
ವೈರಲ್ ಪೋಸ್ಟ್ ಕುರಿತಂತೆ ಸಂಸ್ಥೆಯ ಪ್ರಮುಖರು ಮೌನ!?
ಸ್ಪಷ್ಟನೆ ನೀಡಿದ ಯುವಕನ ಬಗ್ಗೆಯೂ ಇಲ್ಲ ಸ್ಪಷ್ಟತೆ!?
ಮಂಗಳೂರು: ಕರಾವಳಿ ಭಾಗದಲ್ಲಿ ಹತ್ತಾರು ಲಕ್ಕಿ ಸ್ಕೀಂಗಳು ಸದ್ದು ಮಾಡುತ್ತಿವೆ. ಈ ನಡುವೆ ಸುರತ್ಕಲ್ ಮೂಲದ ಎನ್ನಲಾದ ʼವಫಾ ಲಕ್ಕಿ ಸ್ಕೀಂʼ ಕುರಿತು ಗುರುತರ ಆರೋಪ ಕೇಳಿ ಬಂದಿದೆ. ಈ ಕುರಿತ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹೀಗಾಗಿ ವಫಾ ಸಂಸ್ಥೆ ನಡೆಸುತ್ತಿರುವ ಲಕ್ಕಿ ಸ್ಕೀಂ ಬಗ್ಗೆ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗತೊಡಗಿದೆ.
ಏನಿದೆ ಆ ಪೋಸ್ಟ್ನಲ್ಲಿ?
ನೊಂದ ದಕ್ಷಿಣ ಕನ್ನಡ ನಾಗರಿಕ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಸಮಾಧಾನಕರ ಬಹುಮಾನವಾಗಿ ಸಿಕ್ಕ ಉಂಗುರದ ಕುರಿತಂತೆ ಬರೆಯಲಾಗಿದೆ. ಜೊತೆಗೆ ಉಂಗುರದ ಫೋಟೋವನ್ನು ಲಗತ್ತಿಸಲಾಗಿದೆ. ಕೆಳಗೆ ಈ ಕುರಿತಂತೆ ಒಕ್ಕಣೆ ಬರೆದಿರುವ ವ್ಯಕ್ತಿಯು, ವಫಾ ಸ್ಕೀಂನಲ್ಲಿ ಸಿಕ್ಕ ಉಂಗುರ 3 ಸಾವಿರ ರೂಪಾಯಿ ಬೆಲೆಯನ್ನು ಬಾಳುತ್ತಿಲ್ಲ. ನಾವು 1000 ರೂಪಾಯಿಯಂತೆ 15 ಕಂತುಗಳನ್ನು ಕಟ್ಟಿದ್ದೇವೆ. ಕನಿಷ್ಠ ಅದರ ಅರ್ಧದಷ್ಟಾದರೂ ಕೊಡಬೇಕು ಎಂದು ಬರೆದುಕೊಂಡಿದ್ದಾರೆ. ಇದಾಗುತ್ತಲೇ ಸ್ಕೀಂ ಕುರಿತಂತೆ ಹಲವು ಆಪಾದನೆಗಳು ಕೇಳಿ ಬಂದಿವೆ.
ʼವಫಾʼ ಪ್ರಮುಖರಿಗೆ ಕರೆ!
ಇನ್ನು ಈ ಆರೋಪದ ಕುರಿತಂತೆ ಸ್ಪಷ್ಟನೆಗಾಗಿ ʼದಿ ನ್ಯೂಸ್ ಅವರ್ʼ ವಫಾ ಸಂಸ್ಥೆಯ ಪ್ರಮುಖರನ್ನು ಸಂಪರ್ಕಿಸಿತ್ತು. ಆದರೆ ಸಂಸ್ಥೆಯ ಪ್ರಮುಖರು ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಗೊಂದಲದ ಕುರಿತಂತೆ ವೈರಲ್ ಪೋಸ್ಟ್ ಆಧರಿಸಿ ಈ ಸುದ್ದಿಯನ್ನ ಬಿತ್ತರಿಸಲಾಗಿದೆ.
ಸ್ಪಷ್ಟನೆ ನೀಡಿದ ಯುವಕ!
ಈ ನಡುವೆ ಯುವಕನೊಬ್ಬ ದಿಢೀರ್ ಆಗಿ ವೀಡಿಯೋದಲ್ಲಿ ಕಾಣಿಸಿಕೊಂಡು ವಾಟ್ಸಾಪ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತನಗೆ ಸಿಕ್ಕ ಅಪೂರ್ಣ ಮಾಹಿತಿಯಿಂದ ಈ ಪೋಸ್ಟ್ ಅನ್ನ ಹಾಕಿದ್ದೇನೆ. ಇದು ನನಗೆ ಮಾಹಿತಿ ಕೊರತೆಯಿಂದ ಆಗಿದ್ದು ಎಂದು ಸ್ಪಷ್ಟನೆ ಪಡಿಸಿದ್ದಾನೆ. ಆದರೆ, ಆ ಸ್ಪಷ್ಟನೆ ನೀಡಿರೋ ವೀಡಿಯೋದ ಬಗ್ಗೆಯೇ ನಿಖರತೆ ಇಲ್ಲದಿರುವುದು ಕೂಡಾ ಗೊಂದಲ ಮೂಡಿಸಿದೆ.
ಹೀಗೆ ಸಂದೇಶ ಹರಿಬಿಟ್ಟ ಯುವಕ ಯಾರು? ನಿಜವಾಗಿಯೂ ಆತನೇ ಆ ಪೋಸ್ಟ್ ಹಾಕಿದ್ದನೇ? ಅಥವಾ ಸಂತ್ರಸ್ತನನ್ನು ಬೆದರಿಸಿ ಹೇಳಿಕೆ ಕೊಡಿಸಲಾಗಿದೆಯೇ? ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಕ್ಕಿಲ್ಲ. ʼವಫಾʼ ಸಂಸ್ಥೆಯ ಪ್ರಮುಖರು ಕರೆ ಸ್ವೀಕರಿಸದಿರುವುದು ಈ ಎಲ್ಲ ಗೊಂದಲಕ್ಕೆ ಯಾವುದೇ ಸ್ಪಷ್ಟನೆ ಇಲ್ಲದಂತಾಗಿದೆ.

ಎಚ್ಚರ ಎಚ್ಚರ ಎಚ್ಚರ👉👉👉
*ಸ್ಕೀಂ ಎಂಬ ಜಾಲಕ್ಕೆ ಬಲಿಯಾಗುತ್ತಿರುವ ಅಮಾಯಕ ಯುವಕ, ಯುವತಿಯರು😰😰 ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು…ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಕಡೆಗಳಲ್ಲಿ ಇದರ ಹಾವಳಿ ಹೆಚ್ಚಾಗುತ್ತಿದ್ದು ಎಲ್ಲಾ ಜಾತಿ ಧರ್ಮದವರು ಇಂತಹ ಜಾಲಕ್ಕೆ ಬೀಳದಂತೆ ಜಾಗೃತೆ ವಹಿಸಬೇಕು… ಈ ಮೇಲಿನ ಫೋಟೋದಲ್ಲಿರುವ ಬೆರಳು ಉಂಗುರ ವಫಾ ಎಂಟರ್ಪ್ರೈಸಸ್ ಎಂಬ, *ಸ್ಕೀಂ ನಲ್ಲಿ ಸಮಾಧಾನಕರ ಬಹುಮಾನ ದೊರಕಿರುವಂತಹದ್ದು, ತಿಂಗಳಿಗೆ 1000 ದಂತೆ ಸರಿಯಾಗಿ 15000 ಪಾವತಿ ಮಾಡಿದ್ದೇವೆ… ಇಂದು ಈ ಉಂಗುರವನ್ನು ಗೋಲ್ಡ್ ಶಾಪಿಗೆ ತೆಗೆದುಕೊಂಡು ಹೋಗಿ ಉದ್ರ ಬಗ್ಗೆ ತಿಳಿಯುವಾಗ, ಇದು ಮಿಕ್ಸ್ ಗೋಲ್ಡ್ 3000 ಸಿಗಬಹುದು ಎಂದು ಮಾಹಿತಿ ಸಿಕ್ಕಿತು…ಒಂದರ್ಥದಲ್ಲಿ ಹೇಳಬೇಕೆಂದರೆ ಇವರು ಈ ಜಾಲಕ್ಕೆ ಹೆಸರು ಪಡೆದುಕೊಳ್ಳುವಾಗ ಇವರು ಹೇಳುವುದು ನೀವು ಕಟ್ಟಿದ ಮೊತ್ತಕ್ಕೆ ಸರಿ ಸಮಾನವಾಗಿ ಸಮಾಧಾನಕರ ಬಹುಮಾನ ಕೊಡುತ್ತೇವೆ ಎಂದಾಗಿರುತ್ತದೆ.. ಅದಕ್ಕೆ ಅರ್ದವಾದರೂ ಕೊಟ್ಟು ಸಮಾಧಾನಕರ ನೀಡಬೇಕು… ಏನೇ ಆಗಲಿ ಇಂತಹ ಸ್ಕೀಂ ಎಂಬ ಜಾಲಕ್ಕೆ ಬಲಿಯಾಗುವ ಮುನ್ನ ಯೋಚಿಸಿ….*
ನೊಂದ ದಕ್ಷಿಣ ಕನ್ನಡ ನಾಗರಿಕ


