
ಬ್ಯಾಂಡ್ ಮಾಸ್ಟರ್ ಎಂದೇ ಪ್ರಖ್ಯಾತಿ ಪಡೆದ, ಟ್ರಂಪೆಟ್ ವಾದನದಲ್ಲಿ ವಿಶೇಷ ಪ್ರೌಢಿಮೆ ಹೊಂದಿದ್ದ ಹಿರಿಯ ಕಲಾವಿದ ಕಮಲಾಕ್ಷ ಸೋಮೇಶ್ವರ (ನಮ್ಮೆಲ್ಲರ ಪ್ರೀತಿಯ ಕಮಲಣ್ಣ) ಅವರು ಇಂದು ಮುಂಜಾನೆ 1:57ರ ಸುಮಾರಿಗೆ ಅಲ್ಪಕಾಲದ ಅಸೌಖ್ಯದಿಂದ ದೇವರ ಪಾದ ಸೇರಿದರೆಂದು ತಿಳಿಸಲು ವಿಷಾದವಾಗುತ್ತದೆ.
ದೈವ ದೇವಸ್ಥಾನಗಳಲ್ಲೂ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ವಾದನದ ಸೇವೆ ಸಲ್ಲಿಸುತ್ತಾ, G.K ಬ್ಯಾಂಡ್ ಎಂಬ ತಂಡವನ್ನು ಕಟ್ಟಿಕೊಂಡು ಹಲವಾರು ಕುಟುಂಬಗಳಿಗೆ ಆಶ್ರಯವಾಗಿದ್ದವರು ಅವರು. ಅವರ ಅಗಲಿಕೆಯಿಂದ ಸಂಗೀತ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಹಾಗೂ ಬಂಧು-ಮಿತ್ರರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ಮೃತರ ಅಂತ್ಯ ಸಂಸ್ಕಾರ ಇಂದು ಸೋಮವಾರ ಸಂಜೆ 4 ಗಂಟೆಗೆ ನೆರವೇರಲಿದೆ.
🙏 ಹರಿ ಓಂ ಶಾಂತಿ ಶಾಂತಿ ಶಾಂತಿ


