ಹೆಬ್ರಿ : ಮಹಿಳೆಯೊಬ್ಬರಿಗೆ ಜೀವಬೆದರಿಕೆ : ಪ್ರಕರಣ ದಾಖಲು.

ಹೆಬ್ರಿ: ಸಮೀಪದ ಅಜೆಕಾರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಎನ್ನುವಲ್ಲಿ ನಡೆದಿದೆ.

ಶಿರ್ಲಾಲಿನ ಸುನಂದ ಅವರು ಡಿ. 19ರಂದು ದೆಪ್ಪುತ್ತೆಯ ರೇಷ್ಮಾ ಟೆಲಿಸ್‌ ಕ್ರಿಸ್ಪಾಲ್‌ ಅವರ ತೋಟದಲ್ಲಿ ಜ್ಯೋತಿ, ಸಂಕ್ರಾಯ, ವಿಜಯ ಅವರ ಜತೆ ಕೆಲಸ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಪ್ರದೀಪ್‌ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಸುನಂದಾ ದೂರು ನೀಡಿದ್ದು, ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News Editor

Learn More →

Leave a Reply

Your email address will not be published. Required fields are marked *