ಸರಕಾರಿ ಉದ್ಯೋಗ ದೊರಕಿಸಿ ಕೊಡುವುದಾಗಿ ಯುವಕನೋರ್ವನಿಗೆ ಲಕ್ಷಾಂತರ ರೂ ಹಣವನ್ನು ವಂಚನೆ ಮಾಡಿದ ಕಾಂಗ್ರೆಸ್ ಮುಖಂಡ-ಬಂಟ್ವಾಳ ಪುಂಜಾಲಕಟ್ಟೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ: ಸರಕಾರಿ ಉದ್ಯೋಗ ದೊರಕಿಸಿ ಕೊಡುವುದಾಗಿ ಯುವಕನೋರ್ವನಿಗೆ ಲಕ್ಷಾಂತರ ರೂ ಹಣವನ್ನು ವಂಚನೆ ಮಾಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಬಂಟ್ವಾಳ ಪುಂಜಾಲಕಟ್ಟೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಕ್ಕಿಪಾಡಿ ನಿವಾಸಿ ಕಾರ್ತಿಕ್ ಎಂಬಾತನಿಗೆ ವಾಮಪದವು ನಿವಾಸಿ ಪದ್ಮನಾಭ ಸಾಮಂತ್ ಎಂಬಾತ ಲಕ್ಷಾಂತರ ರೂ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾನೆ.
ಕುಕ್ಕಿಪಾಡಿ ನಿವಾಸಿ ಕಾರ್ತಿಕ್ ಎಂಬಾತ ಬಡತನದ ಕುಟುಂಬದ ಯುವಕನಾಗಿದ್ದು, ಮಂಗಳೂರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಈತನಿಗೆ ,ಸರಕಾರಿ ಉದ್ಯೋಗದ ಕನಸು ಹೊಂದಿದ್ದ.

ಈ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಪರಿಚಯಸ್ಥನಾಗಿದ್ದ ಪದ್ಮನಾಭ ಸಾಮಂತ ಎಂಬಾತ ಸರಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದು ಬೆಂಗಳೂರಿನ ಕಾವೇರಿ ಭವನದಲ್ಲಿರುವ ನೀರಾವರಿ ನಿಗಮದಲ್ಲಿ ಗುಮಾಸ್ತ ಉದ್ಯೋಗ ತೆಗಿಸಿಕೊಡುವ ಭರವಸೆ ನೀಡಿದ್ದ.

ಸರಕಾರಿ ಉದ್ಯೋಗ ತೆಗೆಸಿಕೊಡುವುದಕ್ಕೆ 2ಲಕ್ಷ ಹಣವನ್ನು ನೀಡುವಂತೆ ತಿಳಿಸಿದ್ದಲ್ಲದೆ, ನಂಬಿಕೆಯನ್ನು ಮೂಡಿಸಲು ನೀರಾವರಿ ನಿಗಮದ ಹೆಸರಿನಲ್ಲಿ ಛಾಪ ಕಾಗದವನ್ನು ತೆಗೆದ ಈತ ಉದ್ಯೋಗ ಸಿಕ್ಕಿದ ಮೇಲೆ ತಂದೆತಾಯಿಗೆ ಇ.ಎಸ್.ಐ.ಸೌಲಭ್ಯಕ್ಕಾಗಿ ಇಬ್ಬರ ಬ್ಯಾಂಕ್‌ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿಯನ್ನು ಹಾಗೂ ಕಾರ್ತಿಕ್ ನ ಬ್ಯಾಂಕ್ ಜೆರಾಕ್ಸ್ ಪಾಸ್ ಪುಸ್ತಕವನ್ನು ಪಡೆದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ನಿಗಮದ ಎಂ.ಡಿ.ಅವರಿಗೆ ಹಣ ನೀಡುವ ನೆಪದಲ್ಲಿ ಹಂತಹಂತವಾಗಿ ರೂ. 1,51,750 ಲಕ್ಷ ರೂ ನ್ನು ಪಡೆದುಕೊಂಡಿದ್ದ. ಇದೀಗ ವಂಚನೆಗೊಳಗಾದ ಯುವಕ ಕಾರ್ತಿಕ್ ಪುಂಜಾಲಕಟ್ಟೆ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

News Editor

Learn More →

Leave a Reply

Your email address will not be published. Required fields are marked *