ನಕಲಿ ಅಲೋಪತಿ ವೈದ್ಯ ವಾಸುದೇವ ಹೊಳ್ಳ ವಿರುದ್ಧ, ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ.

ಇತ್ತೀಚಿಗೆ ಸ್ಟಾರ್ ಆಫ್ ಕುಡ್ಲ ಸುದ್ದಿವಾಹಿನಿಯ ಗೌಪ್ಯ ಕಾರ್ಯಾಚರಣೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಡಾ. ವಾಸುದೇವ್ ಹೊಳ್ಳ ಎನ್ನುವ ಆಯುರ್ವೇದಿಕ್ ಡಾಕ್ಟರ್ ಬೇಕಾಬಿಟ್ಟಿ ಅಲೋಪತಿ ಔಷಧವನ್ನು ನೀಡುತ್ತಿದ್ದು ಯಾವುದೇ ರೋಗಿ ಚಿಕಿತ್ಸೆಗೆ ಹೋದರೆ ಅವರನ್ನು ಎರಡು ಮೂರು ದಿನ ಅಡ್ಮಿಟ್ ಮಾಡಿಕೊಂಡು ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನುವ ಸಾರ್ವಜನಿಕ ದೂರಿನ ಅನ್ವಯ ಸುದ್ದಿ ವಾಹಿನಿಯು ರಹಸ್ಯ ಕಾರ್ಯಚರಣೆಯನ್ನು ನಡೆಸಿ ನಕಲಿ ಅಲೋಪತಿ ಡಾಕ್ಟರ್ ವಾಸುದೇವ್ ಹೊಳ್ಳ ರವರ ಅಕ್ರಮವನ್ನು ಬಯಲುಗಳದಿದೆ.

https://youtu.be/GzsMeb0ZOig

ಕುಂದಾಪುರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆ ಪಿ ಎಮ್ ಇ ನೋಂದಣಿಯಲ್ಲಿ ನಕಲಿ ಅಲೋಪತಿ ಡಾಕ್ಟರ್ ವಾಸುದೇವ ಹೊಳ್ಳರ ನೋಂದಣಿಯಾಗಿರುವುದಿಲ್ಲ ತಿಳಿದು ಬಂದಿದೆ. ಅಲ್ಲದೆ ಈತ ರಾತ್ರಿ ಪಾಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮನಬಂದಂತೆ ಹೈಡ್ರೋಸ್ ಔಷಧಿಗಳನ್ನು ನೀಡಿ ರೋಗಿಗಳ ಜೊತೆಗೆ ಚೆಲ್ಲಾಟ ಆಡುತ್ತಿರುವುದು ವಿಪರ್ಯಾಸವೆ ಸರಿ.

ಕಳೆದ ಎರಡು ತಿಂಗಳ ಹಿಂದೆ ಇದೇ ಡಾ. ವಾಸುದೇವ್ ಹೊಳ್ಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ಆಯುಷ್ ನಾಮನಿರ್ದೇಶನ ಮಾಡಲು ಹೊರಟಂತಹ ದಲಿತ ಜವಾಬ್ದಾರಿಯುತ ಡಾಕ್ಟರ್ ಗಳ ಬಗ್ಗೆ ಲಘುವಾಗಿ ತನ್ನ ಆಪ್ತ ಮಿತ್ರ ದಾಮೋದರ್ ಜೊತೆ ಕೂಡಿ ಅಪಪ್ರಚಾರ ಮಾಡಿ ಬೆಂಗಳೂರುನಲ್ಲಿ ಕೇಸು ದಾಖಾಲಿಸಿಕೊಂಡಿದ್ದು ಪವರ್ ಟಿ.ವಿ ಯಲ್ಲಿ ಸುದ್ದಿ ಯಾಗಿತ್ತು.


ಇಂತಹ ಆಯುರ್ವೇದದ ಹೆಸರಿನಲ್ಲಿ ಇವರು ಮಾಡುವ ವಂಚನೆ, ಗಂಭೀರ ಸ್ವರೂಪದ್ದಾಗಿದ್ದು, ಹಾಗೆಯೇ ಇವರ ಆಯುರ್ವೇದದ ಹೆಸರಿನ ಈ ವಂಚನೆ ಕುರಿತು ಕರ್ನಾಟಕ ಆರೋಗ್ಯ ಮಂತ್ರಿಗಳು, ಉಡುಪಿ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಸ್ಟಾರ್ ಆಫ್ ಕುಡ್ಲ ವಾಹಿನಿ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದೆ.

News Editor

Learn More →

Leave a Reply

Your email address will not be published. Required fields are marked *