
ಪುತ್ತೂರು:ಎ.ವಿ.ಜಿ ಅಸೋಸಿಯೇಟ್ಸ್ ಆಂಡ್ ಎ.ವಿ.ಜಿ.ಕನ್‌ಸ್ಟ್ರಕ್ಷನ್ಸ್, ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್‌ಗಳನ್ನು ಪುತ್ತೂರಿನಲ್ಲಿ ಸ್ಥಾಪಿಸಿ ಮುನ್ನಡೆಸುತ್ತಿರುವ ಆಡಳಿತ ಮಂಡಳಿಯಿಂದ ಸಹಕಾರಿ ಕ್ಷೇತ್ರಕ್ಕೊಂದು ಕೊಡುಗೆಯಾಗಿ ದ.ಕ.ಜಿಲ್ಲಾ ಮಟ್ಟದ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಂಸ್ಥೆಯು ನೆಲ್ಲಿಕಟ್ಟೆಯಲ್ಲಿ ಸೆ.29ರಂದು ಲೋಕಾರ್ಪಣೆಗೊಂಡಿತು.
ಬೆಳಿಗ್ಗೆ ಸೊಸೈಟಿಯ ಕಚೇರಿ ಕಟ್ಟಡದಲ್ಲಿ ಗಣಹೋಮ ನಡೆಯಿತು.ಬಳಿಕ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಬೆಂಗಳೂರುನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ.ಗಂಗಾಧರ ಅವರು ಕಚೇರಿಯನ್ನು ಉದ್ಘಾಟಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭದ್ರತಾ ಕೋಶವನ್ನು ಉದ್ಘಾಟಿಸಿದರು. ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಅವರು ಗಣಕಯಂತ್ರವನ್ನು ಉದ್ಘಾಟಿಸಿದರು. ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ಅವರು ಅಧ್ಯಕ್ಷರ ಕೊಠಡಿ ಉದ್ಘಾಟಿಸಿದರು. ಬಳಿಕ ಉದ್ಘಾಟನೆ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಪ್ರಥಮ ಸಾಲಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ ಈ ಸಂಸ್ಥೆ ಮಹಿಳೆಯರಿಗೆ ಸಾಕಷ್ಟು ಉತ್ತೇಜನೀಯ ಸಂಸ್ಥೆಯಾಗಿದೆ. ಮುಂದಿನ ವರ್ಷ ಕೋಟಿಗಟ್ಟಲೆ ವ್ಯವಹಾರದೊಂದಿಗೆ ಸೊಸೈಟಿಯ ಬೆಳವಣಿಗೆಯಾಗಲಿ ಎಂದು ಶುಭಹಾರೈಸಿದರು.
ಸಂಸ್ಥೆಯ ಚಿಹ್ನೆಯನ್ನು ಅನಾವರಣಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದ ಹುಟ್ಟೂರು. ಇದು ದೇಶಕ್ಕೆ ಮಾದರಿಯಾಗಿರುವುದು ನಮಗೆ ಹೆಮ್ಮೆ. ಇದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ನಮ್ಮ ಜಿಲ್ಲೆಯ ಕೊಡುಗೆ ಅಪಾರ.ಒಂದು ಪಂಚಾಯತ್ ವ್ಯಾಪ್ತಿಯಲ್ಲೇ ಐದಾರು ಮೆಡಿಕಲ್ ಕಾಲೇಜು ಇರುವುದು ಕೂಡಾ ನಮ್ಮ ಜಿಲ್ಲೆಯಲ್ಲಿ. ಸಹಕಾರಿ ಕ್ಷೇತ್ರದ ಗೌರವ ಉಳಿಸಿರುವುದು ಕೂಡಾ ದ.ಕ.ಜಿಲ್ಲೆ. ಇದಕ್ಕೆ ಪೂರಕವಾಗಿ ಎವಿಜಿ ಸೌಹಾರ್ದ ಸಹಕಾರಿ ಸಂಘವೂ ಇದಕ್ಕೆ ಮತ್ತೊಂದು ಕೊಡುಗೆಯಾಗಿದೆ.ಯಾವುದೇ ಉದ್ಯಮ ಮಾಡಲು ಪ್ರಯತ್ನ ಬೇಕು. ಹಣದ ವ್ಯವಹಾರದಲ್ಲಿ ಜಾಗ್ರತೆ ಇರಬೇಕು. ಸಾಲ ಪಡೆದುಕೊಂಡವರು ಮರುಪಾವತಿ ಮಾಡುವ ಜವಾಬ್ದಾರಿಯೂ ಇರಬೇಕು. ಇಂತಹ ಸಂಸ್ಥೆ ಹುಟ್ಟಿದಾಗ ಇದರೊಂದಿಗೆ ಇಲ್ಲಿ ಉದ್ಯೋಗವೂ ಸೃಷ್ಟಿಯಾಗುತ್ತದೆ ಎಂದರು. ನನ್ನಲ್ಲಿ ಉದ್ಯೋಗ ಅರಸಿ ಬಂದವರಿಗೆ ನಾನು ದಾರಿ ತೋರಿಸುವ ಕೆಲಸ ಮಾಡುತ್ತೇನೆ. ಅವರಿಗೆ ಉದ್ಯೋಗ ಸಿಕ್ಕಿದರೆ ನನಗೆರಡು ಓಟು ಸಿಗಬಹುದು ಎಂಬ ನಂಬಿಕೆ. ಒಟ್ಟಿನಲ್ಲಿ ನಿಮ್ಮ ಸಂಸ್ಥೆಗೆ ನಾನು ವೈಯಕ್ತಿಕ ನೆಲೆಯಲ್ಲಿ ಶುಭ ಹಾರೈಸುತ್ತೇನೆ ಎಂದು ಹೇಳಿದ ಶಾಸಕರು, ಎವಿಜಿ ಸೊಸೈಟಿಯ ಇನ್ನಷ್ಟು ಶಾಖೆಗಳು ಉದ್ಘಾಟನೆಯಾಗುವ ಯೋಗಭಾಗ್ಯ ಬರಲಿ ಎಂದರು.
ಇದೆ ಸಂದರ್ಭದಲ್ಲಿ ಬಲ್ನಾಡಿನ ವೀರಪ್ಪ ಗೌಡ ಅವರಿಗೆ ಪ್ರಥಮ ಸಾಲ ಪತ್ರ, ಶಾರದಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಅವರಿಗೆ ಪ್ರಥಮ ಠೇವಣಿ ಪತ್ರವನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡ, ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಪ್ರವರ್ತಕ ಎ.ವಿ.ನಾರಾಯಣ, ಮಾಜಿ ಶಾಸಕ ಸಂಜೀವ ಮಠಂದೂರು, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ.ಗಂಗಾಧರ, ಗೌಡ,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಲ್ಯೊಟ್ಟು,ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ,ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ,ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಮಳುವೇಲು,ನಿರ್ದೇಶಕರಾದ ಸೀತಾರಾಮ ಕೇವಳ, ಗುಡ್ಡಪ್ಪ ಗೌಡ ಬಲ್ಯ, ಟಿ.ಗಂಗಯ್ಯ ಗೌಡ, ಜಯಪ್ರಕಾಶ್ ಕಳುವಾಜೆ, ಎಚ್.ಸುಂದರ ಗೌಡ,ಗಂಗಾಧರ ಎ.ವಿ.,ಪದ್ಮಪ್ಪ ಗೌಡ ಕೆ., ಕೆ.ಮಾಧವ ಗೌಡ, ಮೋಹನ ಜಿ., ವೇದಾವತಿ ಶೀನಪ್ಪ ಗೌಡ ಬೈತ್ತಡ್ಕ, ಉಷಾಲಕ್ಷ್ಮೀ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ ಉಪಸ್ಥಿತರಿದ್ದರು.
