ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 6 ಸಚಿವರು, 66 ಶಾಸಕರು, 28 ವಿಧಾನಪರಿಷತ್ ಸದಸ್ಯರು — ಪಟ್ಟಿಯನ್ನು ಪ್ರಕಟಿಸಿದ ಲೋಕಾಯುಕ್ತ

ಬೆಂಗಳೂರು:
ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22(1) ಮತ್ತು (2) ಪ್ರಕಾರ, ಪ್ರತಿ ವರ್ಷ ಜೂನ್ 30ರೊಳಗೆ ಶಾಸಕ ಹಾಗೂ ವಿಧಾನಪರಿಷತ್ ಸದಸ್ಯರು ತಮ್ಮ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸುವುದು ಕಡ್ಡಾಯ. ಆದರೆ 2024–25ನೇ ಸಾಲಿನ ಆಸ್ತಿ ವಿವರವನ್ನು ಸಲ್ಲಿಸದೆ 6 ಮಂದಿ ಸಚಿವರು, 66 ಮಂದಿ ಶಾಸಕರು ಹಾಗೂ 28 ಮಂದಿ ವಿಧಾನಪರಿಷತ್ ಸದಸ್ಯರು ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಲೋಕಾಯುಕ್ತವು ಈ ಕುರಿತು ವಿವರವಾದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರಿಂದ ಹಿಡಿದು ವಿರೋಧ ಪಕ್ಷದ ಬಿಜೆಪಿಯವರವರೆಗೂ ಹಲವರು ಇದರಲ್ಲಿದ್ದಾರೆ.

ಲೋಕಾಯುಕ್ತ ಮೂಲಗಳ ಪ್ರಕಾರ, ಈ ನಾಯಕರಿಗೆ ಶೀಘ್ರದಲ್ಲೇ ನೋಟಿಸ್ ನೀಡಲಾಗುವ ಸಾಧ್ಯತೆ ಇದೆ. ನಿಯಮಾನುಸಾರ ಆಸ್ತಿ ವಿವರ ಸಲ್ಲಿಸದವರು ಲೋಕಾಯುಕ್ತ ತನಿಖೆಯ ಅಡಿಯಲ್ಲಿ ಬರುವ ಸಾಧ್ಯತೆಯೂ ಇದೆ.

ಜನಪ್ರತಿನಿಧಿಗಳೇ ಕಾನೂನು ಉಲ್ಲಂಘನೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *