ಶ್ರೀ ಕೋರದಬ್ಬು ಹಾಗೂ ಪರಿವಾರದೈವಗಳ ವಾರ್ಷಿಕ ನೇಮೋತ್ಸವವು ಶ್ರೀ ಕೊರದಬ್ಬು ಹಾಗೂ ಪರಿವಾರದೈವಗಳ ದೈವಸ್ಥಾನ ಕರಿತ ಮಣ್ಣು ಪುಲಿಕ್ಯದಡಿ ಕೊಟ್ಯ ಕೆ. ಸಿ ರೋಡ್ ತಲಪಾಡಿಯಲ್ಲಿ ನಡೆಯಿತು.

ಶ್ರೀ ಕೋರದಬ್ಬು ಹಾಗೂ ಪರಿವಾರದೈವಗಳ ವಾರ್ಷಿಕ ನೇಮೋತ್ಸವವು ಶ್ರೀ ಕೊರದಬ್ಬು ಹಾಗೂ ಪರಿವಾರದೈವಗಳ ದೈವಸ್ಥಾನ ಕರಿತ ಮಣ್ಣು ಪುಲಿಕ್ಯದಡಿ ಕೊಟ್ಯ ದಲ್ಲಿ ನಡೆಯಿತು.


ವಾರ್ಷಿಕ ನೇಮವು ಫೆಬ್ರವರಿ 21ರಂದು ಆರಂಭಗೊಂಡು ಫೆಬ್ರವರಿ 25ನೇ ಭಾನುವಾರ ಮುಕ್ತಾಯಗೊಂಡಿತು. ಫೆಬ್ರವರಿ 18ನೇ ರವಿವಾರ ಬೆಳಿಗ್ಗೆ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಗಣೇಶ್ ಭಟ್ ಇವರ ನೇತೃತ್ವದಲ್ಲಿ ನಾಗಬನದಲ್ಲಿ ಆಶ್ಲೇಷ ಪೂಜೆ, ತಂಬಿಲ ಸೇವೆ ನಡೆಯಿತು.

ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು. ಫೆಬ್ರವರಿ 21ನೇ ಬುಧವಾರ ಭಂಡಾರ ಮನೆಯಿಂದ ದೈವಸ್ಥಾನಕ್ಕೆ ಭಂಡಾರದೊಂದಿಗೆ ನೂತನ ಬೆಳ್ಳಿಯ ಅಣಿ ಪ್ರಭಾವಳಿ ಮತ್ತು ಸಂಕೋಲಿಗ ಗುಳಿಗ ದೈವದ ಕಲ್ಲಿನ ಬೆಳ್ಳಿಯ ಕವಚದ ಮೆರವಣಿಗೆ ನಡೆಯಿತು. ರಾತ್ರಿ ಮೈಸಂದಾಯ ದೈವದ ನೇಮ ಜರುಗಿತು. ಫೆಬ್ರವರಿ 22ರಂದು ಸುಧರ್ಮ ದೈವಗಳ ನೇಮ, ಜುಮಾದಿ ಬಂಟರ ದೈವದ ನೇಮ ಪಂಜುಲಿ ದೈವದ ನೇಮ ಹಾಗೂ 23ರಂದು ಧರ್ಮ ದೈವದ ನೇಮ ಸಂಕೋಲಿಗ ಗುಳಿಗ ದೈವದ ನೇಮ, ಸುಬ್ಬಿ ಗುಳಿಗ ಸುಬ್ಬಿಯಮ್ಮ ದೈವಗಳ ನೇಮ ನಡೆಯಿತು.
ಫೆಬ್ರವರಿ 24 ನೇ ಶನಿವಾರದಂದು ಕೊರದಬ್ಬು ತನ್ನಿಮಾನಿಗ ದೈವಗಳ ನೇಮ ಜರುಗಿತು. ರವಿವಾರ ಭಂಡಾರ ಇಳಿಯುವುದರೊಂದಿಗೆ ನೇಮೋತ್ಸವ ಮುಕ್ತಾಯಗೊಂಡಿತು.

ಬಿಜೆಪಿ ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ , ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕುಟು, ಬಿಜೆಪಿ ಮಂಡಲದ ಕಾರ್ಯದರ್ಶಿ ರಮೇಶ್ ಬೆದ್ರುಳಿಕೆ, ದಯಾನಂದ ಬೆಳ್ಳೆರಿ, ಪ್ರಶಾಂತ್ ಚೌಟ ಪಂಜಿಮುಂಡೇಲ್, ಹರೀಶ್ ಶೆಟ್ಟಿ ಪಂಜಿಮುಂಡೇಲ್, ಅಶೋಕ್ ಕೆ, ಸಿ, ರೋಡ್, ಮಂಜಿನಾಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಗುಡ್ಡೆಮನೆ ತಲಪಾಡಿ, ವರುಣ್ ತಲಪಾಡಿ. ರಾಜೇಶ್ ಶೆಟ್ಟಿ ಶೆಟ್ಟಿಪಾಲು ಗುತ್ತು, ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *