ಮಂಗಳೂರು: ವಾಲಿಬಾಲ್ ಆಡುತ್ತಿದ್ದಾಗ ಹೈಸ್ಕೂಲ್ ಬಾಲಕನೋರ್ವ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಮಂಗಳೂರಿನ ಸುರತ್ಕಲ್ ಸಮೀಪದ ಸೂರಿಂಜೆ ಬಳಿ ನಡೆದಿದೆ.

ಹತ್ತನೇ ತರಗತಿ ವಿದ್ಯಾರ್ಥಿ ನಿಖಿತ್ ಅಮೀನ್ ಮೃತಪಟ್ಟ ಬಾಲಕ. ಈತ ಸೂರಿಂಜೆ ಬೋಳ್ಳಾರು ಶಾಲಾ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ. . ಆಟದ ಮೈದಾನದಲ್ಲೇ ಬಾಲಕ ಕುಸಿದು ಬಿದ್ದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ದುರ್ಘಟನೆ ಸ್ಥಳೀಯರಲ್ಲಿ ಮತ್ತು ಕ್ರೀಡಾಪಟುಗಳಲ್ಲಿ ತೀವ್ರ ಆಘಾತ ಹಾಗೂ ಶೋಕವನ್ನುಂಟು ಮಾಡಿದೆ.


