
ಬೆಂಗಳೂರು: ಕರ್ನಾಟಕ ಲೋಕಾಯುಕ್ತ) ಅಧಿಕಾರಿಗಳು ಇಂದು ಭರ್ಜರಿ ಭೇಟಿಯಾಡಿದ್ದಾರೆ. ಬೆಂಗಳೂರು ಮಂಗಳೂರು ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಒಟ್ಟು 60 ಕಡೆಗಳಲ್ಲಿ ಇಂದು ಲೋಕಾಯುಕ್ತ ಪೊಲೀಸರು ರೇಡ್ ಮಾಡಿದ್ದರು. ದಾಳಿ ವೇಳೆಯಲ್ಲಿ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿ ಕಂಡು ಲೋಕಾಯುಕ್ತರೇ ದಂಗಾಗಿದ್ದಾರೆ. ಬೆಂಗಳೂರಿನ ಕಾನೂನು ಮಾಪನ ಶಾಸ್ತ್ರ ವಿಭಾಗದ ಉಪ ನಿಯಂತ್ರಕ ಅಖ್ತರ್ ಅಲಿ ಎಂಬಾತನ ಮನೆಯಲ್ಲಂತೂ 2 ಕೋಟಿ ಬೆಲೆ ಬಾಳುವ ಚಿನ್ನಾಭರಣ ಸಿಕ್ಕಿದೆ. ಇನ್ನು 12 ಭ್ರಷ್ಟರ ಮನೆಯಲ್ಲಿ ಏನೇನು ಸಿಕ್ಕಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಆನಂದ್. ಸಿ. ಎಲ್
- ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ
- ಒಟ್ಟು 6 ಸ್ಥಳಗಳಲ್ಲಿ ಶೋಧ ಕಾರ್ಯ
- ದಾಳಿ ವೇಳೆ 3 ವಾಸದ ಮನೆಗಳು, 4 ಎಕರೆ 27 ಗುಂಟೆ ಕೃಷಿ ಜಮೀನು ಪತ್ತೆ
- 19,40,000 ರೂಪಾಯಿ ಬೆಲೆ ಬಾಳುವ ಚಿನ್ನಾಭರಣ
- 20,50,000 ರೂಪಾಯಿ ಬೆಲೆಬಾಳುವ ವಾಹನಗಳು
- 10,00,000 ರೂಪಾಯಿ ಜಮೀನು ಖರೀದಿಸಲು ಮುಂಗಡ ಹಣ
- ಹೆಂಡತಿ ಮತ್ತು ಮಕ್ಕಳ ಹೆಸರಿನ ಬ್ಯಾಂಕ್ ಖಾತೆಗಳಲ್ಲಿ 16,00,000 ರೂಪಾಯಿ
- ಎಲ್ಲಾ ಸೇರಿ ಒಟ್ಟು ಆಸ್ತಿ ಮೌಲ್ಯ – 2,77,90,000 ರೂಪಾಯಿ
ಅಖ್ತರ್ ಅಲಿ
- ಉಪ ನಿಯಂತ್ರಕ, ಕಾನೂನು ಮಾಪನ ಶಾಸ್ತ್ರ ಬೆಂಗಳೂರು ವಿಭಾಗ
- ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
- ದಾಳಿ ವೇಳೆ 4 ನಿವೇಶನಗಳು, 3 ವಾಸದ ಮನೆಗಳು, 25,18,650 ರೂಪಾಯಿ ನಗದು ಪತ್ತೆ
- 2,08,00,822 ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಪತ್ತೆ
- 11,00,000 ರೂಪಾಯಿ ಬೆಲೆಬಾಳುವ ವಾಹನಗಳು
- 37,45,599 ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತು
- ಅಖ್ತರ್ ಅಲಿ ಒಟ್ಟು ಆಸ್ತಿ ಮೌಲ್ಯ 8,63,65,071 ರೂಪಾಯಿ
ಚೇತನ್ ಕುಮಾರ್
- ಜಿಲ್ಲಾ ಕಾರ್ಮಿಕ ಅಧಿಕಾರಿ, ಮೈಸೂರು ವಿಭಾಗ
- ಒಟ್ಟು 7 ಸ್ಥಳಗಳಲ್ಲಿ ಶೋಧ
- 2 ನಿವೇಶನಗಳು, 1 ವಾಸದ ಮನೆ, 1 ವಾಣಿಜ್ಯ ಸಂಕೀರ್ಣ
- 7-69 ಎಕರೆ ಕೃಷಿ ಜಮೀನು ಇರೋದು ಪತ್ತೆ
- ಎಲ್ಲಾ ಸೇರಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 4,36,00,000 ರೂಪಾಯಿ
- 58,00,000 ರೂಪಾಯಿ ನಗದು, 14,71,500 ರೂಪಾಯಿ ಬೆಲೆ ಬಾಳುವ ಚಿನ್ನಾಭರಣ
- 30,00,000 ರೂಪಾಯಿ ಬೆಲೆ ಬಾಳುವ ವಾಹನಗಳು ಪತ್ತೆ
- 1,02,71,500 ರೂಪಾಯಿ ಮೌಲ್ಯದ ಚರಾಸ್ಥಿ ಪತ್ತೆ
- ಚೇತನ್ ಕುಮಾರ್ ಒಟ್ಟು ಆಸ್ತಿ ಮೌಲ್ಯ – 5,38,71,500 ರೂಪಾಯಿ
ಆರ್. ಸಿದ್ದಪ್ಪ, ನಿರೀಕ್ಷಕರು
- ಪಶುಸಂಗೋಪನೆ ಇಲಾಖೆ, ರಾಮೇಶ್ವರ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
- 9 ನಿವೇಶನಗಳು, 3 ವಾಸದ ಮನೆಗಳು, 5 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 2,65,00,000
- 3,65,000 ರೂಪಾಯಿ ನಗದು, ರೂ. 11,68,823 ಬೆಲೆ ಬಾಳುವ ಚಿನ್ನಾಭರಣಗಳು, ರೂ 12,35,000 ಬೆಲೆಬಾಳುವ ವಾಹನಗಳು, ರೂ. 4,50,000 ಬೆಲೆಬಾಳುವ ಇತರೆ ವಸ್ತುಗಳು
- ಎಲ್ಲಾ ಸೇರಿ ಒಟ್ಟು ಆಸ್ತಿ ಮೌಲ್ಯ- ರೂ 2,93,53,823.
ಪ್ರಕಾಶ್. ಜಿ. ಎನ್, ಉಪ-ನಿರ್ದೇಶಕ
- ತೋಟಗಾರಿಕೆ ಇಲಾಖೆ, ಶಿವಮೊಗ್ಗ
- ಒಟ್ಟು 3 ಸ್ಥಳಗಳಲ್ಲಿ ಶೋಧ ಕಾರ್ಯ
- 2 ವಾಸದ ಮನೆಗಳು, 2 ಎಕರೆ 08 ಗುಂಟೆ ಕೃಷಿ ಜಮೀನು
- ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,40,00,000
- 12,86,500- ನಗದು, ರೂ 38,32,630- ಬೆಲೆ ಬಾಳುವ ಚಿನ್ನಾಭರಣಗಳು, 5,20,000- ಬೆಲೆಬಾಳುವ ವಾಹನಗಳು, ರೂ. 11,30,000 ಬೆಲೆಬಾಳುವ ಇತರೆ ವಸ್ತುಗಳು ಎಲ್ಲಾ ಸೇರಿ ಒಟ್ಟು ಮೌಲ್ಯ 67,69,130
- ಎಲ್ಲಾ ಸೇರಿ ಒಟ್ಟು ಆಸ್ತಿ ಮೌಲ್ಯ- ರೂ 2,07,69,130
ರಮೇಶ್ ಕುಮಾರ್, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ
- ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು
- ಒಟ್ಟು 4 ಸ್ಥಳಗಳಲ್ಲಿ ಶೋಧಕಾರ್ಯ
- ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ – 2 ವಾಸದ ಮನೆಗಳು ಎಲ್ಲಾ ಸೇರಿ ಒಟ್ಟು ಮೌಲ್ಯ. 2,30,00,000/
- ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 31.50.000
- ಬೆಲೆ ಬಾಳುವ ಚಿನ್ನಾಭರಣಗಳು, ರೂ 15,00,000
- ಬೆಲೆಬಾಳುವ ವಾಹನಗಳು, ರೂ 20,00,000
- ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು, ರೂ. 1.12.00,00
- ಇತರೆ ವಸ್ತುಗಳು ಮತ್ತು ವೆಚ್ಚಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ 1,78,00,000
- ಎಲ್ಲಾ ಸೇರಿ ಒಟ್ಟು ಆಸ್ತಿ ಮೌಲ್ಯ 4,0800000 ರೂಪಾಯಿ
ಬಲವಂತ್ ರಾಥೋಡ್, ಯೋಜನಾ ನಿರ್ದೇಶಕ
- ಜಿಲ್ಲಾ ಪಂಚಾಯತ್, ಯಾದಗಿರಿ ಜಿಲ್ಲೆ
- ಒಟ್ಟು 3 ಸ್ಥಳಗಳಲ್ಲಿ ಶೋಧ
- ದಾಳಿ ವೇಳೆ 5 ನಿವೇಶನಗಳು ,1 ವಾಸದ ಮನೆ
- 3,68,100 ರೂಪಾಯಿ ನಗದು ಪತ್ತೆ
- 17,59,348 ರೂ ಬೆಲೆ ಬಾಳುವ ಚಿನ್ನಾಭರಣಗಳು
- 18,64,000 ರೂ ಬೆಲೆಬಾಳುವ ವಾಹನಗಳು
- 12,00,000 ರೂ ಬೆಲೆಬಾಳುವ ಇತರೆ ವಸ್ತುಗಳು ಸೇರಿ
- ಒಟ್ಟು 1,69,86,448 ರೂ ಮೌಲ್ಯದ ಆಸ್ತಿ ಹೊಂದಿರೋದು ಪತ್ತೆ..
ಮುದ್ದುಕುಮಾರ್, ಅಪರ ನಿರ್ದೇಶಕ ನಿಯೋಜನೆ ಮೇರೆಗೆ ಸಿ.ಓ.ಓ
- ಇನ್ವೆಸ್ಟ್ ಕರ್ನಾಟಕ ಫೋರಂ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
- ಖನಿಜ ಭವನ, ಬೆಂಗಳೂರಿನಲ್ಲಿ ಕೆಲಸ
- 10 ಸ್ಥಳಗಳಲ್ಲಿ ಶೋಧ ಕಾರ್ಯ
- ದಾಳಿ ವೇಳೆ 3 ವಾಸದ ಮನೆಗಳು,6 ಎಕರೆ 20 ಗುಂಟೆ ಕೃಷಿ ಜಮೀನು
- 1 ಫಾರ್ಮ್ ಹೌಸ್,1,13,000 ರೂಪಾಯಿ ನಗದು
- 88,75,915 ರೂ ಬೆಲೆ ಬಾಳುವ ಚಿನ್ನಾಭರಣಗಳು
- 35,40,000 ರೂ ಬೆಲೆಬಾಳುವ ವಾಹನಗಳು
- 3,00,00,000 ಮೌಲ್ಯದ ತರುಣ್ ಎಂಟರ್ ಪ್ರೈಸಸ್ 1 ಶೆಡ್
- 68,86,000 ರೂ ಬೆಲೆಬಾಳುವ ಇತರೆ ಉಳಿತಾಯ ಸೇರಿ 7,41,44,915 ರೂಪಾಯಿ ಮೌಲ್ಯದ ಆಸ್ತಿ ಪತ್ತೆ
ಬಿ.ವಿ. ರಾಜ, ಪ್ರಥಮ ದರ್ಜೆ ಸಹಾಯಕರು
- ಭೂ ಸ್ವಾಧೀನಾಧಿಕಾರಿ ಕಛೇರಿ, ಕೆ.ಐ.ಎ.ಡಿ.ಬಿ, ಮಂಗಳೂರು
- ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಿದ ಲೋಕಾಯುಕ್ತ
- ದಾಳಿ ವೇಳೆ 1 ನಿವೇಶನ, 6 ವಾಸದ ಮನೆಗಳು
- 7,000 ನಗದು,40,00,000 ಬೆಲೆ ಬಾಳುವ ಚಿನ್ನಾಭರಣಗಳು
- 32,00,000 ಬೆಲೆಬಾಳುವ ವಾಹನಗಳು
- 25,00,000 ಬೆಲೆ ಬಾಳುವ ಗೃಹೋಪಯೋಗಿ ವಸ್ತು
- 50,00,000 ಬೆಲೆಬಾಳುವ ಇತರೆ ವಸ್ತುಗಳು ಸೇರಿ- ರೂ 5,51,07,000 ಮೌಲ್ಯದ ಆಸ್ತಿ ಪತ್ತೆ
ನಾಗೇಶ್, ಅಧ್ಯಕ್ಷ, ಅಂತರಗಂಗೆ ಗ್ರಾಮ ಪಂಚಾಯಿತಿ
- ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
- ನಾಗೇಶ್ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧ
- ದಾಳಿ ವೇಳೆ 2, ನಿವೇಶನಗಳು, 2 ವಾಸದ ಮನೆಗಳು
- 5 ಎಕರೆ 14 ಗುಂಟೆ ಕೃಷಿ ಜಮೀನು
- 5,71,640 ರೂಪಾಯಿ ನಗದು
- 12,80,186 ರೂ ಬೆಲೆ ಬಾಳುವ ಚಿನ್ನಾಭರಣಗಳು
- 1,76,000 ರೂ ಬೆಲೆಬಾಳುವ ವಾಹನಗಳು
- ಸೇರಿ ಒಟ್ಟು 2,19,37,826 ರೂಪಾಯಿ ಮೌಲ್ಯದ ಆಸ್ತಿ ಪತ್ತೆ


