ಭವಾನಿ ಇಲ್ಲದಿದ್ದಾಗ ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ : ರೇವಣ್ಣ ಮೇಲೆಯೂ FIR

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಾಮ ಪುರಾಣ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ರೇವಣ್ಣ ಮನೆ ಕೆಲಸದಾಕೆ ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್.ಡಿ ರೇವಣ್ಣರ ಮೇಲೆಯೂ ದೂರು ದಾಖಲಿಸಿದ್ದಾರೆ.

ಮಹಿಳೆ ದೂರಿನ ಮೇರೆಗೆ ತಂದೆ ಹಾಗೂ ಮಗ ಇಬ್ಬರ ಮೇಲೂ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. 47 ವರ್ಷದ ಮಹಿಳೆಯಿಂದ ಹೊಳೆನರಸೀಪುರ ನಗರ ಠಾಣೆಯಲ್ಲಿ ಈ ದೂರು ದಾಖಲಾಗಿದೆ.
ದೂರು ನೀಡಿರುವ ಮಹಿಳೆ ಭವಾನಿ ರೇವಣ್ಣರ ಸೋದರತ್ತೆ ಮಗಳು. ಹೆಚ್.ಡಿ ರೇವಣ್ಣ ಶಾಸಕರಾಗಿದ್ದಾಗ ನಾಗಲಾಪುರ ಹಾಲಿನ ಡೈರಿಯಲ್ಲಿ ಈಕೆಗೆ ಕೆಲಸ ಕೊಡಿಸಿದ್ದರು. ಬಳಿಕ ಬಿಸಿಎಂ ಹಾಸ್ಟಲ್​ನಲ್ಲಿ ಅಡುಗೆ ಕೆಲಸ ಕೊಡಿಸಿದ್ದರು. 2015 ರಲ್ಲಿ ರೇವಣ್ಣ ಅವರ ಮನೆಯಲ್ಲೇ ಕೆಲಸಕ್ಕೆ ಸೇರಿಸಿಕೊಂಡಿದ್ದರು.
ರೇವಣ್ಣ ಮನೆಯಲ್ಲಿ ಒಟ್ಟು 6 ಜನ ಹೆಣ್ಣು ಮಕ್ಕಳು ಕೆಲಸ ಮಾಡ್ತಾ ಇದ್ದರು. ಕೆಲಸಕ್ಕೆ ಸೇರಿಕೊಂಡ ನಾಲ್ಕು ತಿಂಗಳಿಗೆ ಕೊಠಡಿಗೆ ಬರುವಂತೆ ರೇವಣ್ಣ ಆಹ್ವಾನಿಸಿದ್ದರು. ಇನ್ನೂ ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದಿದ್ದಾಗ ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಸ್ಟೋರ್ ರೂಂನಲ್ಲಿ ಹಣ್ಣು ಕೊಡುವ ನೆಪದಲ್ಲಿ ಕೈ ಹಿಡಿದು ಎಳೆದಾಡಿದ್ದರು ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಅಡುಗೆ ಮನೆಯಲ್ಲಿ ಇದ್ದಾಗ ಪ್ರಜ್ವಲ್ ರೇವಣ್ಣ ಹಿಂಬದಿಯಿಂದ ಬಂದು ಮೈ‌ಮುಟ್ಟಿ ಹೊಟ್ಟೆ ಜಿಗುಟುತ್ತಿದ್ದರು. ಜೊತೆಗೆ ಎಣ್ಣೆ ಹಚ್ಚಲು ಪದೇ ಪದೆ ಕರೆದು ಲೈಂಗಿಕ ದೌರ್ಜನ್ಯ ನಡೆಸ್ತಾ ಇದ್ದರು. ಮನೆಯಲ್ಲಿದ್ದಾಗ ವೀಡಿಯೋ ಕಾಲ್ ಮಾಡಿ ನನ್ನ ಮಗಳ ಜೊತೆ ಅಸಭ್ಯವಾಗಿ ಮಾತನಾಡ್ತಿದ್ದರು. ಇದಕ್ಕೆ ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಕೂಡ ಮಾಡಿದ್ದಳು. ಇದರಿಂದ‌ ಮನೆ ಕೆಲಸ ಬಿಟ್ಟು ಹೊರಗಡೆ ಬಂದಿದ್ದಾಗಿ ಮಹಿಳೆ ತಿಳಿಸಿದ್ದಾರೆ.
ಈಗ ಕೆಲ ವೀಡಿಯೋಗಳು ವೈರಲ್ ಆಗ್ತಿದ್ದು, ನನ್ನ ಗಂಡ ಶೀಲ ಶಂಕಿಸ್ತಿದ್ದಾರೆ. ಇದರಿಂದ ಮನನೊಂದು ದೂರು ನೀಡುತ್ತಿರೋದಾಗಿ 47 ವರ್ಷದ ಮಹಿಳೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಸಂತ್ರಸ್ಥೆಯ ದೂರಿನನ್ವಯ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ. ರೇವಣ್ಣ ಇಬ್ಬರ ಮೇಲೂ ಎಫ್​ಐಆರ್ ದಾಖಲು ಮಾಡಲಾಗಿದೆ

News Editor

Learn More →

Leave a Reply

Your email address will not be published. Required fields are marked *