
ಮೇ 7 ರಂದು ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕದ 12 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ದು, ರಾಯಚೂರು 45.2 ಡಿಗ್ರಿಯೊಂದಿಗೆ ಅಗ್ರಸ್ಥಾನದಲ್ಲಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಶನಿವಾರ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ಸಾರ್ವಜನಿಕರಿಗೆ ಮಳೆರಾಯ ಅಲ್ಲಲ್ಲಿ ತಂಪೆರೆಯುತ್ತಿದ್ದಾನೆ. ಆದರೆ ಬೆಂಗಳೂರಲ್ಲಿ ಮಾತ್ರ ಮಳೆ ಬಂತು, ನಮ್ಮಲ್ಲಿ ಮಳೆ ಯಾವಾಗ ಎಂದು ದಕ್ಷಿಣ ಕನ್ನಡದ ಜನ ಕೇಳುವಂತಾಗಿದೆ. ಇದಕ್ಕೆ ಸ್ವತಃ ಹವಾಮಾನ ಇಲಾಖೆಯೇ ಉತ್ತರ ನೀಡಿದೆ.
ಭಾರತದ ಹವಾಮಾನ ಇಲಾಖೆ (IMD) ದೇಶಾದ್ಯಂತ ಕೆಲವು ಕಡೆ ವಿಪರೀತ ಸೆಕೆ ಮತ್ತು ಕೆಲವು ಮಳೆಯ ಮುನ್ಸೂಚನೆ ನೀಡಿದೆ. ದೇಶದೆಲ್ಲೆಡೆ ಕಳೆದ ಕೆಲವು ಬಿಸಿಲು ಧಗಧಗನೆ ಉರಿಯುತ್ತಿದೆ. ಜನ ಸೆಕೆ ತತ್ತರಿಸಿದ್ದಾರೆ. ಬೆಳಗ್ಗೆಯಿಂದಲೇ ಬಿಸಿಲು ತಾಪ ಆರಂಭವಾಗಿ ಹೊರಗಡೆ ಜನ ತಿರುಗಾಡಲು ಯೋಚಿಸುವಂತಾಗಿದೆ.
ಒಟ್ಟಾರೆ ಮೇ 7ರಿಂದ ಆದ್ರೂ ದಕ್ಷಿಣ ಕನ್ನಡದ ಭಾಗದಲ್ಲಿ ಮಳೆ ಆರಂಭವಾದರೆ ಸಾರ್ವಜನಿಕರು ಸಮಾಧಾನ ಪಡುಬಹುದಾಗಿದೆ.



