ಕಾಂಗ್ರೆಸ್​​ ಮಾಜಿ ಶಾಸಕ RV ದೇವರಾಜ್ ಹೃದಯಾಘಾತದಿಂದ ನಿಧನ

ಮಾಜಿ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಮಾಜಿ ಅಧ್ಯಕ್ಷ ಆರ್‌.ವಿ. ದೇವರಾಜ್‌ (67) ಅವರು ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಬುಧವಾರ ಜನ್ಮದಿನ ಇದ್ದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನ ಪಡೆಯಲು ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ.

ಮಾಜಿ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಮಾಜಿ ಅಧ್ಯಕ್ಷ ಆರ್‌.ವಿ. ದೇವರಾಜ್‌ (67) ಅವರು ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಬುಧವಾರ ಜನ್ಮದಿನ ಇದ್ದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನ ಪಡೆಯಲು ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ.

ಬೆಂಗಳೂರು : ಸೋಮವಾರ ರಾತ್ರಿ ಮೈಸೂರಿನಲ್ಲಿ ನಿಧನರಾದ ಕಾಂಗ್ರೆಸ್ ಮುಖಂಡ ಆರ್‌.ವಿ. ದೇವರಾಜ್‌ (67), ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನಿಸಿ ಅಲ್ಲೇ ಜೀವನ ಕಟ್ಟಿಕೊಂಡು ಕೊನೆಯವರೆಗೂ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್‌ ನಾಯಕ. ಕಾಂಗ್ರೆಸ್‌ ಪಕ್ಷದ ಶಿಸ್ತಿನ ಸಿಪಾಯಿ.

1957 ರಲ್ಲಿ ಜನಿಸಿದ ಅವರು 3 ಬಾರಿ ಶಾಸಕ, ಒಂದು ಬಾರಿ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ಅವರು ಚಾಮರಾಜಪೇಟೆ ಕ್ಷೇತ್ರವನ್ನು ಎಸ್.ಎಂ. ಕೃಷ್ಣ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ಸುದ್ದಿ ಮಾಡಿದ್ದರು.

ಒಮ್ಮೆಯೂ ಸಚಿವ ಹುದ್ದೆ ಸಿಗಲಿಲ್ಲ:

1989ರಲ್ಲಿ ಮೊದಲ ಬಾರಿಗೆ ಶಾಸಕರಾದ ಅವರು 2 ಬಾರಿ ಕೆಎಸ್ಆರ್ಟಿಸಿ ಅಧ್ಯಕ್ಷ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು.

ಆರ್.ವಿ. ದೇವರಾಜ್ ಅವರ ತಂದೆ ರೊನೂರ್ ವೆಂಕಟೇಶಪ್ಪನವರು ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ತರಕಾರಿ ವ್ಯಾಪಾರಿಯಾಗಿದ್ದರು. ಯುವ ಕಾಂಗ್ರೆಸ್ ಸದಸ್ಯರಾಗಿ, ಪದಾಧಿಕಾರಿಯಾಗಿ, ಬೆಂಗಳೂರು ನಗರ ಸೇವಾದಳದ ಅಧ್ಯಕ್ಷರಾಗಿ ಹಂತ ಹಂತವಾಗಿ ಬೆಳೆದು ಎಐಸಿಸಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆದವರು.

1989ರಲ್ಲಿ ಚಾಮರಾಜಪೇಟೆಯಲ್ಲಿ ಮೊದಲ ಬಾರಿಗೆ ಶಾಸಕರಾದ ಅವರು 1994 ರಲ್ಲಿ ಪ್ರಮೀಳಾ ನೇಸರ್ಗಿ ವಿರುದ್ಧ ಸೋತಿದ್ದರು. 1999 ರಲ್ಲಿ ಪ್ರಮೀಳಾ ನೇಸರ್ಗಿ ವಿರುದ್ಧ ಗೆದ್ದು ಸೋಲಿನ ಸೇಡು ತೀರಿಸಿಕೊಂಡಿದ್ದರು.

2004 ರಲ್ಲಿ ಗೆಲ್ಲುವ ಎಲ್ಲಾ ಅವಕಾಶಗಳಿದ್ದರೂ ಎಸ್.ಎಂ. ಕೃಷ್ಣ ಅವರಿಗಾಗಿ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆಗ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಚಂದ್ರು ವಿರುದ್ಧ ಗೆದ್ದಿದ್ದರು.

ಬಳಿಕ ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿ ತೆರಳಿ ರಾಜೀನಾಮೆ ನೀಡಿದರೂ ಉಪ ಚುನಾವಣೆಯಲ್ಲಿ ದೇವರಾಜ್‌ ಸ್ಪರ್ಧಿಸಲಿಲ್ಲ.

ಬದಲಿಗೆ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಚಿಕ್ಕಪೇಟೆಯಿಂದ ಸ್ಪರ್ಧಿಸಿದ್ದರು. 2008 ರಲ್ಲಿ ಚಿಕ್ಕಪೇಟೆಯಿಂದ ಸ್ಪರ್ಧಿಸಿದ್ದ ಅವರು ಡಾ. ಹೇಮಚಂದ್ರ ಸಾಗರ್ ವಿರುದ್ಧ ಸೋತಿದ್ದರು. 2013ರಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ ವಿರುದ್ಧ ಗೆದ್ದು 2016 ರಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. ಆದರೆ, 2018 ಹಾಗೂ 2023ರ ಚುನಾವಣೆಯಲ್ಲಿ ಉದಯ್ ಗರುಡಾಚಾರ್ ವಿರುದ್ಧ ಸೋತಿದ್ದರು. ಅಂದಿನಿಂದ ಅಷ್ಟಾಗಿ ರಾಜ್ಯದ ಮುಖ್ಯವಾಹಿನಿ ರಾಜಕಾರಣದಲ್ಲಿ ಕಾಣಿಸಿಕೊಂಡಿರಲಿಲ್ಲ.

ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​​ ಮಾಜಿ ಶಾಸಕ ಆರ್​​ವಿ ದೇವರಾಜ್​ ನಿಧನ ಹೊಂದಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಮೈಸೂರಿನಲ್ಲಿರುವ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ವೈದ್ಯರು ಕುಟುಂಬಸ್ಥರಿಗೆ ಆರ್​​ವಿ ದೇವರಾಜ್ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.

ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​​ ಮಾಜಿ ಶಾಸಕ ಆರ್​.ವಿ. ದೇವರಾಜ್ ಹೃದಯಾಘಾತದಿಂದ

ಸೋಮವಾರ ನಿಧನ ಹೊಂದಿದ್ದಾರೆ. ಡಿ.3ರಂದು ಜನ್ಮದಿನ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಮೈಸೂರಿನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ಸದ್ಯ ವೈದ್ಯರು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

1957ರ ಡಿಸೆಂಬರ್ 3ರಂದು ಆರ್​.ವಿ.ದೇವರಾಜ್ ಜನಿಸಿದ್ದರು. ಶಿಕ್ಷಣದ ಬಳಿಕ 1989-99ರಲ್ಲಿ  ಚಾಮರಾಜಪೇಟೆ ಶಾಸಕರಾಗಿದ್ದರು. 2000ರಿಂದ ಅಕ್ಟೋಬರ್ 2007ರವರೆಗೆ ಕೆಎಸ್​​ಆರ್​​​ಟಿಸಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಎಐಸಿಸಿ ಸದಸ್ಯರಾಗಿದ್ದರು.

ಸಮಯದಲ್ಲಿ ಕಾಂಗ್ರೆಸ್​ಗೆ ಪೂರಕವಾಗಿದ್ದ2008ರಲ್ಲಿ ಕ್ಷೇತ್ರ ಮರುವಿಂಗಡನೆಯಾದಾಗ ಎಸ್​ಎಂ ಕೃಷ್ಣಗೆ ಬೆಂಗಳೂರಲ್ಲಿ ಸ್ಪರ್ಧಿಸಲು ಕ್ಷೇತ್ರ ಬಿಟ್ಟುಕೊಡುತ್ತಾರೆ. ಚಾಮರಾಜಪೇಟೆ ಕ್ಷೇತ್ರ ಆ ಸಮಯದಲ್ಲಿ ಕಾಂಗ್ರೆಸ್​ಗೆ ಪೂರಕವಾಗಿತ್ತು. ಎಸ್​.ಕೃಷ್ಣ ಸಿಎಂ ಆಗಿದ್ದಾಗ ಆರ್​.ವಿ ದೇವರಾಜ್ ಆಪ್ತರಾಗಿದ್ದರು. ಬಳಿಕ ಚಿಕ್ಕಪೇಟೆ ಕ್ಷೇತ್ರ ಚುನಾವಣೆ ಸ್ಪರ್ಧಿಸಿದ್ದರು.

ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಚಾಮರಾಜಪೇಟೆ ಕ್ಷೇತ್ರದ ಕ್ಷೇತ್ರ ಪುನರ್ವಿಂಗಡಣೆ ನಂತರ ಚಿಕ್ಕಪೇಟೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಬಳಿಕ 2016ರಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು.

News Editor

Learn More →

Leave a Reply

Your email address will not be published. Required fields are marked *