ಪಾಕ್ ಪರ ಇರುವವರನ್ನು ಬೋಳಿಮಗ ಎದು ಬೈಯಲು ನಾನು ಅವಕಾಶ ಕೊಡ್ತೇನೆ ಎಂದ‌ ಸ್ಪೀಕರ್ ಖಾದರ್.

ಸದನದಲ್ಲಿ ಬಳಸಲು ಅವಕಾಶ ಇಲ್ಲದ ಅಶ್ಲೀಲ ಪದಗಳನ್ನು ಬಳಸಿದ  ಯತ್ನಾಳ್ ಅವರ ಪದ ಪ್ರಯೋಗಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ರಾಯರೆಡ್ಡಿ.

“ಪಾಕ್‌ ಪರ ಇದ್ದವರಿಗೆ ಅವರು ಹೇಳಿದ್ದಾರೆ” ಎಂದು ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಸ್ಪೀಕರ್ ಯು.ಟಿ ಖಾದರ್.

ಪಾಕ್ ಪರ ಇರುವವರನ್ನು ಬೋಳಿಮಗ ಎಂದು ಬೈಯಲು ನಾನು ಅವಕಾಶ ಕೊಡ್ತೇನೆ ಎಂದ‌ ಸ್ಪೀಕರ್ ಖಾದರ್.

ಪಾಕ್ ಪರ ಇರುವವರಿಗೆ ಯಾವುದೇ ರೀತಿಯ ಭಾಷೆ ಬಳಸಲು ನನ್ನ ಒಪ್ಪಿಗೆ ಇದೆ ಎಂದು ಯತ್ನಾಳ್‌ಗೆ  ಅವಕಾಶ ಕೊಟ್ಟ ಸ್ಪೀಕರ್.

ಬೇಕಾದಂತೆ ಬೈಯಲು ಅವಕಾಶ ಕೊಟ್ಟ ಯು.ಟಿ‌ ಖಾದರ್ ನಿಜವಾದ ದೇಶಭಕ್ತ ಎಂದ ಬಿಜೆಪಿ‌ ಶಾಸಕ ಯತ್ನಾಳ್.

ಪಾಕ್ ಪರ ಘೋಷಣೆ ಆರೋಪ ವಿಚಾರ ಇಂದು ಸದನದಲ್ಲಿ ಪ್ರಸ್ತಾಪವಾಗಿ ಆಡಳಿತ ಮತ್ತು ವಿಪಕ್ಷಗಳ ಜಟಾಪಟಿ ನಡೆಯಿತು.
ನಮ್ಮ ದೇಶದ ಅನ್ನ ತಿಂದು ಈ ದೇಶದ ನೀರು ಕುಡಿದು ದೇಶದ ವಿರುದ್ಧವೇ ಪಾಕಿಸ್ತಾನ ಪರ ಘೋಷಣೆ ಮಾಡುತ್ತಾರೋ ಅವರು ತಾಯಿಗಂಡ್ರು. ಈ ದೇಶದಲ್ಲಿ ಪಾಕಿಸ್ತಾನದ ಪರವಾಗಿ ಮಾತನಾಡುವವರಿಗೆ ಯಾವ ಪಕ್ಷ ಇರಲಿ ಕಠಿಣ ಶಿಕ್ಷೆ ಆಗಬೇಕು ಎಂದು ಬಿಜೆಪಿ ಶಾಸಕ ಯತ್ನಾಳ್ ಅವರು ಸದನದಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್ ಶಾಸಕ ರಾಯರೆಡ್ಡಿ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಅಶ್ಲೀಲ ಪದಗಳನ್ನು ಬಳಸುವಂತಿಲ್ಲ ಎಂದು ಅವರ ಪದ ಪ್ರಯೋಗ ವನ್ನು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್ ಅವರು ಪಾಕ್ ಪರ ಇದ್ದವರಿಗೆ ಅವರು ಹೇಳಿದ್ದಾರೆ ಎಂದು ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಪಾಕ್ ಪರ ಇರುವವರನ್ನು ಬೊಳಿ ಮಗ ಎಂದು ಬಯ್ಯಲು ನಾನು ಅವಕಾಶ ಕೊಡುತ್ತೇನೆ ಹಾಗೂ ಪಾಕ್ ಪರ ಇರುವವರಿಗೆ ಯಾವುದೇ ರೀತಿಯ ಭಾಷೆ ಬಳಸಲು ಕೂಡ ನನ್ನ ಒಪ್ಪಿಗೆ ಇದೆ ಎಂದು ಯತ್ನಾಳ್ ಅವರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದಾರೆ. ಬೇಕಾದಂತೆ ಬೈಯಲು ಅವಕಾಶ ಕೊಟ್ಟ ಯು ಟಿ ಖಾದರ್ ನಿಜವಾದ ದೇಶಭಕ್ತ ಎಂದು ಬಿಜೆಪಿ ಶಾಸಕ ಯತ್ನಾಳ್ ಪ್ರತ್ಯುತ್ತರ ನೀಡಿದ್ದಾರೆ.

News Editor

Learn More →

Leave a Reply

Your email address will not be published. Required fields are marked *