ಕಂಬಳದ ಹಿರಿಯ ಓಟಗಾರ ಪೇಜಾವರ ಭಾಸ್ಕರ್ ಶೆಟ್ಟಿ ನಿಧನ

ಮಂಗಳೂರು: ಕಂಬಳದ ಹಿರಿಯ ಓಟಗಾರರಾದ ಪೇಜಾವರ ಭಾಸ್ಕರ ಶೆಟ್ಟಿಯವರು (74) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬಜ್ಪೆ ಪೆರ್ಕೋಡಿಯ ಪೇಜಾವರ ಭಾಸ್ಕರ ಶೆಟ್ಟಿ 1970ರಲ್ಲಿ ಕಂಬಳ ಓಟಗಾರರಾಗಿ ಪ್ರಸಿದ್ಧಿಯನ್ನು ಪಡೆದಿದ್ದರು. ಬಾಲ್ಯದಿಂದಲೂ ಕಂಬಳ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಕೃಷಿ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಹಲವಾರು ಪ್ರಶಸ್ತಿಯನ್ನು ಪಡೆದಿದ್ದ ಇವರು ಇತ್ತೀಚೆಗೆ ನಡೆದ ಕಂಬಳದಲ್ಲಿ ಹಿರಿಯ ಕಂಬಳ ಓಟಗಾರ ಎಂಬ ಗೌರವಕ್ಕೂ ಪಾತ್ರರಾಗಿದ್ದರು.

ಇವರ ಅಗಲುವಿಕೆಗೆ ಕಂಬಳ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *