ಅಕ್ರಮ ಮದ್ಯ ಮಾರಾಟ : ಮಂಗಳೂರು

ನಗರದ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ತಾಲೂಕಿನ ಮೊಗರು ಗ್ರಾಮದ ಜಯಾನಂದ ಕುಲಾಲ್(48) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಮೊಗರು ಗ್ರಾಮದ ತಾರೆಮಾರ್ ಎಂಬಲ್ಲಿ ಗಂಜಿಮಠ ಕಡೆಯಿಂದ ಮುತ್ತೂರು ಕಡೆಗೆ ಹಾದು ಹೋಗಿರುವ ರಸ್ತೆಯ ಬದಿಯಲ್ಲಿರುವ ಜಯಾನಂದ ಕುಲಾಲ್‌ರವರ ಅಂಗಡಿಯ ಬಳಿ ಅಕ್ರಮ ಮದ್ಯ ಮಾರಾಟ ಬೆಳಕಿಗೆ ಬಂದಿದೆ.

ರವರು ಜಯಾನಂದ್ ಕುಲಾಲ್ ರವರ ಅಂಗಡಿಯ ಒಳಗಡೆ ಹೋಗಿ ನೋಡಿದಾಗ ಶೋಕೇಸ್‌ನ ಅಡಿಯಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ 90 ML‌ನ ಒಟ್ಟು 24 ಮದ್ಯದ ಟೆಟ್ರಾ ಪ್ಯಾಕೇಟ್‌ಗಳಿರುವುದು ಕಂಡು ಬಂದಿದೆ. ಮದ್ಯ ಮಾರಾಟದ ಬಗ್ಗೆ ಕೇಳಿದಾಗ ಪರವಾನಿಗೆ ಇಲ್ಲ ಎಂದು ತಿಳಿಸಿದ್ದಾರೆ.

ಅದರಂತೆ ಪಿ.ಎಸ್.ಐ.ರವರು ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಅಂಗಡಿಯ ಮಾಲಿಕ ಜಯಾನಂದ ಕುಲಾಲ್‌ರವರನ್ನು ಬಂಧಿಸಿದ್ದಾರೆ. ಬಂಧಿತನ ಬಳಿಯಿಂದ 24 ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮದ್ಯ ಮಾರಾಟ ಮಾಡಿ ಗಳಿಸಿದ್ದ 550/- ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News Editor

Learn More →

Leave a Reply

Your email address will not be published. Required fields are marked *