ಉಡುಪಿಯ ಹಿರಿಯ ನ್ಯಾಯವಾದಿ, ನೋಟರಿ ಜಿ. ಮೋಹನ್‌ ದಾಸ್ ಶೆಟ್ಟಿ ನಿಧನ

ಉಡುಪಿ: ಉಡುಪಿಯ ಹಿರಿಯ ನ್ಯಾಯವಾದಿ, ನೋಟರಿ ಜಿ.ಮೋಹನ್‌ದಾಸ್ ಶೆಟ್ಟಿ (55) ಇಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮೃತರು ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಸಿವಿಲ್, ಕ್ರಿಮಿನಲ್, ರೆವೆನ್ಯೂ ಹಾಗೂ ಗ್ರಾಹಕ ವ್ಯಾಜ್ಯಗಳಲ್ಲಿ ಅವರು ಅಪಾರ ಪರಿಣತಿ ಹೊಂದಿದ್ದರು ಎಂದು ತಿಳಿಯಲಾಗಿದೆ.

1998ರಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ಮಾರ್ಚ್ 1998 ರಿಂದ ಉಡುಪಿಯ ಹಿರಿಯ ನ್ಯಾಾಯವಾದಿ ಆನಂದ ಶೆಟ್ಟಿಯವರ ಕಚೇರಿಯಲ್ಲಿ ಕಿರಿಯ ನ್ಯಾಯವಾದಿಯಾಗಿ ತರಬೇತಿ ಪಡೆದುಕೊಂಡಿದ್ದರು.  2001ರಿಂದ ಉಡುಪಿಯಲ್ಲಿ ಸ್ವಂತ ಕಚೇರಿ ಮಾಡಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕರ್ಣಾಟಕ ಬ್ಯಾಂಕ್, ಎಸ್‌ಸಿಡಿಸಿಸಿ, ಓರಿಯಂಟಲ್ ಇನ್ಶೂರೆನ್‌ಸ್‌ ಕಂಪೆನಿ ಲಿ,  ಗುರು ಮಾಚಿದೇವ ವಿ.ಸ.ಸಂಘ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿದ್ದರು.

ಕಿರಿಯ ನ್ಯಾಯವಾದಿಗಳಿಗೆ ಮಾರ್ಗದರ್ಶಕರಾಗಿದ್ದು ಉಡುಪಿಯ ವಕೀಲರ ಸಂಘದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. ಮೃತರ ಅಗಲುವಿಕೆಗೆ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್‌ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಟಿ.ವಿಜಯ ಕುಮಾರ್ ಶೆಟ್ಟಿ, ಬಿ.ನಾಗರಾಜ್, ಎ.ಸಂಜೀವ, ಜಿ.ಅಶೋಕ್ ಕುಮಾರ್ ಶೆಟ್ಟಿ, ಗುರುಮಾಚಿದೇವ ಸಹಕಾರಿ ಸಂಘದ ಅಧ್ಯಕ್ಷ, ನ್ಯಾಯವಾದಿ ಎಚ್. ಆನಂದ ಮಡಿವಾಳ, ವಕೀಲರ ಸಂಘದ ಎಲ್ಲ ನ್ಯಾಯವಾದಿಗಳು ಸಂತಾಪ ಸೂಚಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *