ಜಾರಿ ನಿರ್ದೇಶನಾಲಯ (ಇ.ಡಿ.)ದ ಪರ ಹೈಕೋರ್ಟ್ ವಕೀಲರಾಗಿ ಪುತ್ತೂರಿನ ರಾಜಾರಾಮ ಸೂರ್ಯಂಬೈಲ್ ನೇಮಕ

ಮಂಗಳೂರು: ಕೇಂದ್ರ ಸರಕಾರದ ಆಧೀನದಲ್ಲಿ ಬರುವ ಜಾರಿ ನಿರ್ದೇಶನಾಲಯ (ಇ.ಡಿ.)ದ ಪರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಲು ವಕೀಲರಾಗಿ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಸೂರ್ಯಂಬೈಲು ನಿವಾಸಿ, ಪ್ರಸ್ತುತ ಬೆಂಗಳೂರಿನ ಕರ್ನಾಟಕ ಹೈಕೋರ್ಟ್‌ನ ವಕೀಲರಾದ ರಾಜಾರಾಮ ಸೂರ್ಯಂಬೈಲ್ ಕೇಂದ್ರದಿಂದ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.
ಕರ್ನಾಟಕ ಹೈಕೋರ್ಟ್ ಬೆಂಗಳೂರು ವಿಭಾಗಕ್ಕೆ ನ್ಯಾಯವಾದಿಗಳನ್ನು ನೇಮಿಸಲಾಗಿದ್ದು ಅವರಲ್ಲಿ ರಾಜಾರಾಮ ಸೂರ್ಯಂಬೈಲ್ ಓರ್ವರಾಗಿದ್ದು, ಪೆರ್ಲ ಸತ್ಯನಾರಾಯಣ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ, ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ವಿವೇಕಾನಂದ ಪದವಿ ಕಾಲೇಜಿನಲ್ಲಿ ಪದವಿ, ಎಸ್‌ಡಿಎಂ ಲಾ ಕಾಲೇಜು ಮಂಗಳೂರಿನಲ್ಲಿ ಎಲ್‌ಎಲ್‌ಬಿ, ಎಲ್‌ಎಲ್‌ಮ್ ಉನ್ನತ ಶಿಕ್ಷಣವನ್ನು ಮಾಡಿರುತ್ತಾರೆ.
ಕಳೆದ 10 ವರ್ಷಗಳಿಂದ ಇವರು ಕೇಂದ್ರ ಸರಕಾರದ ಪರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಬಿಡಿಎ ವಕೀಲರಾಗಿ, ಅರ್ಬನ್‌ ಡೆವಲಪ್‌ಮೆಂಟ್,ವಾಟರ್ ಸಪ್ಲಾಯ್, ಸಿವೇಜ್‌ ಬೋರ್ಡ್‌ನ ಹೈಕೋರ್ಟ್ ವಕೀಲರಾಗಿಯೂ ಅನುಭವವಿರುವ ಇವರು ಕೇಂದ್ರ ಸರಕಾರದ ಪರವಾಗಿ ಬ್ಯಾಂಕಿಂಗ್ ಸಮಸ್ಯೆಗಳ ಕುರಿತು ಹಲವು ವರ್ಷಗಳಿಂದ ಹೈಕೋರ್ಟ್‌ನಲ್ಲಿ ನ್ಯಾಯವಾದಿಗಳಾಗಿದ್ದು . ಪೆರ್ಲ ಸತ್ಯನಾರಾಯಣ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕ ಬಿ. ಎಸ್. ಆರ್. ನರಸಿಂಹ ಭಟ್ ಮತ್ತು ಮನೋರಮಾ ದಂಪತಿ ಪುತ್ರರಾಗಿರುವ ಇವರು ಪತ್ನಿ ಶ್ರೀವಿದ್ಯಾ ಹಾಗೂ ಪುತ್ರಿಯಾದ ಈಶಾನಿ ಮತ್ತು ಶಿವಾನಿರವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನ್ಯಾಯವಾದಿಗಳಾಗಿ ಇರುವ ಇವರ ಸಾಧನೆಗೆ ಕುಟುಂಬ ವರ್ಗ, ಬಂಧು ಮಿತ್ರರು ಶುಭ ಹಾರೈಸಿ ಸಂತಸ ವ್ಯಕ್ತಪಡಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *