
ಮಂಗಳೂರಿನ ಉರ್ವ ಸ್ಟೋರ್ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.
ಮಂಗಳೂರಿನ ಉರ್ವ ಸ್ಟೋರ್ ಮಹಾ ಗಣಪತಿ ದೇವಸ್ಥಾನ ದಿಂದ ಇನ್ಫೋಸಿಸ್ ನ ವರೆಗೆ ಇರುವ ಸರಕಾರ ನೌಕರರ ವಸತಿ ಗೃಹ ವಠಾರದಲ್ಲಿ ಹಾಗೂ ಜಿಲ್ಲಾ ಪಂಚಾಯತ್ ವಠಾರದಲ್ಲಿ ಸುಮಾರು 60 ರಿಂದ 70 ಬೀದಿ ನಾಯಿಗಳಿದ್ದು ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್, ಕಾಲೊನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ಹೆಚ್ಚಾಗಿದೆ.
ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನರುಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದಾರೆ
ಮಂಗಳೂರಿನ ಉರ್ವ ಸ್ಟೋರ್ ಮಹಾ ಗಣಪತಿ ದೇವಸ್ಥಾನ ದಿಂದ ಇನ್ಫೋಸಿಸ್ ನ ವರೆಗೆ ಇರುವ ಸರಕಾರ ನೌಕರರ ವಸತಿ ಗೃಹ ವಠಾರದಲ್ಲಿ ಹಾಗೂ ಜಿಲ್ಲಾ ಪಂಚಾಯತ್ ವಠಾರದಲ್ಲಿ ಸುಮಾರು 60 ರಿಂದ 70 ಬೀದಿ ನಾಯಿಗಳಿದ್ದು ಈ ರಸ್ತೆಯಲ್ಲಿ ನಡೆದಾಡಲು ತುಂಬಾ ಕಷ್ಟ ಅಲ್ಲದೆ ಗಣಪತಿ ದೇವಸ್ಥಾನಕ್ಕೆ ಬರುವ ಭಕ್ತರನ್ನು ಓಡಿಸಿಕೊಂಡು ಬರುವುದು ಮತ್ತು ಮಕ್ಕಳು ಸೈಕಲಿನಲ್ಲಿ ಆಟವಾಡುವಾಗ ಅಟ್ಟಿಸಿ ಕೊಂಡು ಬಂದು ಕೆಲವು ದಿನಗಳ ಹಿಂದೆ ವಸತಿ ಗೃಹ ದ ಮಗು ಆಟವಾಡುವಾಗ ನಾಯಿಗಳು ಓಡಿಸಿಕೊಂಡು ಬಂದು ಕಚ್ಚಿಯಿರುತ್ತದೆ. ಈ ನಾಯಿಗಳಿಗೆ ಪ್ರತಿದಿನ ಅನ್ನ ಕೋಳಿಯ ಎಲುಬುಗಳನ್ನು ಹಾಗೂ ರಾತ್ರಿ ಪಾಸ್ಟ್ ಪುಡ್ ನವರು ವೆಸ್ಟ್ ಆಗಿರುವ ಕೋಳಿಗಳ ಕಾಲುಗಳನ್ನು ಎಲುಬುಗಳನ್ನು ತಂದು ಸರಕಾರಿ ವಸತಿ ಗೃಹದ ಸುತ್ತಲೂ ಬಿಸಾಡಿ ಹೋಗುತ್ತಾರೆ ಇದನ್ನು ತಿಂದು ದ್ವಿ ಚಕ್ರ ವಾಹನಗಳನ್ನು ಓಡಿಸಿಕೊಂಡು ಬಂದು ಮೈ ಮೇಲೆ ಹಾರುವುದು ಈ ಕುರಿತು ಸಂಬಂಧ ಪಟ್ಟ ಅಧಿಕಾರಿಯವರು ಕ್ರಮ ಕೈ ಕೊಳ್ಳುವಂತೆ ವಿನಂತಿ


