ಜನಮನ ಸೂರೆಗೊಂಡ ಆನಡ್ಕ ಶಾಲಾ ವಿದ್ಯಾರ್ಥಿಗಳ ಮೆಟ್ರಿಕ್ ಮೇಳ.


ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿಯ ಶಾಲಾ ಮೈದಾನ ಮಕ್ಕಳ ಕಲರವದೊಂದಿಗೆ ಮೆಟ್ರಿಕ್ ಮೇಳಕ್ಕೆ ಸಿದ್ಧಗೊಂಡಿತ್ತು.


ಮನೆಯಲ್ಲಿ ಬೆಳೆದ ವಿವಿಧ ತರಕಾರಿಗಳು ಹಣ್ಣು ಹಂಪಲು ಔಷಧೀಯ ಗುಣವುಳ್ಳ ಗಿಡಗಳು, ತೊಗಟೆಗಳು, ಎಳನೀರು, ಮನೆಯಲ್ಲಿ ತಯಾರಿಸಿದ ತಿಂಡಿಗಳು, ವಿವಿಧ ರೀತಿಯ ಪಾನಕಗಳು, ವಿವಿಧ ಆಟಗಳೊಂದಿಗೆ ವಿದ್ಯಾರ್ಥಿಗಳು ತಾವೇ ಕಟ್ಟಿದ ಅಂಗಡಿಗಳಲ್ಲಿ ವ್ಯಾಪಾರಕ್ಕೆ ನಿಂತು ಗ್ರಾಹಕರನ್ನು ಸೆಳೆದರು. ಪ್ರತಿಯೊಂದು ಅಂಗಡಿಗಳಲ್ಲಿಯೂ ವಸ್ತುಗಳ ದರಪಟ್ಟಿ ಮತ್ತು ಹೋಟೆಲ್ ಮೆನು ಎಲ್ಲರ ಗಮನ ಸೆಳೆಯಿತು. ಊರ ಜನರು ಬಂದು ಭರ್ಜರಿ ವ್ಯಾಪಾರ ನಡೆಸಿದರು.


ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಶ್ರೀ ಎಂ ದಿನೇಶ ಗೌಡ ಮೆಟ್ರಿಕ್ ಮೇಳಕ್ಕೆ ಚಾಲನೆ ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ನಾರಾಯಣ ಸುವರ್ಣ, ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಶ್ರೀ ಸುಧಾಕರ ಕುಲಾಲ್, ಸದಸ್ಯ ಶ್ರೀ ತಾರನಾಥ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಶ್ರೀಮತಿ ಶುಭ ಲತಾ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರಿಮೊಗರು ಕ್ಲಸ್ಟರ್ ಸಿ ಆರ್ ಪಿ ಶ್ರೀಮತಿ ಪರಮೇಶ್ವರಿ ಮೆಟ್ರಿಕ್ ಮೇಳದ ಉದ್ದೇಶವನ್ನು ತಿಳಿಸಿದರು.

ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್ ಎಸ್ ಆರ್ ಮೆಟ್ರಿಕ್ ಮೇಳಕ್ಕೆ ಭೇಟಿ ಇತ್ತು ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.BIRT ತನುಜಾ ಮೇಡಂ, ಶುಭ ಹಾರೈಸಿದರು.
ಗಣಿತ ಶಿಕ್ಷಕಿ ಶ್ರೀಮತಿ ಅಕ್ಷತಾ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಶಿಕ್ಷಕರಾದ ಫೆಲ್ಸಿಟಾ ಡಿ ಕುನ್ಹಾ, ವಿಶಾಲಾಕ್ಷಿ ಕೆ, ಮಾಲತಿ, ಸೌಮ್ಯ ಸಹಕರಿಸಿದರು.

ಶಾಲಾ ಗಣಿತ ಸಂಘದ ವತಿಯಿಂದ ಹಮ್ಮಿಕೊಂಡ ಮೆಟ್ರಿಕ್ ಮೇಳವು ವಿದ್ಯಾರ್ಥಿಗಳಲ್ಲಿ ವ್ಯವಹಾರ ಹಾಗೂ ವ್ಯಾಪಾರ ಕೌಶಲವನ್ನು ಬೆಳೆಸುವ ನಿಟ್ಟಿನಲ್ಲಿ ಸಹಕಾರಿಯಾಯಿತು.
ಶಾಲಾ ಎಸ್ ಡಿ ಎಂ ಸಿ ಮತ್ತು ಪೋಷಕರ ಸಹಕಾರದೊಂದಿಗೆ ಆನಡ್ಕ ಶಾಲಾ ಮೆಟ್ರಿಕ್ ಮೇಳ ಜನಮನ ಸೂರೆಗೊಂಡಿತು.

News Editor

Learn More →

Leave a Reply

Your email address will not be published. Required fields are marked *