ಉಳ್ಳಾಲ : ಕೋಟೆಕಾರ್ ಸಂಕೊಳಿಗೆ ಯಲ್ಲಿ ‘ಓಶಿಯನ್ ಫಿಶ್ ರೆಸ್ಟೋ’ ಉದ್ಘಾಟನೆ

ಸಂಕೊಳಿಗೆ ಯಲ್ಲಿ ‘ಓಶಿಯನ್ ಫಿಶ್ ರೆಸ್ಟೋ’ ಉದ್ಘಾಟನೆ

ಸಂಕೊಳಿಗೆ ಪ್ರದೇಶದ ರೋಹನ್ ಪಾರ್ಕ್ ಎದುರು ‘ಓಶಿಯನ್ ಫಿಶ್ ರೆಸ್ಟೋ’ ಎಂಬ ಹೊಸ ಹೊಟೇಲ್‌ನ ಉದ್ಘಾಟನೆ ಸೋಮವಾರ ನಡೆಯಿತು.

ಈ ರೆಸ್ಟೋರೆಂಟ್‌ನಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಆಹಾರ, ಚಹಾ–ತಿಂಡಿ, ಗಂಜಿ ಊಟ, ಮಟನ್ ಸೂಪ್ ಸೇರಿದಂತೆ ವಿವಿಧ ರುಚಿಕರ ಪದಾರ್ಥಗಳು ಲಭ್ಯವಿವೆ.

ಈ ರೆಸ್ಟೋರೆಂಟ್‌ನ ಪಾಲುದಾರರು ಹರೀಶ್ ಶೆಟ್ಟಿ ದೊಡ್ಡಮನೆ ತಲಪಾಡಿ ಮತ್ತು ನಿತೇಶ್ ಪೂಜಾರಿ ಕಾರ್ಕಳ ಆಗಿದ್ದು,
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಚಂದ್ರಶೇಖರ ಉಚ್ಚಿಲ್ ಅವರು ಭಾಗವಹಿಸಿ ಉದ್ಘಾಟನೆ ನೆರವೇರಿಸಿದರು. ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಯಶು ಪಕ್ಕಳ , ಪ್ರಶಾಂತ್ ಚೌಟ, ಗೋಪಾಲ ಕೃಷ್ಣ ಮೇಲoಟ , ಪ್ರಕಾಶ್ ಶೆಟ್ಟಿ ದೊಡ್ಡಮನೆ,ಲತಾ ಹರೀಶ್ ಶೆಟ್ಟಿ ಹಾಗೂ ಸುಚೇತಾ ನಿತೇಶ್ ಪೂಜಾರಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಯ್ ನಾಯ್ಕ್ ತಲಪಾಡಿ, Dr ಜಯಪಾಲ್ ಶೆಟ್ಟಿ ತಲಪಾಡಿ ದೊಡ್ಡಮನೆ, ರವೀಂದ್ರನಾಥ್ ಶೆಟ್ಟಿ ದೊಡ್ಡಮನೆ, ರಾಜೇಶ್ ಉಚ್ಚಿಲ್ ಮಾಜಿ ಅಧ್ಯಕ್ಷರು ಸೋಮೇಶ್ವರ ಗ್ರಾಮ ಪಂಚಾಯತ್ , ಸಂತೋಷ್ ರೈ ಕೋಟೆಕಾರ್ ಗುತ್ತು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಬಂದು ಮಿತ್ರರು ಹಾಗೂ ಸ್ಥಳೀಯರು ಹೊಸ ರೆಸ್ಟೋರೆಂಟ್ ಯಶಸ್ಸಿಗೆ ಶುಭಾಶಯ ಕೋರಿದರು.

Star Of Kudla

Learn More →

Leave a Reply

Your email address will not be published. Required fields are marked *