
ಪುತ್ತೂರು :ಇಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಸಂಸ್ಮರಣಾ ದಿನ ಆಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.
ಸಭೆಯಲ್ಲಿ ಸೇಸಪ್ಪ ನೆಕ್ಕಿಲು ಮಾತನಾಡಿ ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನದಿಂದ ಭಾರತದಲ್ಲಿರುವ ಪ್ರತಿಯೊಬ್ಬನಿಗೂ ಗೌರವ ಸಿಗಲು ಸಾಧ್ಯ ಎಂದರು.
ಎಸ್ಸಿ ಎಸ್ಟಿ ಘಟಕದ ಅದ್ಯಕ್ಷರಾದ ಮಹಾಲಿಂಗ ನಾಯ್ಕರವರು ಮಾತನಾಡಿ ಕಡು ಬಡವರು ಮತ್ತು ಸಿರಿವಂತರು ಎಂದು ಭೇದ ಭಾವ ಮಾಡದೆ ಪ್ರತಿಯೊಬ್ಬನಿಗೂ ಸಮಾನ ಹಕ್ಕುನಮ್ಮ ಸಂವಿಧಾನದಲ್ಲಿ ಅಂಬೇಡ್ಕರ್ ರವರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.” ಎಂದು ಹೇಳಿದರು
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವರವರು ಮಾತನಾಡಿ “ಅಂಬೇಡ್ಕರ್ ರವರು ಒಬ್ಬ ಮಹಾನ್ ನಾಯಕ. ಗಾಂಧೀಜಿ , ಜವಾಹರ್ ಲಾಲ್ ನೆಹೆರೂರವರಂಥವರ ನಾಯಕರ ಸಾಲಿನಲ್ಲಿ ಇವರೂ ಒಬ್ಬರು. ಅಂಬೇಡ್ಕರಾ ರವರ ಅದರ್ಶ ತತ್ವಗಳನ್ನು ಮುಂದಿನ ಜನಾಂಗಕ್ಕೆ ನಾವು ತಿಳಿಯಪಡಿಸಬೇಕು ಎಂಬ ಸಲಹೆಯನ್ನಿತ್ತರು.
ಇಂದಿನ ಕಾರ್ಯಕ್ರಮದ ಸ್ವಾಗತವನ್ನು ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಮುಖೇಶ್ ಕೆಮ್ಮಿಂಜೆ ಮತ್ತು ವಂದನಾರ್ಪಣೆಯನ್ನು ಎಸ್ಸಿ ಎಸ್ಟಿ ಘಟಕದ ಪದಾಧಿಕಾರಿ ಬಾಬು ಮರಿಕೆ ಮಾಡಿದರು.
ಸಭೆಯಲ್ಲಿ ಅಲ್ಪ ಸಂಖ್ಯಾತ ಘಟಕದ ಹಾಜಿ ಅಬ್ದುಲ್ ರಹಿಮಾನ್ ಅಜಾದ್, ನಗರ ಸಭಾ ಸದಸ್ಯರಾದ ರಾಬಿನ್ ಸಂಘಟನಾ ಕಾರ್ಯದರ್ಶಿ ಸಂತೋಷ್ ಭಂಡಾರಿ, ಕಾಂಗ್ರೆಸ್ ಮುಂಡರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ , ಮುಂಡೂರು ವಲಯ ಅಧ್ಯಕ್ಷರಾದ ಸುಪ್ರಿತ್ ಕಣ್ಣಾರಾಯ, ಗೃಹಲಕ್ಷ್ಮಿ ಯೋಜನೆಯ ಸದಸ್ಯರಾದ ವಿಜಯಲಕ್ಷ್ಮಿ, ಗ್ರಾಮ ಪಂಚಾಯತ್ ಸದಸ್ಯರಾದ ಯಾಕುಬ್ ಕುರಿಯ, ಅಬುಬಕ್ಕರ್ ಮುಲಾರ್ ,ಜೋನ್ ಸಿರಿಲ್ ರೊಡ್ರಿಗಸ್, ಆದಂ kunhi, ಸುರೇಶ್ ಸಾಲ್ಯಾನ್, ಮಾದವ ಅಜಲಡ್ಕ, ಮೋನಪ್ಪ ಕೆರೆಮೂಲೆ, ಅನಂದ ಕೆರೆಮೂಲೆ, ಸಿನಾನ್ ಮುಂತಾದವರು ಉಪಸ್ಥಿತರಿದ್ದರು.


