ಶಾಹಿಲ್ ಹಾಗೂ ಶಾಲಿ ಇವರ ಪಾಲುದರಿಕೆಯಲ್ಲಿ ಮಂಗಳೂರಿನ ತಲಪಾಡಿಯಲ್ಲಿ ನೂತನವಾಗಿ ಆರಂಭಗೊಂಡ hp ಪೆಟ್ರೋಲ್ ಬಂಕ್ ನ ಉದ್ಘಾಟನಾ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಹೆಚ್.ಪಿ ಯ ಸಾಧನೆಯು ಇನ್ನೂ ಉತ್ತುಂಗಕ್ಕೆ ಏರಿ ಇಂತಹ ಶಾಖೆ ಗಳನ್ನು ತೆರೆಯಲು ಭಗವಂತ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.


ಮಂಗಳೂರಿನ ತಲಪಾಡಿಯಲ್ಲಿ ನೂತನವಾಗಿ ಆರಂಭಗೊಂಡ ಹೆಚ್. ಪಿ ಪೆಟ್ರೋಲ್ ಬಂಕ್ ನ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ .ಟಿ ಅವರು ಪೆಟ್ರೋಲ್ ಹಾಕಿಸುವ ಮುಖಾಂತರ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭಾ ಸದಸ್ಯರಾದ ಎನ್ಎ ಹ್ಯಾರಿಸ್ ಹಾಗೂ ಕರ್ನಾಟಕ ವಿಧಾನಸಭಾ ಸ್ಪೀಕರ್ ಆದ ಯು ಟಿ ಖಾದರ್ ಅವರು ನೆರವೇರಿಸಿ ಮಾತನಾಡಿದರು.
ಎಚ್ ಪಿ ಎಸ್ ಸಾಧನೆಯು ಇನ್ನು ಉತ್ತುಂಗಕ್ಕೇರಿ ಹಲವಾರು ಕಡೆ ಇಂತಹ ಬ್ರಾಂಚುಗಳನ್ನ ತೆರೆಯಲು ಭಗವಂತ ಶಕ್ತಿ ನೀಡಲಿ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಹೆಚ್ ಪಿ ಸಿ ಎಲ್ ಡಿಜಿಎಂ ನವೀನ್ ಕುಮಾರ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರಶಾಂತಿ ಮಂಜೇಶ್ವರ, ಹೆಚ್ ಪಿ ಸಿ ಎಲ್ ಸೇಲ್ಸ್ ಆಫೀಸರ್ ಪ್ರದೀಪ್ ಕುಮಾರ್, ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್, ಜಿ ಅಬ್ದುಲ್ಲ, ವೈಭವ್ ತಲಪಾಡಿ, ಅಬ್ದುಲ್ ಹಮೀದ್ ಉದಯ ಕುಮಾರ್,ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು. ಮಹಮ್ಮದ್ ಶಾಲಿ ಸ್ವಾಗತಿಸಿದರು.ಮುಸ್ತಫ ಹರೇಕಳ ಕಾರ್ಯಕ್ರಮವನ್ನು ಪೂರೈಸಿದರು.ಶಾಹಿಲ್ ಮಹಮದ್ ಮಲರ್ ದನ್ಯಾವಾದಗೈದರು ಮುಸ್ತಫಾ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
