ರಾಷ್ಟಿçÃಯ ಸ್ವಯಂ ಸೇವಕ ಸಂಘ (ಆರೆಸ್ಸಸ್ಸ್) ಅಮೇರಿಕಾದಲ್ಲೂ ಹಿಂದೂ ಸ್ವಯಂ ಸೇವಕ ಸಂಘ (ಹೆಚ್‌ಎಸ್‌ಎಸ್) ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತೀ ಭಾನುವಾರ ಸಂಘದ ಶಾಖಾ ಚಟುವಟಿಕೆಗಳು ನಡೆಯುತ್ತಿವೆ-ಕಡಮಜಲು ವಿಪುಲ್ ಎಸ್.ರೈ

ಪುತ್ತೂರು : ಭಾರತದಲ್ಲಿ ದೊಡ್ಡ ಸಂಘಟನೆಯಾಗಿ ಗುರುತಿಸಿಕೊಂಡಿರುವ ರಾಷ್ಟಿçÃಯ ಸ್ವಯಂ ಸೇವಕ ಸಂಘ (ಆರೆಸ್ಸಸ್ಸ್) ಅಮೇರಿಕಾದಲ್ಲೂ ಹಿಂದೂ ಸ್ವಯಂ ಸೇವಕ ಸಂಘ (ಹೆಚ್‌ಎಸ್‌ಎಸ್) ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತೀ ಭಾನುವಾರ ಸಂಘದ ಶಾಖಾ ಚಟುವಟಿಕೆಗಳು ನಡೆಯುತ್ತಿವೆ. ನೋಂದಣಿ ಮಾಡಿಕೊಂಡ ಸಂಘ-ಸAಸ್ಥೆಗಳು ಕಾನೂನಾತ್ಮಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಲು ಯಾವುದೇ ಸಮಸ್ಯೆಗಳು ಅಮೇರಿಕಾದಲ್ಲಿ ಇಲ್ಲ ಎಂದು ಅಮೇರಿಕಾದಲ್ಲಿ ಬೋಯಿಂಗ್ ವಿಮಾನದ ಏರೋಸ್ಪೇಸ್ ಸಿಸ್ಟಮ್ ಎಂಜಿನಿಯರ್ ಆಗಿದ್ದುಕೊಂಡು ಹೆಚ್‌ಎಸ್‌ಎಸ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪುತ್ತೂರು ತಾಲ್ಲೂಕಿನ ಕಡಮಜಲು ವಿಪುಲ್ ಎಸ್.ರೈ ಅವರು ತಿಳಿಸಿದರು.

ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ಜಿಲ್ಲೆಯಲ್ಲಿ ಹೆಚ್‌ಎಸೆಎಸ್‌ನ ೮ ಶಾಖೆಗಳಿವೆ. ಸ್ಯಾಂಟಕ್ಲಾರಿಟಾದಲ್ಲಿ ಹೊಸದಾಗಿ ೮೦ ಮಂದಿಯನ್ನೊಳಗೊAಡ ಶಾಖೆ ಆರಂಭಗೊAಡಿದೆ. ಪ್ರತೀ ಶಾಖೆಯಗಳಲ್ಲಿ ೫೦ರಿಂದ ೬೦ ಮಂದಿಯಷ್ಟು ಇದ್ದಾರೆ.ಕ್ಯಾಲಿಫೋರ್ನಿಯಾ ರಾಜ್ಯದ ಪ್ರತೀ ಮೂಲೆಮೂಲೆಗಳಲ್ಲಿ ಹೆಚ್‌ಎಸ್‌ಎಸ್ ಶಾಖೆಗಳನ್ನು ನಡೆಸಬೇಕು ಎಂಬುವುದು ನಮ್ಮ ಯೋಜನೆಯಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಂಘಟನೆಯಲ್ಲಿ ತೊಡಗಿಕೊಳ್ಳಲು ಜನರು ಸ್ವಯಂ ಪ್ರೇರಿತವಾಗಿ ಬರುತ್ತಿದ್ದಾರೆ ಎಂದರು.

ಅಮೇರಿಕಾದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಹಿಂದುತ್ವದ ವಿಚಾರದಲ್ಲಿ ಅಮೇರಿಕನ್ನರಿಗೆ ಗೌರವವನ್ನು ಉದ್ದೀಪನಗೊಳಿಸಲು ಹಲವಾರು ಸಂಘ ಸಂಸ್ಥೆಗಳು, ಕನ್ನಡ ಸಂಘ,ತುಳು ಸಂಘಟನೆ, ದಕ್ಷಿಣ ಕನ್ನಡ ಒಕ್ಕೂಟ, ಹಿಂದೂ ಸ್ವಯಂ ಸೇವಕ ಸಂಘದಲ್ಲಿ ಸಂಘಟನಾ ಸದಸ್ಯನಾಗಿ, ಬಿಜೆಪಿ ವಿದೇಶ ವಿಭಾಗದ `ಓವರ್‌ಸೀಸ್ ಫ್ರೆಂಡ್ಸ್ ಫ್ ಬಿಜೆಪಿ’ ಯ ರಾಜ್ಯ ಸಂಚಾಲಕನಾಗಿ ಕೆಲಸ ಮಾಡುತ್ತಿದ್ದು, ಮೋದಿ ಭೇಟಿ ಕಾರ್ಯಕ್ರಮಕ್ಕೆ ಅನಿವಾಸಿ ಭಾರತೀಯರಿಂದ ನಿರೀಕ್ಷೆಗೂ ಮೀರಿದ ಉತ್ತಮ ಸ್ಲಂದನೆ ಲಭಿಸಿದ್ದು, ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ. ಸ್ವಾಗತ ಸಮಿತಿಯಲ್ಲಿದ್ದ ತನಗೆ ಮೋದಿಯನ್ನು ಭೇಟಿಯಾಗುವ ಅವಕಾಶವೂ ಸಿಕ್ಕದೆ ಎಂದರು,
ಸುಮಾರು ೧೫೦೦ ದೇವಳಗಳ ಮೂಲಕ ಹಿಂದೂ ಕಾರ್ಯಕ್ರಮಗಳು ನಡೆಯುತ್ತಿವೆ. ೯೦೦ ದೇವಳಗಳಿಗೆ ರಥ ಯಾತ್ರೆ ಕೈಗೊಳ್ಳುವ ಮೂಲಕ ಧರ್ಮ ಜಾಗೃತಿ ಕೆಲಸ ಮಾಡಲಾಗಿದೆ. ಅಮೇರಿಕಾದಲ್ಲಿ ನೆಲೆಸಿರುವ ಕರ್ನಾಟಕ ರಾಜ್ಯದ ಮಕ್ಕಳಿಗಾಗಿ ಕನ್ನಡ ಶಾಲೆ, ಭಾರತೀಯ ಸಂಸ್ಕೃತಿ ಮತ್ತು ಧರ್ಮದ ವಿಚಾರಧಾರೆಗಳನ್ನು ಕಲಿಸಿಕೊಡುವ ಚಿನ್ಮಯ ಮಿಶನ್‌ನ ಬಾಲವಿಹಾರ ಶಾಲೆ ಮೊದಲಾದ ಶಾಲೆಗಳನ್ನು ನಡೆಸುವಲ್ಲಿ ಕೆಲಸ ಮಾಡಲಾಗುತ್ತಿದೆ. ಕ್ಯಾಲಿಫೋರ್ನಿಯಾದ ಕನ್ನಡ ಸಂಘದ ನಿರ್ದೇಶಕನಾಗಿ ಕನ್ನಡದ ಜಾಗೃತಿ, ಭಾಷೆ, ನೆಲ,ಜಲದ ಉಳಿವಿಗಾಗಿ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ನಾಟಕ,ಯಕ್ಷಗಾನ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಪುಲ್ ರೈ ಅವರ ತಂದೆ ಕಡಮಜಲು ಸುಭಾಷ್ ರೈ, ತಾಯಿ ಪ್ರೀತಿ ಎಸ್.ರೈ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ರೈ ಉಜುರುಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

News Editor

Learn More →

Leave a Reply

Your email address will not be published. Required fields are marked *