ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ – ವಾಲ್ಮೀಕಿ ಜಯಂತಿ ಕಾರ್ಯಕ್ರಮ.

ಪುತ್ತೂರು; ಜಗತ್ತಿಗೆ ರಾಮಾಯಣದ ಮಹಾಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ೫ ಸಾವಿರ ವರ್ಷಗಳ ಹಿಂದೆಯೇ ದೊಡ್ಡ ತತ್ವಜ್ಞಾನಿಯಾಗಿದ್ದರು. ತಾವು ಮಾಡುವ ಪಾಪದಲ್ಲಿ ಪಾಲು ಪಡೆದುಕೊಳ್ಳಲು ನಮ್ಮ ಕುಟುಂಬದವರೂ ಮುಂದಾಗುವುದಿಲ್ಲ ಎಂಬ ಸತ್ಯದರ್ಶನದಿಂದ ಹೊಡಿಬಡಿ ಸಂಸ್ಕೃತಿಯ ವ್ಯಕ್ತಿ ವಾಲ್ಮೀಕಿಯಾಗಿ ಬದಲಾದರು. ಅವರ ಆದರ್ಶದ ಚಿಂತನೆಯ ಪಾಲನೆ ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಅಭಿಪ್ರಾಯಪಟ್ಟರು.
ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಓರ್ವ ವ್ಯಕ್ತಿ ತನ್ನ ದೋಚುವ ಕೃತ್ಯದಿಂದ ಮನಪರಿವರ್ತನೆಗೊಂಡು ತಪ್ಪಸ್ಸು ಆಚರಿಸುವ ಮೂಲಕ ವಾಲ್ಮೀಕಿ ಯಾಗಿ ಬದಲಾಗುವ ಜತೆಗೆ ಜನತೆಯನ್ನೂ ಬದಲಿಸುವ ಮಹಾಕಾವ್ಯ ರಚನೆ ಮಾಡುತ್ತಾರೆ. ಅವರು ರಚಿಸಿದ ರಾಮಾಯಣ ಜಗತ್ ಪ್ರಸಿದ್ಧಿಯಾದ ಕಾವ್ಯವಾಗಿದೆ. ಈ ಕಾವ್ಯ ಜನರ ಬದುಕು ಯಾವ ರೀತಿಯಲ್ಲಿರಬೇಕು. ಸತ್ಯ ಧರ್ಮ ನ್ಯಾಯ ಬದುಕಿನ ಸತ್ಯಗಳಾಗಬೇಕು ಎಂಬ ಸಾರ್ವಕಾಲಿಕ ಸಂದೇಶಗಳನ್ನು ಜಗತ್ತಿಗೇ ನೀಡಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ೬೦ ಲಕ್ಷಕ್ಕೂ ಹೆಚ್ಚು ವಾಲ್ಮೀಕಿ ಜನಾಂಗದವರಿದ್ದಾರೆ. ಜಾತಿ ಆಧಾರದಲ್ಲಿ ರಾಜ್ಯದಲ್ಲಿ ನಾಯಕ ಜನಾಂಗ ೫ ನೇ ಸ್ಥಾನದಲ್ಲಿದೆ. ರಾಜ್ಯ-ಕೇಂದ್ರ ಸರ್ಕಾರಗಳು ಈ ಜನಾಂಗದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ದಕ ಉಡುಪಿಯಲ್ಲಿ ಈ ಜನಾಂಗದ ಜನಸಂಖ್ಯೆ ವಿರಳವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ರಾಜ್ ಬಪ್ಪಳಿಗೆ, ನಗರಸಭಾ ಆಯುಕ್ತರಾದ ಮಧು ಎಸ್ ಮನೋಹರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಶಿಕ್ಷಣ ಇಲಾಖೆಯ ವಿಷ್ಣುಪ್ರಸಾದ್. .
ಸಮಾಜಕಲ್ಯಾಣ ಇಲಾಖೆಯ ಪ್ರಭಾರ ನಿರ್ದೇಶಕ ಕೃಷ್ಣ,ಕಂದಾಯ ಇಲಾಖೆಯ ದಯಾನಂದ್, ಹರಿಪ್ರಸಾದ್, ಹಾರಾಡಿ ಹಾಸ್ಟೆಲ್ ಮೇಲ್ವಿಚಾರಕಿ ಪ್ರೇಮಲತಾ ಭಾಗವಹಿಸಿದ್ದರು.

News Editor

Learn More →

Leave a Reply

Your email address will not be published. Required fields are marked *