ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ವರ್ಧಂತಿ, ಧರ್ಮಧಾರಿತ ಬದುಕು ಮುಖ್ಯ- ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಬೈಂದೂರು: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಶ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವರ್ಧಂತಿ ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

​ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆದ 37ನೇ ದಿನದ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಬೆಳಿಗ್ಗೆ ನಡೆದ ಧರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಭಾರತೀಯ ಸನಾತನ ಸಂಸ್ಕೃತಿ ಧರ್ಮಿಕ ತಳಹದಿ ಹಾಗೂ ಭಗವಂತನ ಸಾಕ್ಷಾತ್ಕಾರದಿಂದ ಅವತರಿಸಿದೆ. ಧರ್ಮದ ಆಚಾರದಲ್ಲಿ ದ್ವೇಷ ಸಲ್ಲದು. ಧರ್ಮದಿಂದ ಶಾಂತಿ ನೆಮ್ಮದಿ ಪಡೆಯಲು ಸಾಧ್ಯ. ಧಾರ್ಮಿಕ ಭಾವನೆ ಮೈಗೂಡಿಸಿಕೊಂಡು ಪರಸ್ಪರ ಸ್ನೇಹ ವಿಶ್ವಾಸದಿಂದ ಬದುಕು ನಡೆಸಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವದರ್ಶ ನಮಗೆಲ್ಲ ದಾರಿದೀಪವಾಗಬೇಕು ಎಂದರು.

​ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ದ.ಕ ಲೋಕಸಭಾ ಸಂಸದ ಬ್ರಿಜೇಶ್ ಚೌಟ, ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಎಸ್ ರಾಜು ಪೂಜಾರಿ ಮಾಜಿ ಜಿ. ಪ ಅಧ್ಯಕ್ಷರು,ಅಯೋಧ್ಯೆಯ ನಾಗಸಾಧು ಕೇಶವ್ ಮಹಾರಾಜ್, ಕಾರ್ಪೊರೇಟರ್ ಕಿರಣ್ ಮಂಗಳೂರು, ಮಾಜಿ ವಿಧಾನಪರಿಷತ್ ಸದಸ್ಯ ಸಂತು ಮಂಗಳೂರು, ಮೇಸ್ಟ್ರು ಅಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ಸಹಪ್ರಭಾರಿ ಜಯಂತ್ ಕೋಟ್ಯಾನ್, ಸಂಜಯ್ ಪ್ರಭು, ವಕೀಲ ಶಾಂತಿಪ್ರಕಾಶ್ ಹೆಗಡೆ, ಸೋಮಸುಂದರ್ ಅಧ್ಯಕ್ಷರು ಕುದ್ರೋಳಿ ಕ್ಷೇತ್ರ, ಮಂಗಳೂರು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಜಯಂತ್ ಎಚ್,ಸಮಾಜಸೇವಕ ಯೋಗೀಶ್ ಕೋಟ್ಯಾನ್, ಡಾ.ಸದಾನಂದ ಪೂಜಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಸಂಚಾಲಕರಾದ ಶಿವರಾಜ್ ಪೂಜಾರಿ, ವತ್ತಿನೆಣೆ ಗುರುರಾಘವೇಂದ್ರ ಸ್ವಾಮಿ ಮರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

​ಬೆಳಿಗ್ಗೆ ಪಟ್ಟಾಭಿಷೇಕದ 18ನೇ ವರ್ಧಂತಿ ಕಾರ್ಯಕ್ರಮದಲ್ಲಿ ಸ್ವಾಮೀಜಿಗೆ ಬೆಳ್ಳಿ ಕಿರೀಟ ತೊಡಿಸಲಾಯಿತು. ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮಿ ಪಾದುಕೆ ಪೂಜೆ ನಡೆಯಿತು ಹಾಗೂ ಚಾತುರ್ಮಾಸ್ಯ ವ್ರತಾಚರಣೆ ಸೆ.14ರವರೆಗೆ ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ.

​ರಮಣಿ ರವಿ ಬಿಜೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಪೂಜಾರಿ ಅರೆಹೊಳೆ ವಂದಿಸಿದರು. ಎಮ್.ಪಿ.ಬೆಳ್ಳಾಡಿ ಸಹಕರಿಸಿದರು.

Star Of Kudla

Learn More →

Leave a Reply

Your email address will not be published. Required fields are marked *