
ಮಂಗಳೂರು: ದೇರಳಕಟ್ಟೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬರು ಕಾಣೆಯಾದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾಗಿರುವ ವಿದ್ಯಾರ್ಥಿ ಮಲಿಕ್ ಅಬೂಬಕ್ಕರ್, ಕೇರಳದ ಪಾಳಕ್ಕಾಡಿನ ರಬಿಯಾ ಮತ್ತು ಅಬೂಬಕ್ಕರ್ ಅವರ ಪುತ್ರ. ಅವರು ದೇರಳಕಟ್ಟೆಯ ಖಾಸಗಿ ಕಾಲೇಜಿನಲ್ಲಿ BNYS ವಿದ್ಯಾಭ್ಯಾಸ ಮಾಡುತ್ತಿದ್ದು, ಅಬ್ದುಲ್ ಶರೀಫ್ ಅವರಿಗೆ ಸೇರಿದ ಪಿಜಿ ವಸತಿಗೃಹದಲ್ಲಿ ವಾಸವಾಗಿದ್ದರು.
ನವೆಂಬರ್ 13ರ ರಾತ್ರಿ ಮಲಿಕ್ ಅವರು “ಊಟಕ್ಕೆ ಹೊರಟಿದ್ದೇನೆ” ಎಂದು ಹೇಳಿ ತಮ್ಮ ಪಿಜಿಯಿಂದ ಹೊರಟಿದ್ದು, ನಂತರ ಹಿಂತಿರುಗದೇ ಕಾಣೆಯಾಗಿರುವುದು ತಿಳಿದುಬಂದಿದೆ.
ಈ ಕುರಿತು ಮಲಿಕ್ ಅವರ ಮಾವನಾದ ಫಿಸಿಯೊಥೆರಪಿ ವೈದ್ಯ ಅಜ್ಮಲ್ ಟಿ.ಎ. ಅವರು ನೀಡಿದ ದೂರು ಆಧರಿಸಿ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.


