
ಪುತ್ತೂರು: ತುಳು ಭಾಷೆಯಲ್ಲಿ ‘ಬಿರ್ದ್ದ ಕಂಬುಲ’ ಹಾಗೂ ಕನ್ನಡ ಭಾಷೆಯಲ್ಲಿ `ವೀರ ಕಂಬಳ’ ಸಿನಿಮಾ ಫೆ.27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತುಳುನಾಡಿನ ಕಲೆಯಾಗಿರುವ ಹೆಮ್ಮೆಯ ಕಂಬಳವನ್ನು ದೇಶ ವಿದೇಶಗಳಲ್ಲಿ ಪಸರಿಸಲು ಈ ಸಿನಿಮಾ ಮಾಡಿದ್ದೇವೆ ಎಂದು ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ,ಹಾಗೂ ಚಿತ್ರದ ನಟ ಶಿವಧೂತ ಗುಳಿಗ ಮತ್ತು ಕಾಂತರ ಚಿತ್ರದ ಕ್ಯಾತಿಯ ಸ್ವರಾಜ್ ಶೆಟ್ಟಿ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಕಂಬಳ ಎಂದಾಗ ಜಾತ್ರೆಯ ರೀತಿಯಲ್ಲಿ ನಡೆಯುತ್ತದೆ. ಈ ಚಿತ್ರವನ್ನು ದುಬೈ, ಪುತ್ತೂರು, ಅವಳಿ ವೀರಪುರುಷರಾದ ಕೋಟಿಚೆನ್ನಯರ ತಾಯಿಯ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲೂ ಚಿತ್ರದ ಚಿತ್ರಿಕರಣ ಮಾಡಿದ್ದೇವೆ ಎಂದ ಅವರು ತುಳುನಾಡಿನ ಜನರು ಸಿನಿಮಾವನ್ನು ಗೆಲ್ಲಿಸಿಕೊಡುವಂತೆ ವಿನಂತಿಸಿದರು. ಚಿತ್ರದಲ್ಲಿ ಕಂಬಳ ಆರಂಭದಿಂದ ಹಿಡಿದು ಕಂಬಳ ನಿಂತು ಹೋದಾಗ ಅದರ ಹೋರಾಟದ ಚಿತ್ರಣ ಮತ್ತು ಕಂಬಳದ ಗೆಲುವು ಕುರಿತು ಸವಿಸ್ತಾರವಾಗಿ ಪ್ರೇಕ್ಷಕರ ಮನಮುಟ್ಟುವಂತೆ ಚಿತ್ರ ನಿರ್ಮಾಣ ಮಾಡಿದ್ದೇವೆ. ಕಂಬಳದ ಕೋಣಗಳನ್ನು ಓಡಿಸುವವರು ಎಲ್ಲರೂ ನಾಯಕರಾಗಿಯೇ ಇರುತ್ತಾರೆ. ಕಂಬಳದ ಗುಣಪಾಲ ಕಡಂಬ, ರಾಜೇಶ ಶೆಟ್ಟಿ, ವಿಜಯ ಕುಮಾರ್ ಕೋಡಿಯಾಲ್ ಬೈಲ್ ವಿಶೇಷ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಎಂದರು.

ತುಳು ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾದ ಚಿತ್ರವಿದು. ತುಳುನಾಡಿನ ಮಣ್ಣಿನ ಸೊಗಡಿನ ಕಥೆ ಈ ಚಿತ್ರದಲ್ಲಿದೆ. ಈ ಚಿತ್ರ ದೇಶವಿದೇಶದಲ್ಲಿ ತಲುಪಲು ಮೊದಲು ತುಳುನಾಡಿನಲ್ಲಿ ಗೆಲ್ಲಿಸಿಕೊಡಿ ಎಂದರು. ಚಿತ್ರದ ಇನ್ನೋರ್ವ ನಟ ಸುಂದರ ರೈ ಮಂದಾರ ಅವರು ಮಾತನಾಡಿ ಸಿನಿಮಾ ಕ್ಷೇತ್ರಕ್ಕೆ ಈ ಚಿತ್ರವೊಂದು ದೊಡ್ಡ ಕೊಡುಗೆಯಾಗಿದೆ ಎಂದರು.
ಚಿತ್ರದಲ್ಲಿ 5 ಹಾಡುಗಳಿವೆ, ಚಿತ್ರದಲ್ಲಿ ಆದಿತ್ಯ, ರಾಧಿಕಾ ಚೇತನ್, ನವೀನ್ ಡಿ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು, ಉಷಾ ಭಂಡಾರಿ, ವೀಣಾ ಪೊನ್ನಪ್ಪ, ಗೀತಾ ಸುರತ್ಕಲ್, ಸುಂದರ ರೈ ಮಂದಾರ, ಸ್ವರಾಜ್ ಶೆಟ್ಟಿ, ದಿವ್ಯ, ಶ್ರೀನಿವಾಸ ಗೌಡ, ಸುರೇಶ್ ಶೆಟ್ಟಿ, ಚೇತನ್ ರೈ ಮಾಣಿ, ಯುವ ಶೆಟ್ಟಿ, ಮೈಮ್ ರಮೇಶ್, ಪ್ರಕಾಶ್ ರೈ, ರವಿಶಂಕರ್, ಶೋಬರಾಜ್, ಸಂತೋಷ್ ಶೆಟ್ಟಿ ಅಭಿಯನಿಸಿದ್ದಾರೆ ಎಂದವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಚಿತ್ರ ನಟ ಸುಂದರ ರೈ ಮಂದಾರ, ಪುತ್ತೂರಿನ ಚಿತ್ರದ ಹಂಚಿಕೆದಾರ ಬಾಲಕೃಷ್ಣ ರೈ ಕುಕ್ಕಾಡಿ ಉಪಸ್ಥಿತರಿದ್ದರು.


