
ಕುಮಾರ ಮಂಗಿಲ ಗುತ್ತುಕುಟುಂಬಿಕರ ವಿಶ್ವಸ್ತ ಸಮಿತಿ ನಡಾರು ಗುತ್ತುವತಿಯಿಂದ ಶ್ರೀ ಮಲರಾಯ ಮಹಿಷಾಂದಾಯ ಪಂಜುರ್ಲಿ ಕಲ್ಲುರ್ಟಿ ದೈವಗಳ ನೇಮೋತ್ಸವ ಫೆಬ್ರವರಿ 24 ಹಾಗೂ 25ರಂದು ಜರುಗಿತು.
ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಕೋಟೆ ಕಾರು ಗ್ರಾಮದ ನಡಾರು ಗುತ್ತು ನಲ್ಲಿರುವ ಕುಮಾರ ಮಂಗಿಲ ಮೂಲ ಕುಟುಂಬಿಕರ ತೆರವಾಡು ಮನೆಯಲ್ಲಿ ನೇಮೋತ್ಸವ ಜರುಗಿತು.

ಫೆಬ್ರವರಿ 23ರಂದು ಸಂಜೆ ತಂತ್ರಿಗಳ ಆಗಮನದ ಬಳಿಕ ರಾತ್ರಿ 7 ಗಂಟೆಗೆ ಪ್ರಾರ್ಥನೆ ಬಿಂಬಗಳ ಜಲಾದಿ ವಾಸ ಪುಣ್ಯಾಹ, ವಾಸ್ತು ರಕ್ಷೋಘ್ನ ಹೋಮ ವಾಸ್ತು ಬಲಿ ಜರುಗಿತು. ಫೆಬ್ರವರಿ 24ರಂದು ಬೆಳಿಗ್ಗೆ ಗಣಪತಿ ಹೋಮ ನೂತನ ಮುಖವಾಡ ಗಳ ಪ್ರತಿಷ್ಠೆ, ಕಲಶಾಭಿಷೇಕ, ನಾಗತಂಬಿಲ ಮುಡಿಪು ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ರಾತ್ರಿ ಮಹಿಷಾಂದಾಯ ನೇಮ , ಕಲ್ಲುರ್ಟಿದೈವದ ಕೋಲ, ಪಂಜುರ್ಲಿ ದೈವದ ಕೋಲ ಜರುಗಿತು. ಫೆಬ್ರವರಿ 25ರಂದು ಧರ್ಮದೈವ ಮಲರಾಯ ನೇಮಬಳಿಕ ಅನ್ನ ಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಕುಮಾರಮಂಗಿಲ ಗುತ್ತು ಕುಟುಂಬಿಕರ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನಡಾರು ಗುತ್ತು, ಕುಟುಂಬದ ಹಿರಿಯರು ತ್ಯಾಂಪಣ್ಣ ರೈ, ಬಿಜೆಪಿ ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ , ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕುಟು, ಬಿಜೆಪಿ ಮಂಡಲದ ಕಾರ್ಯದರ್ಶಿ ರಮೇಶ್ ಬೆದ್ರುಳಿಕೆ, ದಯಾನಂದ ಬೆಳ್ಳೆರಿ, ಕೋಟೆಕಾರು ಪಟ್ಟಣ ಪಂಚಾಯಿತಿಯ ಕೌನ್ಸಿಲರ್ ದಿವ್ಯ ಸತೀಶ್ ಶೆಟ್ಟಿ ನಡಾರು ಗುತ್ತು, ಮಾತೃ ಶಕ್ತಿ ದುರ್ಗಾ ವಾಹಿನಿಯ ಸುಜಾತಾ ಬಾಲಕೃಷ್ಣ ಶೆಟ್ಟಿ. ನದಾರುಗುತ್ತು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.











