
ಕಾಸರಗೋಡು ಜಿಲ್ಲೆಯಲ್ಲಿ ಕೇಂದ್ರೀಯ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಶೇಣಿ ಬಲ್ಕಕಲ್ಲು ಮೂಲದ ಬಾಡೂರು ಎಎಲ್ಪಿ ಶಾಲೆಯ ಶಿಕ್ಷಕಿ ಸಚಿತಾ ರೈ (27) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಕೇಂದ್ರೀಯ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಶೇಣಿ ಬಲ್ಕಕಲ್ಲು ಮೂಲದ ಬಾಡೂರು ಎಎಲ್ಪಿ ಶಾಲೆಯ ಶಿಕ್ಷಕಿ ಸಚಿತಾ ರೈ (27) ಅವರನ್ನು ಪೊಲೀಸರು ಬಂಧಿಸಿದ್ದಾರೆ
ಕಾಸರಗೋಡು ವಿದ್ಯಾನಗರದಲ್ಲಿ ಡಿವೈಎಸ್ಪಿ ಸಿ.ಕೆ. ಸುನೀಲ್ಕುಮಾರ್ ಅವರ ನೇತೃತ್ವದಲ್ಲಿ ಮಹಿಳಾ ಮತ್ತು ವಿದ್ಯಾನಗರ ಪೊಲೀಸರು ಗುರುವಾರ ಸಂಜೆ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಸಚಿತಾ ರೈ, ಕಾಸರಗೋಡು ನ್ಯಾಯಾಲಯಕ್ಕೆ ಶರಣಾಗಲು ಬರುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಪ್ರಕರಣದ ಸುತ್ತ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಸಚಿತಾ ರೈ ವಿರುದ್ಧ ಈಗಾಗಲೇ 13ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಸಚಿತಾ ರೈ ಡಿವೈಎಫ್ಐ ಕಾಸರಗೋಡು ಜಿಲ್ಲಾ ಸಮಿತಿಯ ಮಾಜಿ ಸದಸ್ಯೆಯಾಗಿದ್ದರು ಹಾಗೂ ಕೇರಳ ತುಳು ಅಕಾಡೆಮಿಯ ಸದಸ್ಯೆಯೂ ಆಗಿದ್ದರು. ಆಕೆಯ ವಿರುದ್ಧ ಸಾಕಷ್ಟು ದೂರುಗಳು ದಾಖಲಾಗಿದ್ದು, ಮನೆಯವರಿಗೆ ತಿಳಿಯದಂತೆ 5 ಲಕ್ಷ ರೂ. ನೀಡಿದ ವ್ಯಕ್ತಿಯೂ ವಂಚನೆಗೊಳಗಾದಿದ್ದಾರೆ ಎಂಬ ದೂರು ಕೂಡ ಆದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ
ಮೂರು ವಾರಗಳ ಕಾಲ ತಲೆಮರೆಸಿಕೊಂಡಿದ್ದ ಸಚಿತಾ ರೈ ವಿರುದ್ಧ ಕುಂಬಳೆ, ಬದಿಯಡ್ಕ, ಮಂಜೇಶ್ವರ, ಕಾಸರಗೋಡು, ಆದೂರು, ಮೇಲ್ಪರಂಬ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಕೇಸುಗಳು ದಾಖಲಾಗಿವೆ
ಸಚಿತಾ ರೈ ಸಿಪಿಸಿಆರ್ ಐ, ಕೇಂದ್ರೀಯ ವಿದ್ಯಾಲಯ, ಎಸ್ಬಿಐ, ಕರ್ನಾಟಕ ಅಬಕಾರಿ ಮತ್ತು ಅರಣ್ಯ ಇಲಾಖೆಗಳಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಹಲವರಿಂದ ಹಣ ವಸೂಲು ಮಾಡಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ. ಕೇರಳ ಗ್ರಾಮೀಣ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಪೆರ್ಲ ಶಾಖೆಗಳಲ್ಲಿ ನಗದು ವರ್ಗಾವಣೆ ಮಾಡಿಸಲು ಆಕೆಯು ಸೂಚಿಸಿದ್ದಾಳೆ ಎಂದು ಹೇಳಲಾಗಿದೆ.
5 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣಕಾಸು ವ್ಯವಹಾರವು ಬ್ಯಾಂಕ್ಗಳ ಮೂಲಕ ನಡೆದಿದ್ದು, ಇದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉಡುಪಿಯ ಉದ್ಯೋಗ ನೇಮಕಾತಿ ಸಂಸ್ಥೆಯ ಹೆಸರಿನಲ್ಲಿ ಸಚಿತಾ ರೈ ಅನೇಕ ಮಂದಿಯನ್ನು ವಂಚನೆ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ


