


ಶ್ರೀ ವನದುರ್ಗಾ ಶ್ರೀ ಅಯ್ಯಪ್ಪ ಭಜನಾ ಮಂದಿರ ಮಾಡೂರು ವತಿಯಿಂದ ಏಕಾಹ ಭಜನಾ ಮಂಗಳೋತ್ಸಮ ಶನಿ ಪೂಜೆ, ದುರ್ಗಾ ನಮಸ್ಕಾರ ಪೂಜೆಯು ಫೆಬ್ರವರಿ 23ರಿಂದ ಫೆಬ್ರವರಿ 25ರ ವರೆಗೆ ನಡೆಯಿತು.
ಶ್ರೀ ಪ್ರಶಾಂತ್ ಶಾಂತಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಫೆಬ್ರವರಿ 23ರಂದು ಶುಕ್ರವಾರ ಬೆಳಿಗ್ಗೆ ಗಣ ಹೋಮ ಮಧ್ಯಾಹ್ನ 12 ಗಂಟೆಗೆ ಶ್ರೀ ವನದುರ್ಗಾ ತಾಯಿಗೆ ಬೆಳ್ಳಿ ಪೀಠ, ಪ್ರಭಾವಳಿ ಸಹಿತ ಬಿಂಬ ಸಮರ್ಪಣೆ ಶ್ರೀದೇವಿಗೆ ಅಲಂಕಾರ ಮಹಾಪೂಜೆ ನಡೆಯಿತು. ಸಂಜೆ 6 ಗಂಟೆಗೆ ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ ನಡೆಯಿತು. ಫೆಬ್ರವರಿ 24 ರಂದು ಆತ್ಮ ಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಹಾಗೂ ಯುವ ಉದ್ಯಮಿ ಪ್ರಸಾದ್ ಮಡ್ಯಾರ್ ದ್ವಿಪ ಪ್ರಜ್ವಲನೆ ಗೈದು ಏಕಾಹ ಭಜನೆ ಪ್ರಾರಂಭಗೊಂಡಿತು. ಬಳಿಕ ಶ್ರೀ ಅಯ್ಯಪ್ಪ ದೇವರಿಗೆ ಸಹಸ್ರ ತುಳಸಿ ನಾಮರ್ಚನೆ, ಅಲಂಕಾರದೊಂದಿಗೆ ಮಹಾಪೂಜೆ ನಡೆಯಿತು. ಸಂಜೆ ಸಾರ್ವಜನಿಕ ಶನಿಪೂಜಿ ನಡೆದು ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ಜರುಗಿತು.
ಫೆಬ್ರವರಿ 25ರಂದು ಭಜನಾ ಮಂಗಳೋತ್ಸವ ಓಕುಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.



ಈ ಸಂದರ್ಭದಲ್ಲಿ ಅಧ್ಯಕ್ಷ ಚಂದ್ರಶೇಖರ್ ಕೆ.ಪಿ, ಪ್ರಧಾನ ಕಾರ್ಯದರ್ಶಿ ಧೀರಜ್ ಮಾಡುರು, ಪ್ರಧಾನ ಅರ್ಚಕರಾದ ಪ್ರಶಾಂತ್ ಶಾಂತಿ, ಗುರುಸ್ವಾಮಿ ಭಾಸ್ಕರ ಕರ್ಕೇರ ಹಾಗೂ ಬಿಜೆಪಿ ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ , ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕುಟು, ಬಿಜೆಪಿ ಮಂಡಲದ ಕಾರ್ಯದರ್ಶಿ ರಮೇಶ್ ಬೆದ್ರುಳಿಕೆ, ದಯಾನಂದ ಬೆಳ್ಳೆರಿ, ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.



