ತುರ್ತು ಬೈಠಕ್ ಕರೆದ ನಳಿನ್ ಮತ್ತು ಕಿಶೋರ್

ತುರ್ತು ಬೈಠಕ್ ಕರೆದ ನಳಿನ್ ಮತ್ತು ಕಿಶೋರ್

ಹೀಗೊಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ನಾನು ಮತ್ತು ನಳಿನ್ ಕುಮಾರ್ ಕಟೀಲ್ ಯಾವುದೇ ರೀತಿಯ ಬೈಠಕ್ ಕರೆದಿಲ್ಲ ಮತ್ತು ಫೋನ್ ಕರೆಗಳ ಮೂಲಕವೂ ಮಾತನಾಡಿರುವುದಿಲ್ಲ. ನನ್ನನ್ನು ಮತ್ತು ನಳಿನ್ ಕುಮಾರ್ ಕಟೀಲ್ ಅವರನ್ನು ಮುಂದಿಟ್ಟುಕೊಂಡು ಕಿಡಿಗೇಡಿಗಳು ಪುತ್ತೂರಿನ ಜನತೆಯ ದಾರಿ ತಪ್ಪಿಸಲು ಮಾಡುತ್ತಿರುವ ಸಂಗತಿಯಾಗಿದೆ. ಪಕ್ಷ ಮತ್ತು ಸಂಘಟನೆ ನಡೆದುಕೊಂಡಂತೆ ನಾವೆಲ್ಲರೂ ಬದ್ಧರಾಗಿದ್ದೇವೆ. ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡುತ್ತೇವೆ. ಆದ್ದರಿಂದ ದ.ಕ ಜಿಲ್ಲೆಯ ಕಾರ್ಯಕರ್ತರಲ್ಲಿ ವಿನಂತಿ ಮಾಡುತ್ತಿದ್ದೇನೆ. ಜಿಲ್ಲಾಧ್ಯಕ್ಷರ ತೀರ್ಮಾನವನ್ನು ಮನ ಪೂರ್ವಕವಾಗಿ ಒಪ್ಪಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಜೇಶ್ ಚೌಟರನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿಜೀಯನ್ನು ಮತ್ತೊಮ್ಮೆ ಪ್ರಧಾನ ಸೇವಕನ್ನಾಗಿ ಮಾಡಲು ಶ್ರಮಪಟ್ಟು ಕೆಲಸ ಮಾಡೋಣ.

ಕಿಶೋರ್ ಬೊಟ್ಯಾಡಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ದ.ಕ ಬಿಜೆಪಿ

News Editor

Learn More →

Leave a Reply

Your email address will not be published. Required fields are marked *