ಹಿಂದು ಜಾಗರಜಾ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಸದಸ್ಯರೊಬ್ಬರಿಗೆ ಪುತ್ತಿಲ ಪರಿವಾರದ ಸದಸ್ಯನಿಂದ ಬೆದರಿಕೆ ಕರೆ ದೂರು.

ಪುತ್ತೂರು: ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಸಮಿತಿ ಸದಸ್ಯರೊಬ್ಬರಿಗೆ ವ್ಯಕ್ತಿಯೊಬ್ಬರು ಬೆದರಿಕೆ ಕರೆ ಮಾಡಿದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಸುಭಾಷ್ ಮುಕ್ವೆ ಹಿಂ ಜಾ ವೇ ತಾಲ್ಲೂಕು ಸಮಿತಿ ಸದಸ್ಯರು

ಹಿಂದು ಜಾಗರಣ ವೇದಿಕೆ ತಾಲೂಕು ಸಮಿತಿ ಸದಸ್ಯ ನರಿಮೊಗರು ಗ್ರಾಮದ ಮುಕೈ ನಿವಾಸಿ ಸುಭಾಷ್ ರೈ ಅವರು ದೂರುದಾರರಾಗಿದ್ದು, ಅವರಿಗೆ ಮುಂಡೂರು ಗ್ರಾಮದ ಪುತ್ತಿಲ ಪರಿವಾರದ ಧನಂಜಯ ಕಲ್ಲಮ್ಮ ಎಂಬವರು ಬೆದರಿಕೆ ಕರೆ ಮಾಡಿರುವುದಾಗಿ ದೂರು ನೀಡಲಾಗಿದೆ.

ಧನಂಜಯ ಕಲ್ಲಮ ಪುತ್ತಿಲ ಪರಿವಾರ

ಮೊಬೈಲ್ ನಂಬ್ರಕ್ಕೆ ಧನಂಜಯ ಅವರು ಬೆದರಿಕೆ ಕರೆ ಮಾಡಿದಲ್ಲದೆ ಇತರರಿಗೆ ಮೊಬೈಲ್ ನಂಬರ್ ಕೊಟ್ಟು ಬೆದರಿಕೆ ಒಡ್ಡುವಂತೆ ಪ್ರೇರೇಪಿಸಿದ್ದಾರೆ. ಅದರಿಂದಾಗಿ ಅನೇಕ ಕರೆಗಳು ಬರುತ್ತಿವೆ. ಬೆದರಿಕೆ ಕರೆಯಿಂದಾಗಿ ಮುಂದೆ ಆಗಬಹುದಾದ ತೊಂದರೆಯನ್ನು ನಿವಾರಿಸಿ ಸೂಕ್ತ ರಕ್ಷಣೆ ನೀಡುವಂತೆ’ ಸುಭಾಷ್‌ ರೈ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

News Editor

Learn More →

Leave a Reply

Your email address will not be published. Required fields are marked *