ಪುತ್ತೂರು ತಾಲೂಕು ಮಟ್ಟದ ರಾಜ್ಯೋತ್ಸವ ಸನ್ಮಾನ – 12 ಸಾಧಕರು

ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿಯ ಆಶ್ರಯದಲ್ಲಿ ನವೆಂಬರ್ 1, 2025 ರಂದು ನಡೆಯಲಿರುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ 12 ಮಂದಿ ಸಾಧಕರು ಮತ್ತು “ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.

ಈ ಕುರಿತು ತೀರ್ಮಾನವು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಕೆ.ಎಸ್. ಅವರ ಮಾರ್ಗದರ್ಶನದಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಮಿತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ, ಪೌರಾಯುಕ್ತರು, ತಾಲೂಕು ಪಂಚಾಯತ್ ಪ್ರತಿನಿಧಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.

ರಾಜ್ಯೋತ್ಸವ ದಿನದಂದು ಸನ್ಮಾನಕ್ಕೆ ಆಯ್ಕೆಯಾದ ಸಾಧಕರು ಹಾಗೂ ಸಂಸ್ಥೆ ಹೀಗಿವೆ:

ಡಾ. ನರೇಂದ್ರ ರೈ ದೇರ್ಲ, ಹಿರಿಯ ಸಾಹಿತಿ, ಕೆಯ್ಯರು – ಸಾಹಿತ್ಯ
ಡಾ. ಜಿ.ಸಿ. ಅಡಿಗ, ತಜ್ಞ ವೈದ್ಯರು, ಚೇತನ ಆಸ್ಪತ್ರೆ, ಪುತ್ತೂರು – ವೈದ್ಯಕೀಯ
ಪ್ರೊ. ಝೇವಿಯರ್ ಡಿ’ಸೋಜಾ, ನಿವೃತ್ತ ಪ್ರಾಂಶುಪಾಲರು – ಶಿಕ್ಷಣ
ಡಾ. ರಾಜೇಶ್ ಬೆಜ್ಜಂಗಳ, ಪ್ರಾಧ್ಯಾಪಕರು, ಬನ್ನೂರು – ಸಾಹಿತ್ಯ
ಉದಯಕುಮಾರ್ ಯು.ಎಲ್., ಪತ್ರಕರ್ತರು, ಉಪ್ಪಿನಂಗಡಿ – ಪತ್ರಿಕೋದ್ಯಮ
ಶಿಲ್ಪಿ ಎಂ. ವಾಸುದೇವ ಆಚಾರ್ಯ, ಬೆದ್ರಾಳ, ಕೆಮ್ಮಿಂಜೆ – ಶಿಲ್ಪಕಲೆ
ಅಬೂಬಕ್ಕರ್ ಮುಲಾರ್, ಅಜ್ಜಿಕಟ್ಟೆ, ಕುರಿಯ – ಸಮಾಜಸೇವೆ
ರಮೇಶ್ ಉಳಯ, ಶಿಕ್ಷಕರು, ಸಹಿಪ್ರಾ ಶಾಲೆ, ದರ್ಬೆ – ಶಿಕ್ಷಣ
ಸಂಶುದ್ದೀನ್ ಸಾಲ್ಮರ, ಪಂಜಳ ಜಂಕ್ಷನ್, ನರಿಮೊಗ್ರು – ಪಾರಂಪರಿಕ ವೈದ್ಯಕೀಯ/ಸಮಾಜಸೇವೆ
ಬಾಲಕೃಷ್ಣ ಪೂಜಾರಿ ಪಲ್ಲತ್ತಾರ್, ಕುಡಿಪ್ಪಾಡಿ – ದೈವಾರಾಧನೆ
ವಿನೋದ್ ರೈ ಸೊರಕೆ, ಸರ್ವ – ಯಕ್ಷಗಾನ
ಕು. ಬಿ. ಪವಿತ್ರ ಹೆಗ್ಡೆ, ಪಡ್ಡಾಯೂರು, ವಡೂರು – ರಂಗಭೂಮಿ
ಜೆ.ಸಿ.ಐ. ಪುತ್ತೂರು (ಪ್ರಸ್ತುತ ಅಧ್ಯಕ್ಷರು ಶ್ರೀ ಭಾಗೇಶ್ ರೈ, ವಿದ್ಯಾಮಾತ ಅಕಾಡೆಮಿ) – ಸಂಘ/ಸಂಸ್ಥೆ

Star Of Kudla

Learn More →

Leave a Reply

Your email address will not be published. Required fields are marked *