ಪುತ್ತೂರು : ಕಾಡು ಹಂದಿ ದಾಳಿ –ಪುತ್ತೂರು ತಾಲ್ಲೂಕು ಕುಂಬ್ರ ಪೆಟ್ರೋಲ್ ಪಂಪ್ ನೌಕರ ತೀವ್ರ ಗಾಯ.

ಪುತ್ತೂರು : ಕಾಡು ಹಂದಿ ದಾಳಿ –ಪುತ್ತೂರು ತಾಲ್ಲೂಕು ಕುಂಬ್ರ ಪೆಟ್ರೋಲ್ ಪಂಪ್ ನೌಕರ ತೀವ್ರ ಗಾಯ.

ಪುತ್ತೂರು: ಪುತ್ತೂರು ತಾಲ್ಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ
ಮಣ್ಣಾಪು ಎಂಬಲ್ಲಿ ಕಾಡು ಹಂದಿಯೊಂದು ದಾಳಿ ನಡೆಸಿದ ಪರಿಣಾಮ ಸ್ಕೂಟರ್ ಸವಾರ ಕುಂಬ್ರ ಪೆಟ್ರೋಲ್ ಪಂಪ್ ನ ಮ್ಯಾನೇಜ‌ರ್ ಆಗಿರುವ ಧನುಷ್ ಎಂಬವರು ತೀವ್ರ ಗಾಯಗೊಂಡ ಘಟನೆ ಆ.20 ರ ಬೆಳಗ್ಗಿನ ಜಾವ ನಡೆದಿದೆ.

ಧನುಷ್‌ ಅವರು ಎಂದಿನಂತೆ ಬೆಳಿಗ್ಗೆ ಸ್ಕೂಟರ್ ನಲ್ಲಿ ಕುಂಬ್ರ ಪೆಟ್ರೋಲ್ ಪಂಪ್ ಗೆ ಬರುತ್ತಿದ್ದ ವೇಳೆ ಏಕಾ ಏಕಿ ಕಾಡು ಹಂದಿಯೊಂದು ಧನುಷ್ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ದಾಳಿ ನಡೆಸಿದೆ. ಈ ವೇಳೆ ನಿಯಂತ್ರಣ ತಪ್ಪಿ ಕೇಳಗೆ ಬಿದ್ದ ಧನುಷ್ ಅವರ ಮೇಲೆ ಎರಗಿ ಅವರ ಬಲ ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದಲ್ಲದೆ ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು 108 ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

News Editor

Learn More →

Leave a Reply

Your email address will not be published. Required fields are marked *