ಆಸ್ಪತ್ರೆಗಳ ತವರೂರಲ್ಲಿ ರೋಗಿಗಳನ್ನು ಹೆಚ್ಚಿಸಲುಪ್ರೋತ್ಸಾಹಿಸುತ್ತಿರುವ ಕೋಟೆಕಾರು ಪಟ್ಟಣ ಪಂಚಾಯತ್‌ ಅಧಿಕಾರಿಗಳುಅನಧಿಕೃತ, ಶುಚಿತ್ವವೇ ಇಲ್ಲದ ತಿಂಡಿ ತಯಾರಿಕಾ ಘಟಕಕ್ಕೆ ಹೊಣೆ ಯಾರು?

ಆಸ್ಪತ್ರೆಗಳ ತವರೂರಲ್ಲಿ ರೋಗಿಗಳನ್ನು ಹೆಚ್ಚಿಸಲು
ಪ್ರೋತ್ಸಾಹಿಸುತ್ತಿರುವ ಕೋಟೆಕಾರು ಪಟ್ಟಣ ಪಂಚಾಯತ್‌ ಅಧಿಕಾರಿಗಳು
ಅನಧಿಕೃತ, ಶುಚಿತ್ವವೇ ಇಲ್ಲದ ತಿಂಡಿ ತಯಾರಿಕಾ ಘಟಕಕ್ಕೆ ಹೊಣೆ ಯಾರು?
ಮಂಗಳೂರು: ಆಸ್ಪತ್ರೆ ತವರೂರು ಆಗಿರುವ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಸಾರ್ವಜನಿಕ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಹೊಂದಿರುವ ಅಧಿಕಾರಿಗಳ ಕಾರ್ಯಗತಿಕೆ ಪ್ರಶ್ನಾರ್ಹವಾಗುತ್ತಿದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೇ ಶುಚಿತ್ವದ ಕೊರತೆ, ನಿಯಮಾವಳಿ ಉಲ್ಲಂಘನೆ ಮತ್ತು ಅನಧಿಕೃತ ಚಟುವಟಿಕೆಗಳು ಸಾರ್ವಜನಿಕರಲ್ಲಿ ಗಂಭೀರ ಆಕ್ರೋಶವನ್ನು ಹುಟ್ಟಿಸಿವೆ.
ಪಂಚಾಯತ್ ಮೀರಿದಂತೆ, ಹಲವು ವರ್ಷಗಳಿಂದ ಯಾವುದೇ ಸ್ವಚ್ಛತೆ ಕ್ರಮಗಳಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ತಿಂಡಿ ತಯಾರಿಕಾ ಘಟಕ ಸ್ಥಳೀಯರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾ, ಆರೋಗ್ಯಕ್ಕೆ ಅಪಾಯಕಾರಿ ರೀತಿಯಲ್ಲಿ ಉತ್ಪಾದನೆ ನಡೆಯುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ನೇರ ಧಕ್ಕೆ ನೀಡುತ್ತಿದೆ. ಈ ಘಟಕದಲ್ಲಿ ತಯಾರಾಗುವ ಪದಾರ್ಥಗಳು ಮಕ್ಕಳು, ವಯೋವೃದ್ಧರು ಸೇರಿದಂತೆ ಸಾಮಾನ್ಯ ಜನರ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿರುವುದು ಆತಂಕಕಾರಿ.
ಸ್ಥಳೀಯ ಮೂಲಗಳ ಪ್ರಕಾರ, ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿರುವುದು ಸಾರ್ವಜನಿಕರ ಮಧ್ಯೆ ಗಂಭೀರ ಅನುಮಾನಕ್ಕೆ ಕಾರಣವಾಗಿದೆ. ಪ್ರತಿಮಾಸವೂ ಕೆಲ ಅಧಿಕಾರಿಗಳಿಗೆ ‘ಸಿಹಿ’ ನೀಡಿ, ಅನಧಿಕೃತ ಘಟಕಕ್ಕೆ ಕಾರ್ಯಾಚರಣೆಯ ‘ಮುಕ್ತ ಪರವಾನಗಿ’ ದೊರೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಪರಿಣಾಮವಾಗಿ, ಸಾರ್ವಜನಿಕ ಹಿತಾಸಕ್ತಿಗಿಂತ ಲಂಚ–ಪ್ರಭಾವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎನ್ನುವ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ಮಕ್ಕಳೇ ಆಗಲಿ, ಜನರೇ ಆಗಲಿ — ತಿಂದು ಸಾಯಲಿ, ನಮಗೆ ಪರವಾಗಿಲ್ಲ” ಎನ್ನುವ ರೀತಿಯ ನಿರ್ಲಕ್ಷ್ಯತನ ಮತ್ತು ನಿರ್ದಯತೆಯ ಮನೋಭಾವನೆ ಆಡಳಿತದಲ್ಲಿ ಬೆಳೆದುಬಂದಿರುವಂತೆ ಸಾರ್ವಜನಿಕರು ವಿಷಾದ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ.
ಸ್ಥಳೀಯರು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಆಹಾರ ಸುರಕ್ಷತಾ ವಿಭಾಗ, ಪಟ್ಟಣ ಪಂಚಾಯತ್, ಆರೋಗ್ಯ ಇಲಾಖೆ, ಜಿಲ್ಲಾ ಆಡಳಿತಕ್ಕೆ ಈ ಕೂಡಲೇ ಗಮನಹರಿಸಬೇಕು ಅನ್ನುವ ಒತ್ತಾಯ ಕೇಳಿಬಂದಿದೆ.

News Editor

Learn More →

Leave a Reply

Your email address will not be published. Required fields are marked *