31 ವರ್ಷಗಳಿಂದ ಮಂತ್ರಿಮಂಡಲದಿಂದ ದೂರವಿರುವ ಕೊಂಕಣಿ ಕ್ರೈಸ್ತರು: ಐವನ್ ಡಿಸೋಜಗೆ ಮಂತ್ರಿ ಸ್ಥಾನಕ್ಕೆ ಒತ್ತಾಯ.

ಪುತ್ತೂರು: ಸುಮಾರು 38 ಲಕ್ಷ ಜನಸಂಖ್ಯೆ ಇರುವ ಕ್ರೈಸ್ತರಿಗೆ ಕರ್ನಾಟಕದಲ್ಲಿ ರಾಜಕೀಯ ಪಾಲು ತೀರಾ ಕಡಿಮೆ ಇದೆ. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಮಂಗಳೂರು ಕ್ರೈಸ್ತರಿಗೆ ಮಂತ್ರಿಮಂಡಲದಲ್ಲಿ ಸ್ಥಾನವಿಲ್ಲದೆ 31 ವರ್ಷಗಳಾಗಿವೆ. ಹಾಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಮುಂದಿನ ಸಂಪುಟ ಪುನಾರಚಣೆ ಸಂದರ್ಭದಲ್ಲಿ ಮಂತ್ರಿ ಸ್ಥಾನ ನೀಡಬೇಕು. ಅವಿಭಜಿತ ಜಿಲ್ಲೆಯಿಂದ ವಿಧಾನ ಪರಿಷತ್‍ಗೆ ಇರುವ ಎರಡು ಸ್ಥಾನಗಳಲ್ಲಿ 1 ಸ್ಥಾನವನ್ನು ಕ್ರಿಶ್ಚಿಯನ್ ಸಮುದಾಯಕ್ಕೇ ನೀಡಬೇಕು ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಮೌರಿಸ್ ಮಸ್ಕರೇನಸ್, 1979 ರಲ್ಲಿ ಮಂಗಳೂರಿನ ಕೊಂಕಣಿ ಕ್ರೈಸ್ತ ಸಮಾಜಕ್ಕೆ ಸೇರಿದ ಪಿ.ಎಫ್. ರೊಡ್ರಿಗಸ್ ಮೀನುಗಾರಿಕಾ ಸಚಿವರಾಗಿದ್ದರು. 1989-94ರ ಅವಧಿಯಲ್ಲಿ ಬ್ರೇಸಿಯಸ್ ಡಿ’ಸೋಜ ಕಾನೂನು, ಕಾರ್ಮಿಕ ಸಚಿವರಾಗಿದ್ದರು. ಅವರ ಅವಧಿಯಲ್ಲಿ 25 ಸಾವಿರದಷ್ಟು ಬಾಕಿ ಇದ್ದ ಕಡತಗಳ ವಿಲೇವಾರಿ ಮಾಡಿ ದಾಖಲೆ ನಿರ್ಮಿಸಿದ್ದರು. ಆಸ್ಕರ್ ಫೆರ್ನಾಂಡೀಸ್ ಮತ್ತು ಮಾರ್ಗರೇಟ್ ಆಳ್ವ ಸಂಸತ್ ಸದಸ್ಯರಾಗಿ ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಅನಂತರದಲ್ಲಿ ಕ್ರೈಸ್ತ ಸಮುದಾಯಕ್ಕೆ ಮಂತ್ರಿ ಮಂಡಲದಲ್ಲಿ ದೊಡ್ಡ ಅವಕಾಶ ಸಿಕ್ಕಿಲ್ಲ ಎಂದರು.
ಅವಕಾಶ ತೀರಾ ಕಡಿಮೆ
ಬೆಂಗಳೂರು, ಕರಾವಳಿ ಕರ್ನಾಟಕ, ಕೊಡಗು, ಮೈಸೂರು, ಬೀದರ್, ಕೋಲಾರ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಕಡೆ ಗಮನಾರ್ಹ ಸಂಖ್ಯೆಯಲ್ಲಿ ಕ್ರೈಸ್ತರಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಸರಕಾರದಲ್ಲಿ ಪಾಲುದಾರಿಕೆ, ರಾಜಕೀಯ ಅವಕಾಶಗಳು ಕಡಿಮೆ ಆಗಿದೆ. ನಮ್ಮದೇ ಗಾತ್ರದ ಜನಸಂಖ್ಯೆ ಇರುವ ಇತರ ವರ್ಗಗಳಿಗೆ ಹೋಲಿಸಿದರೆ ನಮಗೆ ಸಿಕ್ಕಿರುವ ಅವಕಾಶಗಳು ತೀರಾ ಕಡಿಮೆ. ಪ್ರಸ್ತುತ ವಿಧಾನಸಭೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಒಂದು ಮತ್ತು ವಿಧಾನಪರಿಷತ್‍ನಲ್ಲಿ ಒಂದು ಮಾತ್ರ ಪ್ರತಿನಿಧಿ ಇರುವುದು ಎಂದು ಹೇಳಿದರು.

ಕ್ರೈಸ್ತ ಸಮುದಾಯ ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು ಕಾಂಗ್ರೆಸ್ ಅಧಿಕಾರದಲ್ಲಿ ಇರುವಾಗ ಅವಕಾಶ ಕೇಳುವುದು ನಮ್ಮ ಹಕ್ಕಾಗಿದೆ. ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‍ನಲ್ಲಿ ಕನಿಷ್ಠ 5 ಸ್ಥಾನವಾದರೂ ಸಿಗಬೇಕು. ಅವಿಭಜಿತ ದ.ಕ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ಮೀಸಲಿರುವ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಕ್ರೈಸ್ತ ಸಮುದಾಯಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಐವನ್ ಮಂತ್ರಿಯಾಗಲಿ
ಪ್ರಸ್ತುತ ವಿಧಾನಪರಿಷತ್‍ನಲ್ಲಿ ಸದಸ್ಯರಾಗಿರುವ ಐವನ್ ಡಿಸೋಜ ಅವರು ಎರಡನೇ ಬಾರಿ ಸದಸ್ಯರಾಗಿದ್ದು, ಮಂತ್ರಿಮಂಡಲದ ಪುನಾರಚನೆ ಸಂದರ್ಭದಲ್ಲಿ ಅವರು ಅರ್ಹವಾದ ಅಭ್ಯರ್ಥಿ ಆಗಿದ್ದಾರೆ. ಅವರು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.

ವಿಧಾನಪರಿಷತ್‍ನಲ್ಲಿ ಸರಕಾರದ ಮುಖ್ಯ ಸಚೇತಕರಾಗಿ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ ಅನುಭವವಿದೆ. ವ್ಯಕ್ತಿಯಲ್ಲಿ ವಕೀಲರಾಗಿದ್ದು ಅಪಾರ ಕಾನೂನು ಜ್ಞಾನ ಮತ್ತು ಸಾಮಾಜಿಕ ಜ್ಞಾನ ಹೊಂದಿದ್ದಾರೆ. ಜನಪಿಯರೂ ಆಗಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು ಯುವುದೇ ಗುಂಪುಗಾರಿಕೆಯಲ್ಲಿ ತೊಡಗಿಕೊಳ್ಳದೆ ಪಕ್ಷದ ನಿಷ್ಟಾವಂತ ಅನುಯಾಯಿಯಾಗಿದ್ದಾರೆ.
ಕರಾವಳಿ ಕರ್ನಾಟಕ ಪ್ರದೇಶದ ಪ್ರತಿನಿಧಿಯಾಗಿ ಸರಕಾರದಲ್ಲಿ ಮಂತ್ರಿಯಾಗಲು ಎಲ್ಲಾ ಅರ್ಹತೆಗಳು ಐವನ್ ಅವರಿಗಿದೆ. ಕರಾವಳಿ ಪ್ರದೇಶವನ್ನು, ಕ್ತøಸ್ತರನ್ನು, ಕೊಂಕಣಿ ಭಾಷಿಗರನ್ನುಸಮಪರ್ಥವಾಗಿ ಪ್ರತಿನಿಧಿಸ ಬಲ್ಲವರಾಗಿರುವುದರಿಂದ ಮುಂದಿನ ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನಾವು ಬಲವಾಗಿ ಮುಖ್ಯಮಂತ್ರಿಗಳನ್ನು ಪಕ್ಷವನ್ನು ಮತ್ತು ಹೈಕಮಾಂಡನ್ನು ಒತ್ತಾಯಿಸುವುದಾಗಿ ಮೌರಿಸ್ ಮಸ್ಕರೇನಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಕ್ರಶ್ಚಿಯನ್ ಯೂನಿಯನ್ ಗೌರವ ಸಲಹೆಗಾರ ವಲೇರಿಯನ್ ಡಯಾಸ್, ಪ್ರಮುಖರಾದ ಉದ್ಯಮಿ ವಾಲ್ಟರ್ ಡಿಸೋಜ ಸಿದ್ಯಾಳ, ನಿವೃತ್ತ ಆರೋಗ್ಯ ನಿರೀಕ್ಷಕ ಇಗ್ನೀಶಿಯಸ್ ಡಿಕುನ್ಹಾ, ಮಾಜಿ ಸೈನಿಕ ಜೆರಾಲ್ಡ್ ಮಸ್ಕರೇನಸ್ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *