ಉಡುಪಿಯ ಅಪ್ರತಿಮ ಹುಲಿವೇಷದಾರಿ ಅಶೋಕ್‌ ರಾಜ್ ಕಾಡಬೆಟ್ಟು ಇನ್ನಿಲ್ಲ

ಉಡುಪಿ: ಫೆ.01:   ಉಡುಪಿಯ ಅಪ್ರತಿಮ ಹುಲಿವೇಷದಾರಿ ಕಾಡಬೆಟ್ಟು ಹುಲಿ ವೇಷ ತಂಡದ ಮುಖ್ಯಸ್ಥರಾದ ಅಶೋಕ್‌ರಾಜ್ ಕಾಡಬೆಟ್ಟು(56)  ಅಸೌಖ್ಯದಿಂದ ಫೆಬ್ರವರಿ 1` ರಂದು ನಿಧನರಾಗಿದ್ದಾರೆ.

ಕಳೆದ ನವರಾತ್ರಿಯಂದು ಬೆಂಗಳೂರಿಗೆ ಹುಲಿವೇಷದ ಪ್ರದರ್ಶನ ನೀಡಲು ಹೋಗಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದ ಅಶೋಕ್ ರಾಜ್ ಅವರು ಚಿಕಿತ್ಸೆಗಾಗಿ ಬೆಂಗಳೂರು, ಮಣಿಪಾಲ, ಉಡುಪಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಚಿಕಿತ್ಸೆ ಫಲಕಾರಿಯಾಗದೆ ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ಕೊನೆಯುಸಿರೆಳೆದರು. ಹುಲಿವೇಷ ಕುಣಿತದಲ್ಲಿ ಜನಮನಗೆದ್ದ ಅಶೋಕ್ ಕಾಡಬೆಟ್ಟು ಅವರ ಅಂತ್ಯಸಂಸ್ಕಾರ ನಾಳೆ ನಡೆಯಲಿದೆ  ಎಂದು ಕುಟುಂಬದ ಮೂಲಗಳು ತಿಳಿಸಿವೆ.

News Editor

Learn More →

Leave a Reply

Your email address will not be published. Required fields are marked *