ಎಸ್ಕೆಪ್ ಆಗಲು ಯತ್ನಿಸಿದ ಕಣ್ಣನ್ ಮಣಿ (35) ಎಂಬಾತನ ಕಾಲಿಗೆ ಪೊಲೀಸರು ಗುಂಡು

ಕೋಟೆಕಾರು ಸಹಕಾರಿ ಬ್ಯಾಂಕು ದರೋಡೆ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಮಂಗಳೂರು ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

 ತಮಿಳುನಾಡಿನಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಮಂಗಳೂರಿಗೆ ಕರೆತಂದು ಸ್ಥಳ ಮಹಜರು ನಡೆಸುವುದಕ್ಕಾಗಿ ಉಳ್ಳಾಲಕ್ಕೆ ಕರೆದೊಯ್ದಿದ್ದರು. ಈ ವೇಳೆ, ಎಸ್ಕೆಪ್ ಆಗಲು ಯತ್ನಿಸಿದ ಕಣ್ಣನ್ ಮಣಿ (35) ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

 ಕಣ್ಣನ್ ಮಣಿ ಮೂಲತಃ ತಮಿಳುನಾಡು ನಿವಾಸಿಯಾಗಿದ್ದರೂ, ಸದ್ಯಕ್ಕೆ ಮುಂಬೈ ನಗರದ ಚೆಂಬೂರಿನಲ್ಲಿ ನೆಲೆಸಿದ್ದ. ಧಾರಾವಿ ಗ್ಯಾಂಗ್ ನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಮಣಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸುವ ಸಲುವಾಗಿ ತಲಪಾಡಿ ಬಳಿಯ ಕೆಸಿ ರೋಡ್ ಅಲಂಕಾರ ಗುಡ್ಡೆಗೆ ಕರೆದೊಯ್ದಿದ್ದರು. ಅಲ್ಲಿ ಜೀಪಿನಿಂದ ಇಳಿಯುತ್ತಲೇ ಪರಾರಿಗೆ ಯತ್ನಿಸಿದ್ದಕ್ಕೆ ಫೈರ್ ಮಾಡಿದ್ದು, ಕಾಲಿಗೆ ಗುಂಡೇಟು ಪಡೆದಿದ್ದಾನೆ.

 ಗಾಯಗೊಂಡ ಕಣ್ಣನ್ ಮಣಿಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಭದ್ರತಾ ಕಾರ್ಯ ನಡೆಸಿದ್ದಾರೆ.

  ದರೋಡೆ ಪ್ರಕರಣ ಸಂಬಂಧಿಸಿ ಮುರುಗನ್ ಡಿ ದೇವರ್, ಕಣ್ಣನ್ ಮಣಿ ಮತ್ತು ಯೋಶುವಾ ರಾಜೇಂದ್ರನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಇವರನ್ನು ತಮಿಳುನಾಡಿನ ಸ್ಥಳೀಯ ಕೋರ್ಟಿನಲ್ಲಿ ಹಾಜರುಪಡಿಸಿ ಕರೆತರಲಾಗಿದೆ.

News Editor

Learn More →

Leave a Reply

Your email address will not be published. Required fields are marked *