ಮಡಿಕೇರಿ : ಕೊಡಗಿನಲ್ಲೊಂದು ಅಮಾನವೀಯ ಘಟನೆ : ಡ್ರಾಪ್ ಕೇಳಿದ ಬಾಲಕಿ‌ ಮೇಲೆ ಯುವಕರಿಂದ ಅತ್ಯಾಚಾರ,ಐವರ ಬಂಧನ.

ಮಡಿಕೇರಿ : ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಕಾಫಿ ತೋಟದಲ್ಲಿ ಡ್ರಾಪ್ ಕೇಳಿದ ಬಾಲಕಿ‌ ಮೇಲೆ ತಮ್ಮ‌ ಜೊತೆಯಲ್ಲಿ‌ ಬಂದಿದ್ದ ಯುವಕರಿಂದಲೇ ಅತ್ಯಾಚಾರ ಮಾಡಿರುವಂತಹ ಘಟನೆ ಜೂನ್ 9 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ರಸ್ತೆಯಲ್ಲಿ ನಡೆದು ಸಾಗುತ್ತಿದ್ದರು ಮೂವರು ಜೂನ್ 9 ರಂದು ಬರುತಿದ್ದ ಕಾರನ್ನು ತಡೆದು ನಾಗರಹೊಳೆಗೆ ಡ್ರಾಪ್‌ ನೀಡುವಂತೆ ವಿನಂತಿ ಮಾಡಿದ್ದರು. ಆದರೆ ಆ ಕಾರಿನಲ್ಲಿ ಕಾಮುಕರಿರುವುದು ಇವರಿಗೆ ತಿಳಿದಿರಲಿಲ್ಲ ಮಾರುತಿ 800 ಕಾರಿನಲ್ಲಿ ನಾಗರಹೊಳೆ‌ ಕಡೆ ಬಾಲಕಿಯರು ತೆರಳಿದ್ದು, ದಾರಿ‌ ಮಧ್ಯೆ ಕಾಫಿ ತೋಟದಲ್ಲಿ ಓರ್ವ ಬಾಲಕಿ ಮೇಲೆ ನವೀಂದ್ರ, ಅಕ್ಷಯ್​ ಎಂಬುವವರಿಂದಲೇ ಅತ್ಯಾಚಾರ ಮಾಡಲಾಗಿದೆ. ಮತ್ತೋರ್ವ ಬಾಲಕಿ‌ ಮೇಲೆ ರಾಹುಲ್, ಮನು, ಸಂದೀಪ್​​ ಎಂಬುವವರಿಂದ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆದರೆ ಕಾರಿನಲ್ಲಿ ಇದ್ದ ಐವರೂ ಕೂಡ ಕಾಮುಕರಾಗಿರುವುದೇ ವಿಪರ್ಯಾಸ.ಸಂತ್ರಸ್ತ ಬಾಲಕಿಯರಿಂದ ಕುಟ್ಟ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ‌ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *