ಇದೊಂದು ಅವೈಜ್ಞಾನಿಕ ಮೀನುಗಾರಿಕೆ
ಲೈಟ್ ಫಿಶಿಂಗ್, ಚಟ್ಟಿ ಬಲೆ, ಬುಲ್ ಟ್ರಾಲ್‌ಗೆ ಭಾರತದಲ್ಲಿ ನಿಷೇಧವಿದೆ. ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರದ ಆದೇಶದ ಪ್ರಕಾರ ಈ ರೀತಿ ಫಿಶಿಂಗ್ ಮಾಡುವಂತಿಲ್ಲ. ಅದರ ಹೊರತಾಗಿಯೂ ಅಲ್ಲಲ್ಲಿ ಕದ್ದು ಮುಚ್ಚಿ ಮೀನುಗಾರಿಕೆ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡುವವರ ವಿರುದ್ಧ ಲೈಸೆನ್ಸ್ ರದ್ಧತಿ, ದಂಡ ವಿಧಿಸುವುದರ ಮುಖಾಂತರ ಕಠಿಣ ಕ್ರಮ ಸಂಬಂಧಪಟ್ಟ ಇಲಾಖೆ ಕೈಗೊಳ್ಳಬೇಕು.
ಬುಲ್ ಟ್ರಾಲ್ ಮಾಡುತ್ತಿರುವ ಬೋಟ್ ನ್ನು ಅಡ್ಡಗಟ್ಟಿದ ನಾಡದೋಣಿ ಮೀನುಗಾರರು
ಬುಲ್ ಟ್ರಾಲ್ ಮಾಡುತ್ತಿರುವ ಬೋಟುಗಳನ್ನು ಅಡ್ಡಗಟ್ಟಿದ ಮೀನುಗಾರರು
ಬೈಂದೂರು ವಲಯ ನಾಡ ದೋಣಿ ಮತ್ತು ಗಂಗೊಳ್ಳಿ ನಾಡ ದೋಣಿ ಮೀನುಗಾರರು ಒಂದುಗೂಡು ಸುಮಾರು ನೂರಕ್ಕೂ ಹೆಚ್ಚು ದೋಣಿಯವರು ಬುಲ್ಟ್ರೋಲ್ ಮಾಡುತ್ತಿರುವ ಬೋಟಗಳನ್ನು ತಡೆದು ನಿಲ್ಲಿಸಿ ತಮ್ಮ ಅಕ್ರೋಶವನ್ನು ಹೊರಗೆ ಹಾಕಿದ್ದಾರೆ ಸಮುದ್ರದ ತೀರಪ್ರದೇಶದಲ್ಲಿ ಮಾಡುವುದರಿಂದ ಮೀನುಗಳ ಸಂತತಿ ನಾಶವಾಗುವುದರಲ್ಲಿ ಸಂಶಯವಿಲ್ಲ
ಬುಲ್‌ಟ್ರಾಲ್ ಲೈಟ್ ಫಿಶಿಂಗ್‌ನಿಂದ ನಾಡದೋಣಿ ಮೀನುಗಾರರ ಜೀವನಕ್ಕೆ ತೊಂದರೆಯಾಗಿದೆ. ಜೀವದ ಹಂಗು ತೊರೆದು ಮೀನುಗಾರಿಕೆಗೆ ತೆರಳಿದರೆ ಬರಿಗೈಯಲ್ಲಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಬಾಹಿರವಾಗಿ ಮೀನುಗಾರಿಕೆಗೆ ಮಾಡುತ್ತಿರುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಮಂಗಳೂರಿನಿಂದ ಕಾರವಾರದ ತನಕ ನಾಡ ದೋಣಿ ಮೀನುಗಾರರು ಸಭೆ ನಡೆಸಿ ಬುಲ್ಟ್ರೋಲ್ ಮೀನುಗಾರಿಕೆ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಟ್ರಾಲ್ ಬೋಟ್ ನವರು ಸುಮಾರು 45 ಪೊಸಿಷನ್ 2 9 ಲಾಂಗ್‌ನಲ್ಲಿ ಬುಲ್ಟ್ರೋಲ್ ಮಾಡುತ್ತಿದ್ದು ದೃಶ್ಯಗಳು ಕಂಡು ಬಂದ್ದಿದ್ದು ನಾಡದೋಣಿ ಯುವರು ಇದನ್ನು ಪ್ರತಿಭಟಿಸಿದರೆ ,ಅಧಿಕಾರಿಗಳ ಗಮನಕ್ಕೆ ತಂದರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ನಾಡ ದೋಣಿಯ ಮೀನುಗಾರರಿಗೆ ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ ಹೀಗೆ ಮುಂದುವರೆದರೆ ನಾಡ ದೋಣಿ ಮೀನುಗಾರರ ಕುಟುಂಬ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗುವದರಲ್ಲಿ ಸಂಶಯವಿಲ್ಲಇದೊಂದು ಅವೈಜ್ಞಾನಿಕ ಮೀನುಗಾರಿಕೆ
ಲೈಟ್ ಫಿಶಿಂಗ್, ಬುಲ್ ಟ್ರಾಲ್‌ಗೆ ಭಾರತದಲ್ಲಿ ನಿಷೇಧವಿದೆ. ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರದ ಆದೇಶದ ಪ್ರಕಾರ ಈ ರೀತಿ ಫಿಶಿಂಗ್ ಮಾಡುವಂತಿಲ್ಲ. ಅದರ ಹೊರತಾಗಿಯೂ ಅಲ್ಲಲ್ಲಿ ಕದ್ದು ಮುಚ್ಚಿ ಮೀನುಗಾರಿಕೆ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡುವವರ ವಿರುದ್ಧ ಲೈಸೆನ್ಸ್ ರದ್ಧತಿ, ದಂಡ ವಿಧಿಸುವುದರ ಮುಖಾಂತರ ಕಠಿಣ ಕ್ರಮ ಸಂಬಂಧಪಟ್ಟ ಇಲಾಖೆ ಕೈಗೊಳ್ಳಬೇಕು. ಈ ರೀತಿ ಕಾನೂನುಬಾಹಿರ ಮೀನುಗಾರಿಕೆ ಚಟುವಟಿಕೆ ಮಾಡುವುದನ್ನು ಕಂಡು ಬಂದಲ್ಲಿ ಇದರಿಂದ ಬುಲ್ಟ್ರೋಲ್ ನವರಿಗೂ ಮತ್ತು ನಾಡ ದೋಣಿ ಮೀನುಗಾರರು ಸಂಘರ್ಷಕ್ಕೆ ಕಾರಣವಾಗುತ್ತದೆ ಮುಂದಿನ ದಿನಗಳಲ್ಲಿ ನಾಡ ದೋಣಿ ಮೀನುಗಾರಿಗೂ ಮತ್ತು ಬುಲ್ಟ್ರಾಲ್ ಬೋಟ್ ನವರಿಗೂ ಘರ್ಷಣೆ ಉಂಟಾಗುವ ಸಂಭವವಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಚಿವರು ಮತ್ತು ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಡದವನು ಮೀನುಗಾರರು ಅಗ್ರಹಿಸಿದ್ದಾರೆ ಮತ್ತುಮುಂದಿನ ದಿನಗಳಲ್ಲಿ ಮೀನುಗಾರರು ಸೇರಿ ಹೋರಾಟ ಮಾಡುತ್ತೇವೆ. ಎಂದು ಮೂರು ಜಿಲ್ಲೆಯ ನಾಡ ದೋಣಿ ಮೀನುಗಾರರ ಮುಖಂಡರು ಎಚ್ಚರಿಕೆ ನೀಡಿರುತ್ತಾರೆ


