ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ನಡೆಯುತ್ತಿದೆ ತಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಮನವಿ ಮಾಡಿಕೊಂಡಿದ್ದಾರೆ.


